RSS ದೇಶಭಕ್ತಿಗೆ ಸರ್ಟಿಫಿಕೇಟ್ ಕೊಡೋ ಯೋಗ್ಯತೆ ಕಾಂಗ್ರೆಸ್ಸಿಗಿಲ್ಲ… ಸಿ.ಟಿ.ರವಿ

Picture of Savistara

Savistara

Bureau Report

ಚಿಕ್ಕಮಗಳೂರು: ಆರ್‌ಎಸ್‌ಎಸ್‌ ದೇಶಭಕ್ತಿಗೆ ಸರ್ಟಿಫಿಕೇಟ್ ಕೊಡೋ ಯೋಗ್ಯತೆ ಕಾಂಗ್ರೆಸ್‌ಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು.ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವುದಾಗಿ ಸಚಿವ ಪ್ರೀಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಶಬ್ದ ಪ್ರಯೋಗ ಮಾಡಬೇಕೋ, ಬೇಡೋ.. ಕೆಲವರಿಗೆ ಇದು (ತಲೆ) ಸ್ಪಲ್ಪ ವ್ಯತ್ಯಾಸ ಆಗುತ್ತೆ ಏನೇನೋ ಮಾತನಾಡುತ್ತಾರೆ. ಅದು ಸರಿ ಇದ್ದಿದ್ರೆ ಹೀಗೆಲ್ಲಾ ಮಾತನಾಡುತ್ತಾ ಇರಲಿಲ್ಲ ಎಂದರು.ಪ್ರಿಯಾಂಕ ಖರ್ಗೆ ಮಾತ್ರವಲ್ಲ, ಕಾಂಗ್ರೆಸ್ ಡಿಎನ್‌ಎಯಲ್ಲಿ ಸುಳ್ಳು ಬಂದಿದೆ. ಗಾಂಧಿ ಹತ್ಯೆ ಆರೋಪದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ರು, ಮೂರು ತನಿಖೆಯಲ್ಲಿ ಗಾಂಧಿ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಪಾತ್ರವಿಲ್ಲ ಅನ್ನೋದು ಸಾಬಿತಾಯ್ತು, ನೆಹರು ಸರ್ಕಾರವೇ ಆರ್‌ಎಸ್‌ಎಸ್‌ ಬ್ಯಾನ್ ವಾಪಸ್ಸು ಪಡೆದುಕೊಳ್ತು ಎಂದು ಹೇಳಿದರು.ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರರ ಬಾಯಲ್ಲಿ ಎಷ್ಟು ಸುಳ್ಳು ಬರುತ್ತೇ ಅಂತ ಸಾಬೀತಾಯ್ತು. ಎರಡನೇ ಬಾರಿ ಬ್ಯಾನ್ ಮಾಡಿದ್ದು ತುರ್ತು ಪರಿಸ್ಥಿತಿಯಲ್ಲಿ, ತುರ್ತು ಪರಿಸ್ಥಿತಿ ಜತೆ ಇಂದಿರಾಗಾಂಧಿ ಅಧಿಕಾರವೂ ಹೊಯ್ತು ಎಂದರು.

ಮೂರನೇ ಬಾರಿ ಬ್ಯಾನ್ ಮಾಡಿದ್ದು ವಿವಾದಾಸ್ಪದ ಕಟ್ಟಡ ಬಾಬರಿ ಮಸೀದಿ ದ್ವಂಸವಾದಾಗ, ಬಾಬರ್ ಇಲ್ಲಿ ಹುಟ್ಟಿಲ್ಲ ಆದರೆ, ಕಾಂಗ್ರೆಸ್‌ಗೆ ರಾಮನಿಗಿಂತ ಬಾಬ‌ರ್ ಮೇಲೆ ಪ್ರೀತಿ ಜಾಸ್ತಿ, ಮೂರು ಸಂದರ್ಭದಲ್ಲೂ ಆರ್‌ಎಸ್‌ಎಸ್‌ ಮೇಲಿನ ಆರೋಪ ಸಾಭೀತು ಮಾಡಲು ಕಾಂಗ್ರೆಸ್‌ಗೆ ಆಗಿಲ್ಲ. ೧೯೬೩ರ ಗಣರಾಜ್ಯೋತ್ಸವ ಪೆರಡ್‌ನಲ್ಲಿ ಪೊಲೀಸ್‌, ಮಿಲಿಟರಿ ಹೊರತುಪಡಿಸಿ ಭಾಗವಹಿಸಿದ ಸಂಘಟನೆ ಆರ್‌ಎಸ್‌ಎಸ್‌. ಅಂದಿನ ಪ್ರಧಾನಮಂತ್ರಿ ನೆಹರು, ಅದೇ ಕಾಂಗ್ರೆಸ್ ಪಕ್ಷವಿದದ್ದು ಎಂದ ಅವರು, ಅಂಬೇಡ್ಕ‌ರ್ ಹೆಸರು ಹೇಳುವ ಯೋಗ್ಯತೆಯೂ ಕಾಂಗ್ರೆಸ್ ಪಕ್ಷಕಿಲ್ಲ ಎಂದರು.ಎಂಎಲ್‌ಸಿ ರವಿಕುಮಾರ್ ಅಶ್ಲೀಲ ಪದಬಳಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಇದು ಟೂಲ್‌ಕಿಟ್ ರಾಜಕಾರಣದ ಒಂದು ಭಾಗ, ಕಾಂಗ್ರೆಸ್ಸಿನದ್ದು, ದಿನ ಬೆಳಗಾದರೇ ಭ್ರಷ್ಟಚಾರ, ಲೋಕಾಯುಕ್ತ ಹೆಸರಿನಲ್ಲಿ ವಸೂಲಿಗೆ ಐಪಿಎಸ್‌ ಅಧಿಕಾರಿಯೇ ನಿಲ್ಲುತ್ತಾರೆ. ಇದು ಕಾಂಗ್ರೆಸ್‌ಗೆ ಗಂಭೀರವಾದ ವಿಷಯವೇ ಅಲ್ಲ. ಪಾಟೀಲರು ಮನೆ ಬೇಕು ಅಂದರೇ ಲಂಚ ಕೊಡಬೇಕು ಅಂತಾರೆ, ಇದು ಅವರಿಗೆ ಗಂಭೀರವಲ್ಲ. ಇದನ್ನೆಲ್ಲಾ ಬದಿಗೆ ಸರಿಸಲು ಖರ್ಗೆ ಅಂಥವರು ಆರ್‌ಎಸ್‌ಎಸ್ ವಿಷಯ ಮುಂದಿಡುತ್ತಾರೆ. ಅದನ್ನು ಬದಿಗೆ ಸರಿಸಲು ರವಿಕುಮಾರ್ ಹೇಳಿದ್ದಾರೆಂದು ಕ್ರಿಯೇಟ್ ಮಾಡಿದ್ದಾರೆ ಅನ್ಸುತ್ತೆ ಎಂದರು.

ಟೂಲ್‌ಕಿಟ್ ರಾಜಕಾರಣದ ಭಾಗವಾಗಿ ವಿಷಯಾಂತರಗೊಳಿಸಬೇಕು, ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಬದಿಗೆ ಹೋಯ್ತಾ, ಆಡಳಿತ ಪಕ್ಷದ ಶಾಸಕರ ಅಸಹನೆ ಬದಿಗೆ ಸರಿಸಲು ಈ ರೀತಿಯ ಟೂಲ್‌ಕಿಟ್ ರಾಜಕಾರಣ ಮಾಡುತ್ತಿದ್ದಾರೆ. ನಾನಂತು ಯಾವ ಮಾಧ್ಯಮದಲ್ಲೂ ರವಿಕುಮಾರ್ ಅವರ ಹೇಳಿಕೆ ಕೇಳಿಲ್ಲ, ನೋಡಿಲ್ಲ ಎಂದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!