ನಿಮಿಷಪ್ರಿಯಾ ಗಲ್ಲು ಶಿಕ್ಷೆಯ ಬಗ್ಗೆ ಇನ್ನೂ ಬಗೆಹರಿಯದ ಗೊಂದಲ

Picture of Savistara

Savistara

Bureau Report

ಹೊಸದಿಲ್ಲಿ: ಕೇರಳದ ನರ್ಸ್ ನಿಮಿಷಪ್ರಿಯಾ ಅವರುಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಗೊಂದಲದ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ನಿಮಿಷ ಪ್ರಿಯಾದ ಗಲ್ಲು ರದ್ದಾಗಿದೆ ಎಂದು ಭಾರತದ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿಕೆ ಬಿಡುಗಡೆ ಮಾಡಿದೆ.ಮತ್ತೂಂದೆಡೆ ಈ ಸುದ್ದಿ ಸುಳ್ಳು ಎಂದು ಭಾರತ ಸರಕಾರದ ಮೂಲಗಳು ತಿಳಿಸಿವೆ. ಕಳೆದ ಜು.16ಕ್ಕೆ ಮರಣದಂಡನೆ ಶಿಕ್ಷೆಯನ್ನು ಮುಸ್ಲಿಂ ಧಾರ್ಮಿಕ ಮುಖಂಡರ ಮನವಿ ಮೇರೆಗೆ ಮುಂದೂಡಲಾಗಿತ್ತು.ಬಳಿಕ ಕೊಲೆಯಾದ ವ್ಯಕ್ತಿಯ ಕುಟುಂಬದೊಂದಿಗೆ “ಬ್ಲಿಡ್ ಮನಿ’ (ಹತ್ಯೆಗೆ ಪರಿಹಾರವಾಗಿ ಹಣ) ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ಹಣ ಪಡೆಯಲು ಕುಟುಂಬದವರು ನಿರಾಕರಿಸಿದ್ದರು.

[t4b-ticker]
error: Content is protected !!