ದಕ್ಷಿಣ ಕನ್ನಡದಲ್ಲಿ ಕೆಂಪು ಮುರಕಲ್ಲು(ಇಟ್ಟಿಗೆ) ಹಾಗೂ ಮರಳು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಸಿಎಂ ನಲ್ಲಿ ಮನವಿ

Picture of Savistara

Savistara

Bureau Report

ಕರ್ನಾಟಕದ ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಭೂಮಿಯ ಮೇಲ್ಪದರದಲ್ಲಿ ಗಟ್ಟಿ ಮುರ ಇದ್ದು ಕೃಷಿ ಕಾರ್ಯಗಳನ್ನು ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಬಹುಕಾಲದಿಂದಲೂ ಕಾರ್ಮಿಕರ ಸಹಾಯದಿಂದ ಅದನ್ನು ಜನಸಾಮಾನ್ಯರ ಉಪಯೋಗಕ್ಕೆ ಇಟ್ಟಿಗೆಯ ರೂಪದಲ್ಲಿ ಕತ್ತರಿಸಿ ತೆಗೆದು ಬಳಸುವುದು ಪ್ರತೀತಿ, ಕಾಲಕ್ರಮೇಣ ಕಾರ್ಮಿಕರ ಅಭಾವ ಉಂಟಾದಾಗ ಈ ಕಾರ್ಯವನ್ನು ಯಂತ್ರದ ಮೂಲಕ ನಿರ್ವಹಿಸಲು ಪ್ರಾರಂಭಿಸಲಾಯಿತು. ಇದೀಗ ರಾಜ್ಯ ಸರಕಾರದ ನಿಯಮಾವಳಿಗಳ ಕಾರಣದಿಂದ ಈ ಪ್ರಕ್ರಿಯೆಯು ಸಂಪೂರ್ಣ ಸ್ಥಗಿತಗೊಂಡಿದೆ. ಇಷ್ಟು ಮಾತ್ರ ವಲ್ಲದೆ ಸರಕಾರದ ಅಸಮರ್ಪಕ ಹಾಗು ಅವೈಜ್ಞಾನಿಕ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮರಳಿನ ಪೂರೈಕೆಯೂ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಅವಾಂತರಗಳಿಂದಾಗಿ ದಕ್ಷಿಣ ಕನ್ನಡದಲ್ಲಿ ಸಾಮಾನ್ಯ ಜನರ ಗೃಹ ನಿರ್ಮಾಣ ಕಾವ್ಯಗಳಾಗಲಿ, ಕೃಷಿ ಸಂಬಂಧಿಸಿದ ಕಾಮಗಾರಿಗಳಾಗಲಿ ಅಥವಾ ಯಾವುದೇ ರೀತಿಯ ಕಟ್ಟಡ ಕಾಮಾಗಾರಿಗಳಾಲಿ ನಡೆಯುತಿಲ್ಲ. ಇದರಿಂದ ಜಿಲ್ಲೆಯ ಆರ್ಥಿಕತೆ ಸ್ಥಬ್ಧಗೊಂಡಿರುವುದಷ್ಟೇ ಅಲ್ಲದೇ, ಈ ಉದ್ಯೋಗವನ್ನು ಹಾಗು ಈ ಸಂಬಂಧಿಸಿದ ಉದ್ಯೋಗಗಳನ್ನು ನಂಬಿರುವ ಸಾವಿರಾರು ಜನರ ಹಾಗು ಕಾರ್ಮಿಕರ ಬದುಕು ಇದೀಗ ಬೀದಿಗೆ ಬಿದ್ದಿದೆ. ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಈ ಕೆಳಗಿನ ಆಗ್ರಹಗಳನ್ನು ಮಾಡುವ ಅನಿವಾರೈತೆ ಎದುರಾಗಿದೆ.

ಕೆಂಪು ಮುರಕಲ್ಲಿಗೆ ಸಂಬಂಧಿಸಿರುವುದು

  • ಕೆಂಪು ಮುರ ಕಲ್ಲುಕೋರೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ವ್ಯಾಪ್ತಿಗೆ ಸೇರಿಸಿ ಅನಗತ್ಯ ನಿಯಮಗಳ ಮೂಲಕ ಕೋರೆ ಮಾಲಕರಿಗೆ, ಜನಸಾಮಾನ್ಯರಿಗೆ ಹಾಗು ಕಾರ್ಮಿಕರಿಗೆ ಹೊರೆಯಾಗುವಂತೆ ಮಾಡಲಾಗುತ್ತಿದೆ. ಈ ಮೂಲಕ ಪರೋಕ್ಷವಾಗಿ ಪೋಲಿಸ್, ಕಂದಾಯ, ಗಣಿ ಇಲಾಖೆ ಅಧಿಕಾರಿಗಳು ಲಂಚಕ್ಕೆ ಪೀಡಿಸುವಂತಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಂಪು ಕಲ್ಲು ಕೋರೆ ಕಾರ್ಯವನ್ನು ಗಣಿ ಇಲಾಖೆ ವ್ಯಾಪ್ತಿಯಿಂದ ಹೊರಗಿರಿಸಿ ಸರಳೀಕೃತ ವ್ಯವಸ್ಥೆಯಲ್ಲಿ ಪರವಾನಿಗೆ ನೀಡುವಂತಾಗಬೇಕು.
  • ಕೇರಳದಲ್ಲಿ 1 ಟನ್ ಕಲ್ಲಿಗೆ ಕೇವಲ 32 ರೂಪಾಯಿಗಳಷ್ಟು ರಾಜಧನ ನಿಗದಿಯಾಗಿದ್ದರೆ ಅದೇ ಪ್ರಮಾಣದ ಕಲ್ಲಿಗೆ ಕರ್ನಾಟಕದಲ್ಲಿ 290 ರೂಪಾಯಿಗಳಷ್ಟು ರಾಜಧನವನ್ನು ಕರ್ನಾಟಕದ ಸರಕಾರ ನಿಗದಿಪಡಿಸಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಪರವಾನಿಗೆಯಲ್ಲಿ 1 ಟನ್ ಮುರ ಇಟ್ಟಿಗೆಗೆ ವಿಧಿಸಿರುವ ಮೊತ್ತವು ಶೇ. 96% ಆಗಿದ್ದು ಈ ಮೊತ್ತವನ್ನು ಪ್ರತಿ 1 ಟನ್ ಮುರ ಇಟ್ಟಿಗೆಗೆ ಶೇ. 10% ಗೆ ನಿಗಿದಿಗೊಳಿಸಿ ರಾಜ್ಯದಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಸಲಾಗಿರುವ ರಾಜಧನವನ್ನು ಈ ಕೂಡಲೇ ಜಾರಿಗೆ ಬರುವಂತೆ ತಗ್ಗಿಸಬೇಕಿದೆ.
  • ಸದ್ಯ ಸ್ಥಗಿತವಾಗಿರುವ ಪರವಾನಿಗೆ ವಿತರಣಾ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಬಿಸಬೇಕು. ಇಲಾಖೆಗಗಳ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುವ ವ್ಯವಸ್ಥೆಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಸುಲಭವಾಗಿ ಮಿತದರದಲ್ಲಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕು.

ಮರಳು ಸರಬರಾಜಿಗೆ ಸಂಬಂಧಿಸಿರುವುದು

  • ರಾಜ್ಯದ ಇತರ ಭಾಗಗಳ ಮರಳುಗಾರಿಕೆ ಮತ್ತು ಕರಾವಳಿ ಭಾಗದ ಮರಳುಗಾರಿಕೆಯ ವಿಧಾನ ಸಂಪೂರ್ಣ ವ್ಯತ್ಯಾಸ ಇರುವ ಕಾರಣ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯನ್ನು ತಕ್ಷಣ ಜಾರಿಗೆ ತರಬೇಕು.
  • ಸರಳೀಕೃತ ವ್ಯವಸ್ಥೆಯಲ್ಲಿ ಮರಳುಗಾರಿಕೆಗೆ ಹಾಗೂ ಸಾಗಾಟಕ್ಕೆ ಕಾನೂನು ಜಾರಿಗೆ ತರಬೇಕು. ವಿಪರೀತವಾದ, ಅವೈಜ್ಞಾನಿಕವಾದ ರಾಜಧನ ಹಾಗೂ ಕ್ಲಿಷ್ಟಕರವಾದ ನೀತಿಯಿಂದಾಗಿ ಜನಸಾಮಾನ್ಯರಿಗೆ ದೊರೆಯುವ ಮರಳಿನ ದರ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿ ಹೊರೆಯಾಗಿ ಪರಿಣಮಿಸಿದೆ.
  • ಹಳ್ಳ, ತೊರೆ, ತೋಡು, ನದಿ ಮತ್ತು ಹೊಳೆಗಳಲ್ಲಿ ಪ್ರಾಕೃತಿಕವಾಗಿ ಲಭ್ಯವಾಗುವ ಮರಳನ್ನು ತೆಗೆದು ಸಾಗಿಸಿ ಕಟ್ಟಡ ನಿರ್ಮಾಣಕ್ಕೆ ಬಳಸಲು ಪರವಾನಿಗೆ ನೀಡುವುದನ್ನು ಸ್ಥಳೀಯಾಡಳಿತಗಳಿಗೆ ಅವಕಾಶ ಕಲ್ಪಿಸಬೇಕು..
  • ತಾಲೂಕು ಮಟ್ಟದ ಮರಳು ನಿರ್ವಹಣಾ ಸಮಿತಿಯ ಮೂಲಕ ಮರಳುಗಾರಿಕೆ ಪ್ರದೇಶಗಳನ್ನು ಗುರುತಿಸಿ ತಾಲೂಕು ವ್ಯಾಪ್ತಿಯವರಿಗೆ ಕಾನೂನು ಬದ್ದ ಮರಳುಗಾರಿಕೆಗೆ ಅವಕಾಶ ನೀಡಬೇಕು.

ಎಂದು ದಕ್ಷಿಣ ಕನ್ನಡದ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಂಪು ಕಲ್ಲಿಗೆ ಸಂಬಂಧಿಸಿದ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ ಆರ್ವಾರ್, ಮಾಧ್ಯಮ ಪ್ರಕೋಷ್ಠದ ಸಂಚಾಲಕರಾದ ವಸಂತ ಪೂಜಾರಿ ಉಪಸ್ಥಿತರಿದ್ದರು.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!