ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ, ನನ್ನ ಹಕ್ಕು: ಸಿ.ಎಂ ಸತೀಶನ್

Picture of Savistara

Savistara

Bureau Report

ತಿರುವನಂತಪುರ (ಪಿಟಿಐ): ‘ಮೃದು ಹಿಂದುತ್ವ’ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ‘ದೇವಸ್ಥಾನಕ್ಕೆ ಹೋಗುವುದು ನನ್ನ ವೈಯಕ್ತಿಯ ಹಕ್ಕು. ದೇವರನ್ನು ನಂಬುವ ಸಾಂವಿಧಾನಿಕ ಹಕ್ಕು ನನಗಿದೆ’ ಎಂದು ಹೇಳಿದ್ದಾರೆ.

ಸತೀಶನ್ ಅವರು ಇತ್ತೀಚೆಗೆ ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ‘ಸತೀಶನ್ ಅವರು ‘ಮೃದು ಹಿಂದುತ್ವ’ವನ್ನು ಅನುಸರಿಸುತ್ತಿದ್ದಾರೆ’ ಎಂಬ ಆರೋಪಗಳು ಕೇಳಿಬಂದಿದ್ದವು.ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕಳೆದ 37 ವರ್ಷಗಳಿಂದ ನಾನು ಮೂಕಾಂಬಿಕೆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ನಾನು ಆ ದೇವಿಯ ಭಕ್ತ. ಇದನ್ನು ನಾನು ಸಂತೋಷದಿಂದ ಹೇಳಿಕೊಳ್ಳುತ್ತೇನೆ. ಇದನ್ನು ‘ಮೃದು ಹಿಂದುತ್ವ’ ಎಂದು ಕರೆಯಲು ಹೇಗೆ ಸಾಧ್ಯ. ಹೀಗೆ ಹೇಳುವವರು ಯಾವ ಪ್ರಪಂಚದಲ್ಲಿ ಇದ್ದಾರೆ? ಪೂಜಾ ಸ್ಥಳಗಳಿಗೆ ಭೇಟಿ ನೀಡುವ ಎಲ್ಲರನ್ನೂ ಇವರು ಅವಮಾನಿಸುತ್ತಿದ್ದಾರೆ’ ಎಂದು ಹೇಳಿದರು.“ಒಂದು ವೇಳೆ ಮುಖ್ಯಮಂತ್ರಿಯಾದ ಬಳಿಕ ನಾನು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರೆ ಅದು ವಿಚಿತ್ರವಾಗಿರುತ್ತಿತ್ತು. ‘ಮೃದು ಹಿಂದುತ್ವ’ ಎನ್ನುವುದು ಆಧಾರರಹಿತವಾಗಿದೆ’ ಎಂದು ಸತೀಶನ್ ಹೇಳಿದರು.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!