ಆ. 1ರಿಂದ ಯುಪಿಐ ವಹಿವಾಟಿನಲ್ಲಿ ವಿನೂತನ ನಿಯಮಗಳು ಜಾರಿ; ಬ್ಯಾಲೆನ್ಸ್ ಚೆಕ್‌, ಆಟೋ ಪೇ ಸೇರಿ ಹಲವು ಬದಲಾವಣೆ

Picture of Savistara

Savistara

Bureau Report

ನವದೆಹಲಿ: ಯುಪಿಐ ಬಳಕೆದಾರರಿಗೆ ಹೊಸ ನಿಯಮಗಳು ಜಾರಿಯಾಗಲಿವೆ.ಆಗಸ್ಟ್ 1 ರಿಂದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಜಾರಿಗೆ ಬರಲಿವೆ.ಫೋನ್ ಪೇ, ಗೂಗಲ್ ಪೇ, ಪೇಟಿಂನಂತಹ ಯುಪಿಐ ಆಧಾರಿತ ಬಳಕೆದಾರರಿಗೆ ಬದಲಾವಣೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಏಪ್ರಿಲ್ ಮತ್ತು ಮೇ 2025 ರಲ್ಲಿ ಯುಪಿಐನಲ್ಲಿ ಸ್ವಲ್ಪ ಸಮಸ್ಯೆಗಳಾಗಿದ್ದವು. ಜನರು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡುತ್ತಿದ್ದರು ಮತ್ತು ವಹಿವಾಟಿನ ಸ್ಥಿತಿಯನ್ನು ನೋಡುತ್ತಿದ್ದರು. ಇದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿ ವಹಿವಾಟುಗಳು ನಿಧಾನವಾಗುತ್ತಿದ್ದವು ಅಥವಾ ಫೇಲ್ ಆಗುತ್ತಿದ್ದವು. ಹಾಗಾಗಿ, ವ್ಯವಸ್ಥೆಯನ್ನು ಉತ್ತಮಗೊಳಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ.

ಹೊಸ ನಿಯಮಗಳೇನು?

ಆಟೋ ಪೇಗೆ ನಿಗದಿತ ಸಮಯ, ವಹಿವಾಟು ಸ್ಟೇಟಸ್ ಚೆಕಿಂಗ್ ಗೆ ನಿರ್ಬಂಧ, ಪೇಮೆಂಟ್ ರಿಹರ್ಸಲ್‌ಗೆ ಮಿತಿ ಸೇರಿ ಹಲವು ಬದಲಾವಣೆಯಾಗಲಿವೆ.ಹೊಸ ನಿಯಮದ ಪ್ರಕಾರ ನಿತ್ಯ ಬ್ಯಾಲೆನ್ಸ್ ತಿಳಿಯಲು ಇನ್ನು ಮುಂದೆ ಮಿತಿ ಇರಲಿದೆ. ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ವೀಕ್ಷಣೆ ಮಾಡಬಹುದು.ನೆಟ್ ಫ್ಲಿಕ್ಸ್, ಯುಟ್ಯೂಬ್ ಸಬ್ಸ್ಕ್ರಿಪ್ಷನ್, ಮ್ಯೂಚುವಲ್ ಫಂಡ್, ಎಸ್ಐಪಿ, ಇಎಂಐ, ಯುಟಿಲಿಟಿ ಬಿಲ್ ಮೊದಲಾದವುಗಳಿಗೆ ಸಂಬಂಧಿಸಿದ ಆಟೋ ಪೇ ಇನ್ನು ಮುಂದೆ ನಿಗದಿತ ಸಮಯದ ಸ್ಲಾಟ್ ಗಳಲ್ಲಿ ಮಾತ್ರ ನಡೆಯಲಿದೆ. ಬೆಳಗ್ಗೆ 10 ಗಂಟೆಯ ಮೊದಲು, ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ರಾತ್ರಿ 9:30 ನಂತರ ಮಾತ್ರ ಇನ್ನು ಮುಂದೆ ಆಟೋ ಪೇ ನಡೆಯಲಿದೆ. ಇದರಿಂದ ಪೀಕ್ ಅವರ್ ಗಳಲ್ಲಿ ಸರ್ವರ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ.ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸುವುದಕ್ಕೂ ಮಿತಿ ಇರುತ್ತದೆ, ಏಕೆಂದರೆ ನೀವು ವಹಿವಾಟಿನ ಸ್ಥಿತಿಯನ್ನು 3 ಬಾರಿ ಮಾತ್ರ ಪರಿಶೀಲಿಸಲು ಅನುಮತಿಸಲಾಗುತ್ತದೆ. ಪ್ರತಿ ಚೆಕ್ ನಡುವೆ ಕನಿಷ್ಠ 90 ಸೆಕೆಂಡುಗಳ ಅಂತರವಿರಬೇಕು.ಒಬ್ಬ ಬಳಕೆದಾರ 30 ದಿನದಲ್ಲಿ ಕೇವಲ 10 ಬಾರಿ ಪೇಮೆಂಟ್ ರಿಹರ್ಸಲ್ ವಿನಂತಿ ಸಲ್ಲಿಸಬಹುದು. ಒಬ್ಬನೇ ವ್ಯಕ್ತಿ ಅಥವಾ ಸಂಸ್ಥೆಗೆ ಐದು ಬಾರಿ ಮಾತ್ರ ಸಲ್ಲಿಸಬಹುದಾಗಿದೆ.ಫೋನ್ ಪೇ, ಗೂಗಲ್ ಪೇ ನಲ್ಲಿ ಒಂದು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬೇಕು. ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ವೀಕ್ಷಣೆ ಮಾಡಬಹುದಾಗಿರುತ್ತದೆ.ಈ ತಿಂಗಳ ಆರಂಭದಿಂದ ಜಾರಿಯಲ್ಲಿರುವ ನಿಯಮದ ಪ್ರಕಾರ ಹಣ ಕಳುಹಿಸುವ ಮೊದಲು ರಿಸೀವರ್ ಬ್ಯಾಂಕ್ ಹೆಸರು ಡಿಸ್ ಪ್ಲೇ ಆಗುತ್ತದೆ. ಇದು ತಪ್ಪು ಖಾತೆಗೆ ಹಣ ಕಳುಹಿಸುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ.ಇನ್ನು ಯುಪಿಐ ವಹಿವಾಟು ಬಳಕೆದಾರರಿಗೆ ಉಚಿತವಾಗಿದ್ದರೂ ಅದರ ಖರ್ಚನ್ನು ಬ್ಯಾಂಕುಗಳು ಇತರ ಪಾಲುದಾರರಿಗೆ ಸರ್ಕಾರವೇ ಭರಿಸುತ್ತಿದೆ. ಯುಪಿಐ ವ್ಯವಸ್ಥೆ ಆರ್ಥಿಕವಾಗಿ ಕಾರ್ಯಸಾಧ್ಯ ಆಗಿರಲು ಭವಿಷ್ಯದಲ್ಲಿ ಉಚಿತ ವಹಿವಾಟನ್ನು ನಿಲ್ಲಿಸಬೇಕಾಗಬಹುದು ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!