ಧರ್ಮಸ್ಥಳ ತಲೆ ಬುರುಡೆ ಕೇಸ್​; ಹೆಣ ಹೂತಿಟ್ಟ ಜಾಗ ಗುರುತಿಸಿದ ಅನಾಮಿಕ; ನೇತ್ರಾವತಿ ದಡದಲ್ಲಿ ಸ್ಥಳ ಮಹಜರು

Picture of Savistara

Savistara

Bureau Report

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸೋಮವಾರ ಅನಾಮಿಕ ದೂರುದಾರನನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದೆ. ದೂರುದಾರನು ನೇತ್ರಾವತಿ ನದಿ ತೀರದ ದಟ್ಟ ಕಾಡಿನಲ್ಲಿ ಎಂಟು ಸಂಭಾವ್ಯ ಸಮಾಧಿ ಸ್ಥಳಗಳನ್ನು ಗುರುತಿಸಿದ್ದು, ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ.

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸೋಮವಾರ ಅನಾಮಿಕ ದೂರುದಾರನನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದೆ. ದೂರುದಾರನು ನೇತ್ರಾವತಿ ನದಿ ತೀರದ ದಟ್ಟ ಕಾಡಿನಲ್ಲಿ ಎಂಟು ಸಂಭಾವ್ಯ ಸಮಾಧಿ ಸ್ಥಳಗಳನ್ನು ಗುರುತಿಸಿದ್ದು. ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ.

ಎಸ್‌ಐಟಿ ತನಿಖಾಧಿಕಾರಿ ದಯಾಮಾ ನೇತೃತ್ವದ ತಂಡವು ಅನಾಮಿಕ ದೂರುದಾರನೊಂದಿಗೆ ಸುಮಾರು 15 ನಿಮಿಷಗಳ ಕಾಲ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯ ಪ್ರದೇಶದಲ್ಲಿ ಸಂಚರಿಸಿತು. ಈ ಹಿಂದೆ ತಾನು ತಲೆಬುರುಡೆಯನ್ನು ಕಂಡುಕೊಂಡಿದ್ದ ಸ್ಥಳ ಹಾಗೂ ಇನ್ನಷ್ಟು ಮೂಳೆಗಳು ಇರಬಹುದೆಂದು ಶಂಕಿಸಲಾದ ಜಾಗವನ್ನು ದೂರುದಾರನು ಅಧಿಕಾರಿಗಳಿಗೆ ತೋರಿಸಿದ. ಆತ ತೋರಿಸಿದ ಸಮಾಧಿಯಂತಹ ರಚನೆಗಳಿದ್ದ ಎಂಟು ಸ್ಥಳಗಳನ್ನು ತಂಡವು ಗುರುತಿಸಿ. ಅಧಿಕೃತವಾಗಿ ದಾಖಲಿಸಿಕೊಂಡಿದೆ.

ಶೋಧ ಕಾರ್ಯಾಚರಣೆಗೆ ಸಿದ್ಧತೆ

ದೂರುದಾರ ಗುರುತಿಸಿದ ಸ್ಥಳಗಳ ಸುತ್ತ ಎಚ್ಚರಿಕೆಯ ಟೇಪ್ ಕಟ್ಟಿ ಪ್ರದೇಶವನ್ನು ಸಂರಕ್ಷಿಸಲಾಗಿದೆ. ಮುಂದಿನ ಹಂತದಲ್ಲಿ ಈ ಸ್ಥಳಗಳಲ್ಲಿ ವೈಜ್ಞ7ಿಕವಾಗಿ ಶೋಧ ಕಾರ್ಯಾಚರಣೆ ನಡೆಸಲು ಎಸ್‌ಐಟಿ ಸಿದ್ಧತೆ ನಡೆಸಿದೆ. ಶವಗಳ ಕುರುಹು ಪತ್ತೆಗಾಗಿ ಮಣ್ಣಿನ ಪರೀಕ್ಷೆ ಹಾಗೂ ವಿಧಿವಿಜ್ಞಾನ ತಜ್ಞರ ನೆರವಿನೊಂದಿಗೆ ಉತ್ಪನನ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಧರ್ಮಸ್ಥಳ ಪೊಲೀಸ್‌ ಠಾಣೆಯ ಸಿಬ್ಬಂದಿ ತನಿಖೆಗೆ ಸಹಕಾರ ನೀಡಿದರು.

ನಿಗೂಢವಾದ ದೂರುದಾರನ ಹಿನ್ನೆಲೆ

ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಅನಾಮಿಕ ದೂರುದಾರ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲೇ ಮಧ್ಯಾಹ್ನದ ಊಟ ಸ್ವೀಕರಿಸಿ, ಸಂಜೆಯವರೆಗೂ ಅಧಿಕಾರಿಗಳೊಂದಿಗೆ ಇದ್ದರು. ಈತನ ಸಹಕಾರ ತನಿಖೆಗೆ ಹೊಸ ದಿಕ್ಕು ನೀಡಿರುವುದು ನಿಜವಾದರೂ, ಈ ವ್ಯಕ್ತಿಯ ಹಿನ್ನೆಲೆ ಹಾಗೂ ಇಷ್ಟು ದಿನಗಳ ನಂತರ ಆತ ಈ ಮಾಹಿತಿ ಬಹಿರಂಗಪಡಿಸಲು ಕಾರಣವೇನು ಎಂಬ ಪ್ರಶ್ನೆಗಳು ನಿಗೂಢವಾಗಿಯೇ ಉಳಿದಿವೆ. ಈ ಬೆಳವಣಿಗೆಯಿಂದಾಗಿ ಧರ್ಮಸ್ಥಳ ಶವ ಹೂತಿಟ್ಟ ಆರೋಪ ಪ್ರಕರಣವು ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!