ಕಿಸಾನ್ ಸಂಘ ಮತ್ತು ಕೃಷಿಕ ಸಮಾಜ ವತಿಯಿಂದ ಕಾಡುಪ್ರಾಣಿ ಹಾವಳಿ ತಡೆ,ಮಾರ್ಗೋಪಾಯ ಬಗ್ಗೆ ಕೃಷಿಕರ ಸಮಾಲೋಚನೆ | ಕಾಡುಪ್ರಾಣಿ ಹಾವಳಿ ಮೀತಿ ಮೀರಿದ್ದು ಸರ್ಕಾರ,ಇಲಾಖೆ ಮಧ್ಯಪ್ರವೇಶಕ್ಕೆ ಕೃಷಿಕರ ಒತ್ತಾಯ

Picture of Savistara

Savistara

Bureau Report

ಸುಳ್ಯ: ಕಾಡಾನೆ ದಾಳಿ ಮತ್ತು ಇತರ ವನ್ಯ ಪ್ರಾಣಿಗಳ ನಿರಂತರ ಹಾವಳಿಯಿಂದ ಕೃಷಿ ನಾಶವಾಗುತ್ತಿದ್ದು ಕೃಷಿಕರು ಸಂಕಷ್ಟದಲ್ಲಿದ್ದು ಅಲ್ಲದೆ ಸುಳ್ಯ ಹೆಚ್ಚಿನ ಭಾಗದಲ್ಲಿ ಆನೆ, ವನ್ಯ ಪ್ರಾಣಿಗಳು ಕೃಷಿ ಹಾನಿ ಮಾಡುವುದನ್ನು ತಡೆಯಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಸರಕಾರವನ್ನು ಒತ್ತಾಯಿಸಿದ್ದಾರೆ.

ಸುಳ್ಯ ತಾಲೂಕು ಕೃಷಿಕ ಸಮಾಜ ಮತ್ತು ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ವತಿಯಿಂದ ಸುಳ್ಯ ಸಿಎ ಬ್ಯಾಂಕ್‌ ಸಭಾಂಗಣದಲ್ಲಿ ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟುವ ಬಗ್ಗೆ ಮಾರ್ಗೋಪಾಯಗಳ ಕುರಿತು ಕೃಷಿಕ ಸಮಾಲೋಚನಾ ಸಭೆ ನಡೆಯಿತುಕಾಡಾನೆ,ಇತರೆ ಪ್ರಾಣಿಗಳು ತಡೆಯಲು ಕಾಡಂಚಿನಲ್ಲಿ ಸೋಲಾರ್ ಬೇಲಿ ಅವಶ್ಯಕತೆ, ಸಣ್ಣ, ಮಧ್ಯಮ ವರ್ಗದ ಕೃಷಿಕರ ತೋಟಗಳಿಗೆ ಸರಕಾರ ಬೇಲಿ ನಿರ್ಮಾಣಕ್ಕೆ ನೀಡುವ ಸಹಾಯ ಧನ ನೀಡುವಂತೆ ಆಗ್ರಹಿಸಿದರು.

ಕೃಷಿಗೆ ಪ್ರಾಣಿಗಳ ಹಾನಿ ನಷ್ಟಕ್ಕೆ ಪರಿಹಾರ ಸಿಗುವಂತಾಗಬೇಕು ಮತ್ತು ಪರಿಹಾರ ಕಡಿತ ಮಾಡದಂತೆ ಒತ್ತಾಯಿಸಿದರು.ಭೆಯಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ‘ವನ್ಯ ಪ್ರಾಣಿಗಳು ಕೃಷಿ ಹಾನಿ ಮಾಡಿದರೆ ಪರಿಹಾರ ನೀಡಲಾಗುತ್ತದೆಯೆಂದರು ಇ-ಪರಿಹಾ‌ರ್ ಆಪ್‌ನಲ್ಲಿ ಅಪ್ ಲೋಡ್ ಮಾಡಿ ಆನ್ ಲೈನ್ ಮೂಲಕ ಪರಿಹಾರ ನೀಡಲಾಗುತ್ತದೆಯೆಂದರುಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್.ಬಿ.ಎಂ.ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ ಅಧ್ಯಕ್ಷತೆ ವಹಿಸಿದ್ದರು.ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಮೋಹನ್‌ ರಾಮ್ ಸುಳ್ಳಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಚಂದ್ರಾ ಕೋಲ್ಟಾರ್, ಭಾಕಿಸಂ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ರಾಯ, ಭಾಕಿಸಂ ಜಿಲ್ಲಾ ಕಾರ್ಯದರ್ಶಿ ರಾಮ್ ಪ್ರಸಾದ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚೇತನ್ ಅಡ್ತಲೆ, ಶ್ರೀಹರಿ ಮಂಡೆಕೋಲು, ಶಿವಾನಂದ ಕುಕ್ಕುಂಬಳ, ಕಿಶೋರ್ ಕುಮಾರ್ ಉಳುವಾರು, ವಿನಯಕುಮಾ‌ರ್ ಕಂದಡ್ಕ,ಅಣ್ಣಾಜಿ ಗೌಡ,ಅವಿನಾಶ್ ಕುರುಂಜಿ, ನಾರಾಯಣ ಎಸ್.ಎಂ, ಕಿಶನ್ ಜಬಳೆ ಪುರುಷೋತ್ತಮ ಕಿರ್ಲಾಯ, ಗುಣವತಿ ಕೊಲ್ಲಂತಡ್ಕ ಲೀಲಾವತಿ ಅರಂಬೂರು, ಪುಷ್ಪಾ ಮೇದಪ್ಪ ಜಗನ್ನಾಥ ಜಯನಗರ, ಸಂದೀಪ್ ಮದುವೆಗದ್ದೆ, ಬಾಲಚಂದ್ರ ಕಲ್ಬರ್ಪೆ, ಸುದರ್ಶನ ಪಾತಿಕಲ್ಲು, ಕರುಣಾಕರ ಎ.ಜಿ ಉಪಸ್ಥಿತರಿದ್ದರುಭಾಕಿಸಂ ಸುಳ್ಯ ತಾಲೂಕು ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಸ್ವಾಗತಿಸಿ, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಕಿಸಂ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಭಟ್ ವಂದಿಸಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!