ಉಪವಾಸ ಅಂತ್ಯಗೊಳಿಸಿ ಎಂದು ಹೇಳುವ ಬದಲು ಪ್ರತಿಭಟನೆಯಲ್ಲಿ ಭಾಗಿಯಾಗಿ: ವಾಂಗ್ಚೂಕ್

Picture of Savistara

Savistara

Bureau Report

ನವದೆಹಲಿ: ರಾಜಕೀಯ ನಾಯಕರು ಮತ್ತು ಬೆಂಬಲಿಗರಮನವಿಯ ಹೊರತಾಗಿಯೂ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂದು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಟಕ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರುವ ಮುನ್ನ ಹೋರಾಟ ನಿಲ್ಲಿಸಿದರೆ ತಪ್ಪು ಸಂದೇಶ ಹೋಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬುಧವಾರ ರಾತ್ರಿ ಹಂಚಿಕೊಂಡ ವಿಡಿಯೊ ಸಂದೇಶದಲ್ಲಿ ವಾಂಗ್ರೂಕ್, ‘ಉಪವಾಸ ಅಂತ್ಯಗೊಳಿಸುವಂತೆ ಸಾವಿರಾರು ಮಂದಿ ನನಗೆ ಸಂದೇಶ ಕಳುಹಿಸಿದ್ದಾರೆ. ಅನೇಕ ಹಿರಿಯ ರಾಜಕಾರಣಿಗಳು ನನ್ನ ಬಳಿಗೆ ಬಂದು ಪ್ರೀತಿ, ಕಾಳಜಿಯಿಂದ ಮಾತನಾಡಿದ್ದಾರೆ. ಆದರೆ ನಾನು ಈಗ ಉಪವಾಸ ಬಿಟ್ಟರೆ ಸರ್ಕಾರಕ್ಕೆ ಏನು ಸಂದೇಶ ಹೋಗುತ್ತದೆ? ಪ್ರತಿಭಟನೆ ಮಾಡುವವರು ಬಂದು ಹಾಗೇ ಹೊರಟು ಹೋಗುತ್ತಾರೆ, ಅವರಿಗೆ ನಾವು ಉತ್ತರ ಕೊಡುವ ಅಗತ್ಯವಿಲ್ಲ ಎಂದು ಸರ್ಕಾರ ಅಂದುಕೊಳ್ಳುತ್ತದೆ. ಉಪವಾಸ ಕೊನೆಗೊಳಿಸಿದರೆ ಏನು ಬದಲಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.ಮುಂದುವರಿದು, ಉಪವಾಸ ನಿಲ್ಲಿಸಲು ಕೇಳುವ ಬದಲು, ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿರುವ ಸಂಸತ್ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಂದು ಅವರು ವಿದ್ಯಾರ್ಥಿಗಳು ಹಾಗೂ ಜನರಲ್ಲಿ ಮನವಿ ಮಾಡಿದ್ದಾರೆ.

ಆರೋಗ್ಯ ಸ್ಥಿರ

ಸೋನಮ್ ಅವರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿ ಎಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಪಿಐಎಲ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಆರೋಗ್ಯಕ್ಕೆ ಯಾವುದೇ ತಕ್ಷಣದ ಅಪಾಯವಿಲ್ಲ. ಇಸಿಜಿ ಸೇರಿದಂತೆ ಎಲ್ಲಾ ವೈದ್ಯಕೀಯ ವರದಿಗಳು ನಾರ್ಮಲ್ ಆಗಿವೆ. ಸ್ನಾಯುಗಳು ಸ್ವಲ್ಪ ನಿಶಕ್ತವಾಗಿದ್ದರೂ, ನನ್ನ ಹೃದಯ ಮತ್ತು ಆತ್ಮವಿಶ್ವಾಸ ಗಟ್ಟಿಯಾಗಿದೆ. ಇನ್ನೂ ಹಲವು ದಿನ ಹೋರಾಡಬಲ್ಲೆ’ ಎಂದಿದ್ದಾರೆ.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಬೆಂಬಲಿಸಿ ಸೋನಮ್ ವಾಂಗ್ಟಕ್ ಅವರು 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

[t4b-ticker]
error: Content is protected !!