ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 2 ಕೋಟಿ10 ಲಕ್ಷ ಅನುದಾನ ಬಿಡುಗಡೆ : ಶಾಸಕಿ ಭಾಗೀರಥಿ ಮುರುಳ್ಯ ಮಾಹಿತಿ

Picture of Savistara

Savistara

Bureau Report

2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 50-54 ಕಾರ್ಯಕ್ರಮದಡಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿವಿಧ ಕಾಮಗಾರಿ ಮೊತ್ತ 2ಕೋಟಿ 10ಲಕ್ಷ ರೂ. ಅನುದಾನ ಬಿಡುಗಡೆಗೊಂಡಿರುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ಮಾಹಿತಿ ನೀಡಿದ್ದಾರೆ.ಈ ಅನುದಾನದಲ್ಲಿ ಸ.ಕಿ.ಪ್ರಾ ಶಾಲೆ ರಂಗತ್ತಮಲೆ ಬಳಿ 300 ಮೀಟ‌ರ್ ರಸ್ತೆ ಡಾಂಬರೀಕರಣ -10.00ಲಕ್ಷ,

1. ಮುರುಳ್ಯ ಗ್ರಾಮದ ಮಾಣಿಯಡ್ಕ- ಪುಣಚತ್ತಾರು ರಸ್ತೆ ಕಾಮಗಾರಿ – 25.00 ಲಕ್ಷ

2. ಮರ್ಕಂಜ ಗ್ರಾಮದ ಬೊಮ್ಮಾರು – ಕೊಟ್ರಡ್ಕ ಡ್ಕ ರಸ್ತೆ ಕಾಮಗಾರಿ -25.00 ಲಕ್ಷ

3. ಅರಂತೋಡು ಗ್ರಾಮದ ಅರಂತೋಡು ಪಿಂಗಾರ ತೋಟ ಅಡ್ಕಬಳೆ -ರೆಂಜಾಳ ರಸ್ತೆ ಕಾಮಗಾರಿ -25.00 ಲಕ್ಷ

4. ಐವರ್ನಾಡು ಗ್ರಾಮದ ಕೃಷಿ ಕಾಲೋನಿ ರಸ್ತೆ ಕಾಮಗಾರಿ 30.00

5. ಅಮರಮುನ್ನೂರು ಗ್ರಾಮದ ಶಾಂತಿಮೂಲೆ -ಕಡಪಾಲ ರಸ್ತೆ ಕಾಮಗಾರಿ – 10.00 ಲಕ್ಷ

6. ಅಲೆಟ್ಟಿ ಗ್ರಾಮದ ಆಸ್ಪಾರೆ-ಆಲೆಟ್ಟಿ ರಸ್ತೆ ಕಾಮಗಾರಿ -25.00 ಲಕ್ಷ

7. ಸುಳ್ಯ ತಾಲ್ಲೂಕು ಜಾಲ್ಲೂರು ಗ್ರಾಮದ ಕೆಮನಬಳ್ಳಿ ರಸ್ತೆ ಕಾಮಗಾರಿ – 10.00 ಲಕ್ಷಗಳು

8. ಕೊಡಿಯಾಲ ಗ್ರಾಮದ ಕಲ್ಲಗದ್ದೆ – ಪೊಟ್ರೆ- ಗ್ರಾಮ ಪಂಚಾಯತ್ ಕೇರಿವರೆಗೆ ರಸ್ತೆ ಕಾಮಗಾರಿ – 25.00 ಲಕ್ಷ

9. ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು-ಚೆನ್ನಡ್ಕ ರಸ್ತೆ ಕಾಮಗಾರಿ – 25.00 ಲಕ್ಷದಂತೆ ಹಂಚಿಕೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

[t4b-ticker]
error: Content is protected !!