ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿ ಪೀಠ; ಕೇಂದ್ರಕ್ಕೆ ಸಂಸದ ಕ್ಯಾ.ಚೌಟ ಪತ್ರ

Picture of Savistara

Savistara

Bureau Report

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಕೋರಿ ಮಾನ್ಯ ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು , ಭಾರತ ಸರ್ಕಾರದ ಗೌರವಾನ್ವಿತ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ರವರಿಗೆ ಬರೆದ ಪತ್ರ ಬರೆದಿದ್ದಾರೆ.ಪ್ರಸ್ತುತ ಬೆಂಗಳೂರು ಹೈಕೋರ್ಟ್‌ನಲ್ಲಿರುವ ಒಟ್ಟು ಪ್ರಕರಣಗಳಲ್ಲಿ ಸುಮಾರು 30% ಪ್ರಕರಣಗಳು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿವೆ. ನ್ಯಾಯಕ್ಕಾಗಿ ಈ ಭಾಗದ ಜನ ಸಾಮಾನ್ಯರು ಸುಮಾರು 370 ಕಿ.ಮೀ ದೂರದ ಬೆಂಗಳೂರಿಗೆ ಅಲೆಯುವ ಸಂಕಷ್ಟ ತಪ್ಪಿಸಲು ಹಾಗೂ ಕರ್ನಾಟಕದ ಎರಡನೇ ಅತಿ ದೊಡ್ಡ ಆರ್ಥಿಕ ಕೇಂದ್ರವಾಗಿ ಬೆಳೆಯುತ್ತಿರುವ ಮಂಗಳೂರಿನ ವಿಸ್ತರಣೆಗೆ ಪೂರಕವಾಗಿ ಈ ನ್ಯಾಯಾಂಗ ವಿಕೇಂದ್ರೀಕರಣ ತುರ್ತಾಗಿ ಆಗಬೇಕಿದೆ ಎಂದು ಸಂಸದರು ಈ ಪ್ರಸ್ತಾವನೆಯಲ್ಲಿ ವಿನಂತಿಸಿಕೊಂಡಿದ್ದಾರೆ.

[t4b-ticker]
error: Content is protected !!