ಶಿವಮೊಗ್ಗ ರಾಗಿಗುಡ್ಡ ಘಟನೆ: ಅಕ್ರಮ ಕಟ್ಟಡ ತೆರವಿಗೆ ಬಿಜೆಪಿಯಿಂದ ಪಾಲಿಕೆ ಆಯುಕ್ತರಿಗೆ ಮನವಿ

Picture of Savistara

Savistara

Bureau Report

ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ಅನ್ಯಕೋಮಿನ ಕೆಲ ಕಿಡಿಗೇಡಿಗಳು ನಗರದಲ್ಲಿ ಶಾಂತಿ ಸೌಹಾರ್ದತೆಯನ್ನು ಕೆಡಿಸುವ ಸಲುವಾಗಿ ಬಡಾವಣೆಯಲ್ಲಿ ಇದ್ದ ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ಕಾಲಿನಿಂದ ಒದ್ದು, ನಾಗರ ದೇವರ ವಿಗ್ರಹವನ್ನು ಚರಂಡಿಗೆ ಬಿಸಾಡಿ ಹೋಗಿರುವುದು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ.

ಭಾನುವಾರ ಘಟನೆ ನಡೆದ ಸ್ಥಳಕ್ಕೆ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆದು. ಈ ಕೃತ್ಯ ಎಸಗಿರುವ ಯುವಕ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾನೆ ಹಾಗೂ ಈ ನಿರ್ಮಾಣ ಹಂತದ ಕಟ್ಟದಲ್ಲಿ ಕೆಲ ದಿನಗಳಿಂದ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ ಎನ್ನುವ ಮಾಹಿತಿಯನ್ನು ಕೂಡ ಸ್ಥಳೀಯರು ನೀಡಿದ್ದರಿಂದ ಇಂದು ಶಿವಮೊಗ್ಗ ನಗರ ಬಿಜೆಪಿಯ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರನ್ನು ಭೇಟಿ ಮಾಡಿ ಈ ಕಟ್ಟಡ ಅಕ್ರಮವಾಗಿದ್ದರೆ ಈ ಕೂಡಲೇ ತೆರವುಗೊಳಿಸಬೇಕು ಮತ್ತು ಈ ವಿಭಾಗದಲ್ಲಿ ಸಾರ್ವಜನಿಕರಿಗಾಗಿ ಮೀಸಲಿಟ್ಟ ಸರ್ಕಾರಿ ಜಾಗಗಳನ್ನು ಆನ್ಯಕೋಮಿನವರು ಒತ್ತುವರಿ ಮಾಡಿಕೊಂಡು ಆಕ್ರಮ ಕಟ್ಟಡಗಳನ್ನು ಈಗಾಗಲೇ ನಿರ್ಮಿಸುತ್ತಿರುವು ಸಾರ್ವಜನಿಕರಿಂದ ಗಮನಕ್ಕೆ ಬಂದಿದ್ದು, ಹಾಗಾಗಿ ಆ ಪ್ರದೇಶದಲ್ಲಿರುವ ಎಲ್ಲಾ ಸರ್ಕಾರಿ ಜಾಗಗಳನ್ನು ಬೇಲಿಗಳನ್ನು ಹಾಕಿಸಿ.

ಸ್ವಚ್ಛತೆ ಮಾಡಿಸಿ, ಪಾಲಿಕೆ ವಶಕ್ಕೆ ಪಡೆಯಬೇಕೆಂದು ಬಿಜೆಪಿ ಶಾಸಕರಾದ ಚೆನ್ನಬಸಪ್ಪ,ಮನವಿ ಸಲ್ಲಿಸಿದರು.ಈ ವೇಳೆ ಶಾಸಕರಾದ ಡಾ.ಧನಂಜಯ ಸರ್ಜಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಕೆ ಜಗದೀಶ್ ಅವರು, ಶಿವಮೊಗ್ಗ ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ ಅವರು, ಪ್ರಮುಖರಾದ ಜ್ಞಾನೇಶ್ವರ್ ಅವರು, ನಾಗರಾಜ್ ಅವರು, ಬಳ್ಳೇಕೆರೆ ಸಂತೋಷ್ ಅವರು, ಅನಿತಾ ರವಿಶಂಕರ್ ಅವರು, ಸುರೇಖಾ ಮುರುಳೀಧರ್ ಅವರು ಸೇರಿದಂತೆ ಸ್ಥಳೀಯ ಮುಖಂಡರು, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಜೊತೆಗಿದ್ದರು

[t4b-ticker]
error: Content is protected !!