ಅನ್ನಭಾಗ್ಯ ಅಕ್ಕಿ ಸೇರಿದಂತೆ ರಾಜ್ಯದ ನಾನಾ ಯೋಜನೆಗಳಿಗೆ ಪಡಿತರ ಧಾನ್ಯಗಳನ್ನು ಸಾಗಣೆ ಮಾಡುವ ಲಾರಿ ಮಾಲೀಕರು ಸೋಮವಾರದಿಂದ ಅನಿರ್ದಿಷ್ಟ ಮುಷ್ಕರ ಕೈಗೊಂಡಿದ್ದಾರೆ.ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿ ಮಾಲೀಕರಿಗೆ ಫೆಬ್ರವರಿಯಿಂದ ಈವರೆಗೆ ಸರಕಾರ ಹಣ ನೀಡದೆ 260 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋದಾಮುಗ ಳಿಂದ ಆಹಾರ ಧಾನ್ಯ ಸಾಗಣೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿ ದಿದ್ದಾರೆ. ಪ್ರತಿಭಟನೆ ಮುಂದುವರಿದರೆ ಗ್ರಾಹಕರಿಗೆ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.ఎటిఎంసి ಸೇರಿದಂತೆ ಇತರೆ ಸಾಗಾಟದಿಂದ ಯಾವುದೇ ತೊಂದರೆಯಿಲ್ಲ. ಆದರೆ, ಎಫ್‌ಸಿಐನಿಂದ ರಾಜ್ಯದಾದ್ಯಂತ ಅನ್ನಭಾಗ್ಯಕ್ಕಾಗಿ ಸರಬರಾಜು ಮಾಡುವುದಕ್ಕೆ ಸರಕಾರದಿಂದ ಬರುವ ಹಣಕ್ಕೆ ತೊಂದರೆಯಾಗಿದೆ ಎಂದು ಲಾರಿ ಮಾಲೀಕರ ಸಂಘ ಆರೋಪಿಸಿದೆ. ನಿತ್ಯ 15 ಸಾವಿರ ಟನ್ ಆಹಾರ ಧಾನ್ಯಗಳನ್ನು ಸಾಗಿಸುತ್ತಿದ್ದ 4,500 ಲಾರಿಗಳನ್ನು ಸ್ಥಗಿತಗೊಳಿಸಲಾಗಿದೆ.ಈ ನಡುವೆ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಶೀಘ್ರದಲ್ಲೇ ಲಾರಿ ಮಾಲೀಕರ
ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಈ ಭರವಸೆಯನ್ನು ಒಪ್ಪದ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಆಂಡ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಜಿ.ಆರ್. ಷಣ್ಣುಗಪ್ಪ, “ಜೂ.19ರಂದು ಸರಕಾರ ನಮ್ಮ ಜತೆ ಮಾತುಕತೆ ನಡೆಸಿದ ವೇ ಳೆ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದರೂ ಈವರೆಗೆ ಈಡೇರಿಲ್ಲ. ಸರಕಾರ ಈ ಬಾರಿ ಎಷ್ಟೇ ಭರವಸೆ ನೀಡಿದರೂ, ಖಾತೆಗೆ ಹಣ ಬರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.”ರಾಜ್ಯದ ‘ಅನ್ನಭಾಗ್ಯ’ ಹಾಗೂ ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ’ ಯೋಜನೆಯಡಿ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ಮತ್ತು ಸಗಟು ಮಳಿಗೆಗಳಿಂದ ರಾಜ್ಯಾದ್ಯಂತ
ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು 202 4.50 ಲಕ್ಷ ಮೆ.ಟನ್ ಪಡಿತರವನ್ನು ಸಾಗಣೆ ಮಾಡುತ್ತಿದ್ದೇವೆ. 5 ತಿಂಗಳಲ್ಲಿ ಬರೋಬ್ಬರಿ 20 ಲಕ್ಷ ಮೆ.ಟನ್ ಆಹಾರ ಪದಾರ್ಥ ಸಾಗಣೆ ಮಾಡಿದ್ದೇವೆ. 4,500 ಲಾರಿಗಳು ಆಹಾರ ಧಾನ್ಯ ಸಾಗಿಸುತ್ತಿವೆ. ಇವುಗಳಲ್ಲಿ ಸುಮಾರು ಒಂದು ಸಾವಿರ ಲಾರಿಗಳು ಗುತ್ತಿಗೆ ಆಧಾರಿತವಾಗಿದ್ದರೆ, 3,500ಕ್ಕೂ ಅಧಿಕ ಲಾರಿಗಳು ಮಾಲೀಕತ್ವದ್ದಾಗಿವೆ. ಬಾಕಿ ಹಣ ಬಿಡುಗಡೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ವೆಚ್ಚ ರಸ್ತೆ ತೆರಿಗೆ ಮತ್ತು ಸಿಬ್ಬಂದಿಗೆ ವೇತನ ಪಾವತಿಸಲು ಪರದಾಡುತ್ತಿದ್ದೇವೆ. ಪ್ರತಿ ತಿಂಗಳು ಕಂತು ಕಟ್ಟಿಲ್ಲವೆಂದು ಫೈನಾನ್ಸ್ ಸಂಸ್ಥೆಗಳು ಲಾರಿಗಳನ್ನು ವಶಕ್ಕೆ ಕುಟುಂಬ ಪಡೆಯಲು ಮುಂದಾಗುತ್ತಿವೆ. ನಿರ್ವಹಣೆಗೂ ಕಷ್ಟಪಡುವಂತಾಗಿದೆ,” ಎಂದು ಷಣ್ಮುಗಪ್ಪ ಅಳಲು ತೋಡಿಕೊಂಡಿದ್ದಾರೆ.
ಅನನುಕೂಲಕ್ಕೆ ಸರಕಾರವೇ ಹೊಣೆ
“ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಾದ ಜ್ಯೋತ್ಸಾ ಅವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಸೌಜನ್ಯಕ್ಕೂ ಮಾತನಾಡುವುದಿಲ್ಲ. ಅಂತಹ ಅಧಿಕಾರಿಗಳು ಇದ್ದರೂ ಯಾರಿಗೂ ಪ್ರಯೋಜನವಿಲ್ಲ. ಈಗ ಮುಷ್ಕರ ಕೈಗೊಂಡಿದ್ದೇವೆ. ಸರಕಾರ ಸಾರ್ವಜನಿಕ ವ್ಯವಸ್ಥೆಯಡಿ ವಿತರಿಸಲಿರುವ ಆಹಾರ ಧಾನ್ಯಗಳನ್ನು ಸರಬರಾಜು ಮಾಡುವ ಲಾರಿಗಳನ್ನು ಸೋಮವಾರ ಬೆಳಗ್ಗೆಯಿಂದಲೇ ನಿಲ್ಲಿಸಿದ್ದೇವೆ. ಬುಧವಾರದ ಹೊತ್ತಿಗೆ ಇದರ ಪರಿಣಾಮ ತಟ್ಟಲಿದೆ. ಇದರಿಂದ ಸಾರ್ವಜನಿಕರಿಗಾಗುವ ಅನನುಕೂಲಕ್ಕೆ ಸರಕಾರವೇ ಹೊಣೆ,” ಎಂದು ಷಣ್ಣುಗಪ್ಪ ತಿಳಿಸಿದರು.














































