SIR ಕಾರ್ಯ ಬಿಎಲ್ಓ ಗಳಿಗೆ ಗುಡ್ ನ್ಯೂಸ್ | 6000 ಸಾವಿರ ಹೆಚ್ಚುವರಿ ಗೌರವ ಧನ

Picture of Savistara

Savistara

Bureau Report

ಚಂಡೀಗಢ: ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ತೊಡಗಿರುವ ಬೂತ್‌ ಮಟ್ಟದ ಅಧಿಕಾರಿಗಳಿಗೆ (BLO) ಭಾರತೀಯ ಚುನಾವಣಾ ಆಯೋಗವು ಸಿಹಿ ಸುದ್ದಿ ನೀಡಿದೆ. ಈ ಅಧಿಕಾರಿಗಳ ಕಠಿಣ ಶ್ರಮವನ್ನು ಪರಿಗಣಿಸಿ, ವಾರ್ಷಿಕ ಗೌರವ ಧನದ ಜೊತೆಗೆ ಹೆಚ್ಚುವರಿಯಾಗಿ 6,000 ರೂ.ಗಳ ಒಂದು ಬಾರಿಯ ವಿಶೇಷ ಗೌರವ ಧನವನ್ನು ಮಂಜೂರು ಮಾಡಿದೆ.

ಯಾರಿಗೆ ಸಿಗಲಿದೆ ಈ ಸೌಲಭ್ಯ?

ಚುನಾವಣಾ ಆಯೋಗವು ಮಂಗಳವಾರ ಹೊರಡಿಸಿರುವ ಆದೇಶದಂತೆ, ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುವ ಬೂತ್ ಮಟ್ಟದ ಅಧಿಕಾರಿಗಳು (BLO) ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರಿಗೆ ಈ ಹಣ ಲಭಿಸಲಿದೆ. ಕೆಲಸದ ಸ್ವರೂಪ ಮತ್ತು ಹೆಚ್ಚಿನ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಈ ಬೋನಸ್ ಘೋಷಿಸಲಾಗಿದೆ.

ಕರ್ನಾಟಕಕ್ಕೂ ಅನ್ವಯ:

ಈ ಯೋಜನೆಯು ಕರ್ನಾಟಕ ಸೇರಿದಂತೆ ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ದೆಹಲಿ ಸೇರಿದಂತೆ ಒಟ್ಟು 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ಈ ಕುರಿತು ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಆಯೋಗವು ಅಧಿಕೃತ ಮಾಹಿತಿ ರವಾನಿಸಿದೆ.

ಚುನಾವಣಾ ಆಯೋಗವು ಮೇ ತಿಂಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಮೂರನೇ ಹಂತವನ್ನು ಆರಂಭಿಸಿತ್ತು. ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿಗೆ ಆರ್ಥಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಲಕ್ಷಾಂತರ ಬಿಎಲ್‌ಒಗಳಿಗೆ ಆರ್ಥಿಕ ಅನುಕೂಲವಾಗಲಿದೆ.

[t4b-ticker]
error: Content is protected !!