BCCI: ಭಾರತದ ವಿರುದ್ಧ ಯುದ್ಧ ಸಾರುತ್ತಿರುವ ವ್ಯಕ್ತಿಯಿಂದ ಭಾರತ ಏಷ್ಯಾಕಪ್ ಟ್ರೋಫಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಂಡದ ನಿರಾಕರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.ಈ ಬಗ್ಗೆ ಮಾತನಾಡಿದ ಸೈಕಿಯಾ, ಟ್ರೋಫಿ ವಿತರಣೆಯ ವಿಷಯದಲ್ಲಿ, ನಮ್ಮ ದೇಶದ ವಿರುದ್ಧ ಯುದ್ಧ ಮಾಡುತ್ತಿರುವ ವ್ಯಕ್ತಿಯಿಂದ ಭಾರತವು ಟ್ರೋಫಿಯನ್ನು ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ನಾವು ಟ್ರೋಫಿಯನ್ನು ಸ್ವೀಕರಿಸದಿರಲು ನಿರ್ಧಾರ ತೆಗೆದುಕೊಂಡಿದ್ದೇವೆ. ಆದರೆ, ಆ ವ್ಯಕ್ತಿ ಟ್ರೋಫಿ ಮತ್ತು ಪದಕಗಳನ್ನು ತಮ್ಮ ಹೋಟೆಲ್‌ಗೆ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಸೈಕಿಯಾ ಹೇಳಿದ್ದಾರೆ.ಮುಂದುವರೆದು ಮಾತನಾಡಿದ ಸೈಕಿಯಾ, ಇದು ಅನಿರೀಕ್ಷಿತ, ತುಂಬಾ ಬಾಲಿಶ ಸ್ವಭಾವದ್ದಾಗಿದೆ. ಇದೆ ನವೆಂಬರ್ ಮೊದಲ ವಾರದಲ್ಲಿ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ನಾವು ಐಸಿಸಿಯೊಂದಿಗೆ ಬಲವಾದ ಪ್ರತಿಭಟನೆಯನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲೆ, ನಬ್ಬಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ಮತ್ತು ಪಾಕ್‌ನ ಆಂತರಿಕ ಸಚಿವರೂ ಆಗಿದ್ದಾರೆ.
ಏಷ್ಯಾ ಕಪ್‌ನಲ್ಲಿ ಭಾರತದ ಅಜೇಯ ಓಟಕ್ಕಾಗಿ ಭಾರತೀಯ ತಂಡವನ್ನು ಸೈಕಿಯಾ ಶ್ಲಾಘಿಸಿದರು. ಭಾರತ ಎಲ್ಲಾ ಏಳು ಪಂದ್ಯಗಳನ್ನು ಗೆದ್ದಿದೆ. ಗುಂಪು ಹಂತದಲ್ಲಿ, ಭಾರತ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ನಂತರ, ಸೂಪರ್ 4 ನ ಎಲ್ಲಾ ಮೂರು ಪಂದ್ಯಗಳನ್ನು ಮತ್ತು ಫೈನಲ್ ಅನ್ನು ಸಹ ಗೆದ್ದರು ಎಂದು ಸೈಕಿಯಾ ಹೇಳಿದ್ದಾರೆ.ಭಾರತವು ಈ ಏಳು ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ 3-0 ಅಂತರದಲ್ಲಿ ಜಯಗಳಿಸಿದೆ. ಇದ್ದರಿಂದ ಇದು ದೇಶಕ್ಕೆ ದೊಡ್ಡ ಗೆಲುವಾಗಿದೆ. ಈಗ ಸರ್ಕಾರ ಹೇಳುವಂತೆ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ – ಏಷ್ಯಾ ಕಪ್ ಬಹುರಾಷ್ಟ್ರೀಯ ಪಂದ್ಯಾವಳಿ ಅಥವಾ ಇತರ ಹಲವು ದೇಶಗಳು ಭಾಗವಹಿಸುವ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತೀಯ ತಂಡ, ಅದು ಕ್ರಿಕೆಟ್ ಆಗಿರಲಿ ಅಥವಾ ಫುಟ್ಬಾಲ್ ಆಗಿರಲಿ, ನಾವು ಆಡಬೇಕು ಎಂದಿದೆ.ನಾವು ಆಡದಿದ್ದರೆ, ನಮ್ಮ ಇತರ ಆಟಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ, ಅಂತರರಾಷ್ಟ್ರೀಯ ಒಕ್ಕೂಟಗಳು ಫೆಡರೇಶನ್ ಅನ್ನು ನಿಷೇಧಿಸುತ್ತವೆ. ಇದ್ದರಿಂದ ನಾವು ಕೇಂದ್ರ ಸರ್ಕಾರದ ನೀತಿಯನ್ನು ಅನುಸರಿಸಿದ್ದೇವೆ. ಕೆಲವು ಕಡೆಗಳಿಂದ ಕೆಲವು ಪ್ರತಿಭಟನೆಗಳು ಅಥವಾ ಪ್ರತಿರೋಧ ವ್ಯಕ್ತವಾದರೂ ನಾವು ಭಾಗವಹಿಸಿದ್ದೇವೆ ಎಂದು ಸೈಕಿಯಾ ತಿಳಿಸಿದ್ದಾರೆ.











































