ಪ್ರಮೋದ್ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ

Picture of Savistara

Savistara

Bureau Report

ಚಿಕ್ಕಮಗಳೂರು: ಸಾರ್ವಜನಿಕ ಹಿಂದೂ ಮಹಾಸಭಾಗಣಪತಿ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಜೊತೆ ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ ವೇದಿಕೆ ಹಂಚಿಕೊಂಡಿದ್ದಾರೆ.ಸೋಮವಾರ (ಜು.29) ಮೂಡಿಗೆರೆ ಪಟ್ಟಣದ ಅಡಂತ್ಯಾಯ ಮಂಟಪದಲ್ಲಿ ಕಾರ್ಯಕ್ರಮ ನಡೆದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಬಳಿಕ ತೆರೆದ ಜೀಪಿನಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಮುತಾಲಿಕ್ ಜೊತೆ ನಯನಾ ಮೋಟಮ್ಮ ಮೆರವಣಿಗೆ ನಡೆಸಿದರು.

ಮೋಟಮ್ಮ ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ನಾನು ಇಲ್ಲಿಗೆ ಒಬ್ಬ ಹಿಂದೂವಾಗಿ ಬಂದಿದ್ದೇನೆ ಬಿಟ್ಟರೆ ಬೇರೆ ಏನೂ ಇಲ್ಲ, ಇದಕ್ಕೆ ಬೇರೆ ಬೇರೆ ಬಣ್ಣ ಹಚ್ಚುವ ಕೆಲಸ ಬೇಡ, ಯಾರೂ ಅನ್ಯತಾ ಭಾವಿಸಬೇಡಿ ಎಂದು ಹೇಳಿದ್ದಾರೆ.

[t4b-ticker]
error: Content is protected !!