ಐ ಲವ್ ಮುಹಮ್ಮದ್ ವಿವಾದ: ಘಜ್ವಾ-ಎ-ಹಿಂದ್ ಕಲ್ಪಿಸಿಕೊಳ್ಳುವುದು, ಕನಸು ಕಾಣುವುದು ನರಕಕ್ಕೆ ದಾರಿ ಎಂದ ಯುಪಿ ಸಿಎಂ

Picture of Savistara

Savistara

Bureau Report

ಉತ್ತರ ಪ್ರದೇಶದಲ್ಲಿ ವಿಶೇಷವಾಗಿಹಬ್ಬದ ಸಮಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಯಾವುದೇ ಅರಾಜಕತೆಯ ಕೃತ್ಯವು ಭವಿಷ್ಯದ ಪೀಳಿಗೆಗಳು ನೆನಪಿನಲ್ಲಿಟ್ಟುಕೊಳ್ಳುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.ಈ ಬಗ್ಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಯೋಗಿ, ಯುಪಿಯಲ್ಲಿ ಹಬ್ಬಗಳ ಸಂತೋಷ ಮತ್ತು ಉತ್ಸಾಹದ ಸಮಯದಲ್ಲಿ ಯಾರಾದರೂ ಕಿಡಿಗೇಡಿತನವನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ಭವಿಷ್ಯದ ಪೀಳಿಗೆಗಳು ನೆನಪಿಸಿಕೊಳ್ಳುವಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಆದಿತ್ಯನಾಥ್ ಗುಡುಗಿದ್ದಾರೆ.

ಮುಂದುವರೆದು ಮಾತನಾಡಿದ ಯೋಗಿ, ಘಜ್ವಾ-ಎ-ಹಿಂದ್ ಹಿಂದೂಸ್ತಾನದ ನೆಲದಲ್ಲಿ ನಡೆಯುವುದಿಲ್ಲ. ‘ಘಜ್ವಾ-ಎ-ಹಿಂದ್’ ಅನ್ನು ಕಲ್ಪಿಸಿಕೊಳ್ಳುವುದು ಅಥವಾ ಅದರ ಬಗ್ಗೆ ಕನಸು ಕಾಣುವುದು ಸಹ ನರಕಕ್ಕೆ ಟಿಕೆಟ್ ಪಡೆಯುವ ಹಾದಿಯನ್ನು ಸೃಷ್ಟಿಸುತ್ತದೆ. ಅಲ್ಲದೆ, ಯಾರಾದರೂ ನರಕಕ್ಕೆ ಹೋಗಲು ಬಯಸಿದರೆ, ಅವರು ಘಜ್ವಾ-ಎ-ಹಿಂದ್ ಹೆಸರಿನಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸಲಿ ಎಂದು ಯೋಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಮುಖ್ಯಮಂತ್ರಿ, ಸರ್ಕಾರ ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಯುಪಿಯಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸುವ ಯಾರೇ ಆಗಲಿ, ಹಾದುಹೋಗುವ ಪಾದಚಾರಿಗಳ ಮೇಲೆ ದಾಳಿ ಮಾಡುವ ಯಾರೇ ಆಗಲಿ, ಹೆಣ್ಣು ಮಕ್ಕಳ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವ ಯಾರೇ ಆಗಲಿ, ಹಬ್ಬಗಳ ಸಮಯದಲ್ಲಿ ಕಲ್ಲು ತೂರುವ ಯಾರೇ ಆಗಲಿ, ಅವರಿಗೆ ನಾವು ನರಕಕ್ಕೆ ಏಕಮುಖ ಟಿಕೆಟ್ ನೀಡುತ್ತೇವೆ ಎಂದು ಯೋಗಿ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್ 26 ರಂದು ಬರೇಲಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಕೊಟ್ವಾಲಿ ಪ್ರದೇಶದ ಮಸೀದಿಯ ಹೊರಗೆ ಐ ಲವ್ ಮುಹಮ್ಮದ್ ಪೋಸ್ಟರ್‌ಗಳನ್ನು ಹಿಡಿದಿದ್ದ ದೊಡ್ಡ ಜನಸಮೂಹ ಪೊಲೀಸರೊಂದಿಗೆ ಜಗಳವಾಡಿದ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಎಚ್ಚರಿಕೆ ಬಂದಿದೆ. ಸ್ಥಳೀಯ ಧರ್ಮಗುರು ತೌಕೀರ್ ರಜಾ ಖಾನ್ ಕರೆದಿದ್ದ ಪ್ರಸ್ತಾವಿತ ಪ್ರದರ್ಶನವನ್ನು ರದ್ದುಗೊಳಿಸಿದ್ದಕ್ಕಾಗಿ ಜನಸಮೂಹ ಕೋಪಗೊಂಡಿತ್ತು ಎಂದು ವರದಿಯಾಗಿದೆ.

[t4b-ticker]
error: Content is protected !!