ಧರ್ಮಸ್ಥಳ ಪ್ರಕರಣ : ಮೊದಲನೆಯ ಪಾಯಿಂಟ್ ನಲ್ಲಿ ಏನೂ ಸಿಕ್ಕಿಲ್ಲವೆಂದರೆ ಒಪ್ಪದ ದೂರುದಾರ| ಜೆಸಿಬಿ ಮೂಲಕ ಉತ್ಪನನಕ್ಕೆ ಒತ್ತಾಯ

Picture of Savistara

Savistara

Bureau Report

ಮೊದಲ ಗುರುತಿನ ಉತ್ಪನನದಲ್ಲಿ ಅಗೆದಾಗ ಯಾವುದೇ ಸಾಕ್ಷ್ಯ ಸಿಗದ ಕಾರಣ, ಅಧಿಕಾರಿಗಳು ಜೆಸಿಬಿ ಮೂಲಕ ಉತ್ಪನನ ಮಾಡೋಕೆ ತೀರ್ಮಾನಿಸಿದ್ದಾರೆ. ಸಾಕ್ಷಿದಾರನ ಬೇಡಿಕೆಯ ಹಿನ್ನಲೆಯಲ್ಲಿ ಅಧಿಕಾರಿಗಳು ಜೆಸಿಬಿ ಮೂಲಕ ಉತ್ಪನನ ನಡೆಸಲು ಮುಂದಾಗಿದ್ದಾರೆ.

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪ ನದಿಯ ದಡದಲ್ಲಿ. ಹಲವಾರು ಅಸಹಜ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ ಸ್ಥಳದಲ್ಲಿ ಮೃತದೇಹಗಳನ್ನು ಹೂತಿರುವ ಬಗ್ಗೆ ತನಿಖೆಗಾಗಿ ಮೊದಲ ಗುರುತಿನ ಉತ್ಪನನದಲ್ಲಿ ಅಗೆದಾಗ ಯಾವುದೇ ಸಾಕ್ಷ್ಯ ಸಿಗದ ಕಾರಣ, ಅಧಿಕಾರಿಗಳು ಜೆಸಿಬಿ ಮೂಲಕ ಉತ್ಪನನ ಮಾಡೋಕೆ ತೀರ್ಮಾನಿಸಿದ್ದಾರೆ. ಸಾಕ್ಷಿದಾರನ ಬೇಡಿಕೆಯ ಹಿನ್ನಲೆಯಲ್ಲಿ ಅಧಿಕಾರಿಗಳು ಜೆಸಿಬಿ ಮೂಲಕ ಉತ್ಪನನ ನಡೆಸಲು ಮುಂದಾಗಿದ್ದಾರೆ.

ಮೊದಲ ಗುರುತಿನ ಉತ್ಪನನದಲ್ಲಿ ಅಗೆದಾಗ ಯಾವುದೇ ಸಾಕ್ಷ್ಯ ಸಿಗದ ಕಾರಣ ಎರಡನೇ ಮತ್ತು ಮೂರನೇ ಗುರುತಿನ ಸ್ಥಳಗಳಲ್ಲಿ ಅಗೆತಕ್ಕೆ ಮುಂದಾಗಿದ್ದಾರೆ. ನಾಲ್ಕು ಅಡಿ ಉತ್ಪನನ ಮಾಡಿದಾಗ ನೀರು ಬಂದಿದ್ದು, ನದಿ ತಟ ಆದ ಕಾರಣ ಮತ್ತಷ್ಟು ಅಡಿ ಹೋದರೆ ನೀರು ಬರುವ ಸಾಧ್ಯತೆ ಇದೆ.

ಊಟದ ವಿರಾಮದ ಬಳಿಕ ಜೆಸಿಬಿ ಮೂಲಕ ಉತ್ಪನನ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು ಸಾಕ್ಷಿದಾರ ಹೇಳುವ ತನಕವೂ ಉತ್ಪನನ ಕಾರ್ಯ ಮುಂದುವರಿಯಲಿದೆ.

ಮೊದಲ ಪಾಯಿಂಟ್ ನಲ್ಲಿ ಏನು ಸಿಗದೇ ಇದ್ದಾಗ ಒಪ್ಪದ ಅನಾಮಿಕ ಮತ್ತಷ್ಟು ಅಡಿ ಉತ್ಪನನ ಮಾಡಲು ಕೋರಿದ ಹಿನ್ನೆಲೆಯಲ್ಲಿ ಇದೀಗ ಜೆಸಿಬಿ ಫಸ್ಟ್ ಪಾಯಿಂಟನತ್ತ ಮುಖಮಾಡಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!