ಸಂಸದ ಕ್ಯಾ.ಬ್ರಿಜೇಶ್ ಚೌಟ ರಿಂದ ಕಲ್ಲುಗುಂಡಿ-ಸಂಪಾಜೆ ಬಿಜೆಪಿ ಕಾರ್ಯಕರ್ತರ ಸಭೆ,ಅಹವಾಲು ಸ್ವೀಕಾರ

Picture of Savistara

Savistara

Bureau Report

ಸುಳ್ಯ:ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಕಲ್ಲುಗುಂಡಿ- ಸಂಪಾಜೆ ಬಿಜೆಪಿ ಗ್ರಾಮ ಸಮಿತಿಯ ಕಾರ್ಯಕರ್ತರ ಸಭೆ ಮತ್ತು ಅಹವಾಲು ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದರು.

ಈ ವೇಳೆ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಕಾರ್ಯಕರ್ತರೆಲ್ಲ ಜೊತೆಯಾಗಿ ಕೆಲಸ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವರ್,ಸುಳ್ಯ ಬಿಜೆಪಿ ಕ್ಷೇತ್ರ ಉಸ್ತುವಾರಿ ರವೀಂದ್ರ ಶೆಟ್ಟಿ ಉಳಿದೋಟ್ಟು,ಹರೀಶ್ ಕಂಜಿಪಿಲಿ,ಪ್ರದೀಪ್ ರೈ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಅನೇಕ ಸಾರ್ವಜನಿಕರು ರಸ್ತೆ ಇನ್ನಿತರ ವಿಷಯಗಳ ಬಗ್ಗೆ ಸಂಸದರಿಗೆ ಮನವಿ ಸಲ್ಲಿಸಿದರು

[t4b-ticker]
error: Content is protected !!