ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದ್ದು, ದೇಶದ ಮೊದಲ ಖಾಸಗಿ ಕಕ್ಷೀಯ ಉಡಾವಣಾ ರಾಕೆಟ್ ‘ವಿಕ್ರಮ್-1’ ಯಶಸ್ವಿಯಾಗಿ ಬಾಹ್ಯಾಕಾಶದತ್ತ ಹಾರಿದೆ. ಹೈದರಾಬಾದ್ ಮೂಲದ ಸೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ಈ ರಾಕೆಟ್‌ನ ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
‘ಮಿಷನ್ ಆಗಮನ’ ಯಶಸ್ವಿ ಆರಂಭ’
ಮಿಷನ್ ಆಗಮನ’ ಎಂದು ಹೆಸರಿಸಲಾದ ಈ ಉಡಾವಣೆ ಶನಿವಾರ ಮಧ್ಯಾಹ್ನ 12.05 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನೆರವೇರಿತು. ತಾಂತ್ರಿಕ ಪರಿಶೀಲನೆಯ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮೂಲ ನಿಗದಿತ ಸಮಯಕ್ಕಿಂತ ಸುಮಾರು 35 ನಿಮಿಷ ತಡವಾಗಿ ನಡೆಸಲಾಯಿತು. ಎಲ್ಲಾ ಪ್ರಾಥಮಿಕ ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದಾಗಿ ಸಂಸ್ಥೆ ತಿಳಿಸಿದೆ.
450 ಕಿ.ಮೀ. ಎತ್ತರದ ಕಕ್ಷೆಗೆ ಪಯಣಸುಮಾರು 16 ನಿಮಿಷಗಳ ಹಾರಾಟದ ಬಳಿಕ, ವಿಕ್ರಮ್-1 ವಿವಿಧ ದೇಶೀಯ ಹಾಗೂ ವಿದೇಶಿ ಪೇಲೋಡ್‌ಗಳನ್ನು 450 ಕಿಲೋಮೀಟರ್ ಎತ್ತರದ ಲೋ ಅರ್ಥ್ ಆರ್ಬಿಟ್ (LEO) ಕಕ್ಷೆಗೆ ತಲುಪಿಸುವ ಗುರಿಯನ್ನು ಹೊಂದಿದೆ. ಈ ಮಿಷನ್ ಮೂಲಕ ಹಲವು ಹೊಸ ತಂತ್ರಜ್ಞಾನಗಳ ಕಾರ್ಯಕ್ಷಮತೆಯನ್ನೂ ಪರೀಕ್ಷಿಸಲಾಗುತ್ತಿದೆ.ಮೋದಿ ಸಂದೇಶವೂ ಬಾಹ್ಯಾಕಾಶಕ್ಕೆಈ ಐತಿಹಾಸಿಕ ಉಡಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ವಂದೇ ಮಾತರಂ’ ಸಂದೇಶ ಹೊಂದಿರುವ ವಿಶೇಷ ಸ್ಮರಣಿಕೆ ಕಾರ್ಡ್ ಕೂಡ ಬಾಹ್ಯಾಕಾಶದತ್ತ ಕೊಂಡೊಯ್ಯಲಾಗಿದೆ. ಜೊತೆಗೆ ವಿಶ್ವದ ವಿವಿಧ ಭಾಗಗಳ ಜನರು ಕಳುಹಿಸಿರುವ ಶುಭಾಶಯ ಸಂದೇಶಗಳು ಹಾಗೂ ‘ಕಾಸ್ಮಿಕ್ ಬ್ಲೂಮ್’ ಹೆಸರಿನ ವಿಶೇಷ ಕಲಾಕೃತಿಯನ್ನೂ ರಾಕೆಟ್ ಹೊತ್ತೊಯ್ದಿದೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಹೆಸರಿನ ಈ ರಾಕೆಟ್ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನ ಆಧಾರಿತವಾಗಿದೆ. ಕಾರ್ಬನ್ ಕಾಂಪೋಸಿಟ್ ರಚನೆ, 3ಡಿ ಮುದ್ರಿತ ಎಂಜಿನ್‌ಗಳು ಹಾಗೂ ಅತ್ಯಾಧುನಿಕ ಘನ ಇಂಧನ ಪ್ರೊಪಲ್ಸನ್ ವ್ಯವಸ್ಥೆ ಇದರ ಪ್ರಮುಖ ವಿಶೇಷತೆಗಳಾಗಿವೆ.
ಖಾಸಗಿ ಬಾಹ್ಯಾಕಾಶ ವಲಯಕ್ಕೆ ಹೊಸ ದಿಕ್ಕು
ಖಾಸಗಿ ಬಾಹ್ಯಾಕಾಶ ವಲಯಕ್ಕೆ ಹೊಸ ದಿಕ್ಕುವಿಕ್ರಮ್-1 ಯಶಸ್ಸಿನೊಂದಿಗೆ ಭಾರತದಲ್ಲಿ ಖಾಸಗಿ ಕಂಪನಿಗಳಿಗೂ ಬಾಹ್ಯಾಕಾಶ ಉಡಾವಣಾ ಸೇವೆ ನೀಡುವ ಹೊಸ ಅವಕಾಶಗಳು ತೆರೆದಿವೆ. ಭವಿಷ್ಯದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸೇವೆಯನ್ನು ವಾಣಿಜ್ಯ ಮಟ್ಟದಲ್ಲಿ ಒದಗಿಸುವ ಗುರಿಯನ್ನು ಸೈರೂಟ್ ಹೊಂದಿದ್ದು, ಈ ಯಶಸ್ಸು ಭಾರತದ ಬಾಹ್ಯಾಕಾಶ ಆರ್ಥಿಕತೆಗೆ ಹೊಸ ವೇಗ ನೀಡುವ ನಿರೀಕ್ಷೆ ಮೂಡಿಸಿದೆ.










































