ಶಿವಮೊಗ್ಗ ರಾಗಿಗುಡ್ಡ ಬಡಾವಣೆಯಲ್ಲಿ ಗಣೇಶ ಮೂರ್ತಿ,ನಾಗರ ಕಟ್ಟೆಗೆ ಹಾನಿ | ಸ್ಥಳಕ್ಕೆ ಪರಿಷತ್ ಸದಸ್ಯ ಡಾ. ಸರ್ಜಿ ಭೇಟಿ,ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಇಲಾಖೆಗೆ ಒತ್ತಾಯ

Picture of Savistara

Savistara

Bureau Report

ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಿನ್ನೆ ಅನ್ಯಕೋಮಿನ ಕೆಲ ಕಿಡಿಗೇಡಿಗಳು ನಗರದಲ್ಲಿ ಶಾಂತಿ ಸೌಹಾರ್ದತೆಯನ್ನು ಕೆಡಿಸುವ ಸಲುವಾಗಿ ಬಡಾವಣೆಯಲ್ಲಿ ಇದ್ದ ವಿಘ್ನ ನಿವಾರಕ ಗಣೇಶನ ಮೂರ್ತಿ ಅನ್ನು ಕಾಲಿನಿಂದ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಬಿಸಾಡಿ ಹೋಗಿರುವುದು ಹಿಂದೂಗಳ ಭಾವನೆಗೆ ಧಕ್ಕೆಯಾಗಿದ್ದು ಇಂದು ಘಟನೆ ನಡೆದ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಭೇಟಿ ನೀಡಿ ನಿವಾಸಿಗಳ ಬಳಿ ಘಟನೆಯ ಮಾಹಿತಿ ಪಡೆದು, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕೂಡಲೇ ಕಿಡಿಕೇಡಿಗಳಿಗೆ ಶಿಕ್ಷೆ ವಿಧಿಸಿ ಅವರ ಉದ್ದೇಶ ಏನಾಗಿತ್ತು ಎಂದು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಸೂಚನೆ ನೀಡಿದರು.

ಕೆಲ ದಿನಗಳಿಂದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ ಮತ್ತು ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಿದೆ ಎನ್ನುವ ಮಾಹಿತಿಯನ್ನು ಕೂಡ ಸ್ಥಳೀಯರು ನೀಡಿದ್ದರಿಂದ ಅಧಿಕಾರಿಗಳು ಪರೀಶೀಲಿಸಿ ಕಟ್ಟಡ ಅಕ್ರಮವಾಗಿದ್ದರೆ ತೆರವುಗೊಳಿಸಬೇಕೆಂದು ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿಯವರು ಒತ್ತಾಯಿಸಿದ್ದಾರೆ.ಈ ವೇಳೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಅವರು, ಶಿವಮೊಗ್ಗ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ ಅವರು, ಸೂಡಾ ಮಾಜಿ ಅಧ್ಯಕ್ಷರಾದ ನಾಗರಾಜ್ ಅವರು, ಮಹಾ ನಗರ ಪಾಲಿಕೆ ಮಾಜಿ ಸದಸ್ಯರಾದ ರಾಹುಲ್ ಬಿದರೆ ಅವರು, ಸ್ಥಳೀಯ ಮುಖಂಡರು ಜೊತೆಗಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!