ಬೆಳ್ಳಾರೆ,ನೆಲ್ಯಾಡಿ,ಉಜಿರೆ ಸೇರಿ ದ.ಕ ಜಿಲ್ಲೆಯ 13 ಗ್ರಾಮ ಸೂರ್ಯಘರ್ ಯೋಜನೆಗೆ ಆಯ್ಕೆ

Picture of Savistara

Savistara

Bureau Report

ಮಂಗಳೂರು, ಜು. 15: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ದ. ಕ. ಜಿಲ್ಲೆಯಲ್ಲಿ ಮಾದರಿ ಸೋಲಾರ್ ಗ್ರಾಮವನ್ನು ಆಯ್ಕೆ ಮಾಡಲು ಜೂ.27 ರಂದು ಜಿಲ್ಲಾ ಮಟ್ಟದ ಸಮಿತಿಯಿಂದ ನಡೆದ ಸಭೆಯಲ್ಲಿ 13 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.ನೆಲ್ಯಾಡಿ, ಬೆಳ್ಳಾರೆ, ಕೆಯ್ಯರು, ಒಳಮೊಗ್ರು, ನರಿಮೊಗ್ರು,ಉಜಿರೆ, ನರಿಕೊಂಬು, ತೆಂಕಮಿಜಾರು, ಪುತ್ತಿಗೆ, ಬೆಳುವಾಯಿ, ಅಡ್ವರು, ಮೂಳೂರು, ತಲಪಾಡಿ ಗ್ರಾಮಗಳು ಆಯ್ಕೆ ಯಾಗಿದ್ದು, ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ಸೋಲಾರ್ ಸೌಲಭ್ಯ ಅಳವಡಿಸುವಂತೆ ಗ್ರಾಮ ಮಟ್ಟದಲ್ಲಿ ಜನರಿಗೆ ಉತ್ತೇಜನ ನೀಡಲು ಸೂಚಿಸಲಾಗಿದೆ. ಸ್ಪರ್ಧೆಯ ಕಾಲಾವಧಿಯು ಜು.1 ರಿಂದ ಡಿಸೆಂಬರ್ ಅಂತ್ಯದವರೆಗೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!