ಒಟ್ಟಾಗಿ 186 ಐಷಾರಾಮಿ ಕಾರುಗಳನ್ನು ಖರೀದಿಸಿ 21.22 ಕೋಟಿ ರೂ.ಗಳ ಭರ್ಜರಿ ಉಳಿತಾಯ ಮಾಡಿದ ಗುಜರಾತಿನ ಜೈನ ಸಮುದಾಯ!

Picture of Savistara

Savistara

Bureau Report

ಅಹಮದಾಬಾದ್: ಹಣ ಸಂಪಾದಿಸುವ ತಮ್ಮ ಉದ್ಯಮಶೀಲ ಮನೋಭಾವದಿಂದ ಗುಜರಾತಿಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಆದರೆ, ಅವರ ಚುರುಕಾದ ವ್ಯಾಪಾರ ಜ್ಞಾನ ಮತ್ತು ಬಲವಾದ ಸಮುದಾಯ ಸಂಬಂಧಗಳಿಂದಾಗಿ ಹಣ ಉಳಿತಾಯ ಮಾಡಲು ಅತ್ಯುತ್ತಮ ಚೌಕಾಶಿ ಒಪ್ಪಂದಗಳನ್ನು ಮಾಡಿಕೊಳ್ಳಬಲ್ಲರು. ಇದಕ್ಕೆ ತಾಜಾ ಉದಾಹರಣೆ ಗುಜರಾತಿನ ಜೈನ್ ಸಮುದಾಯ. ದೀಪಾವಳಿಯ ಆಫರ್‌ ಜೊತೆಗೆ ಭರ್ಜರಿ ಹಣವನ್ನೂ ಸಹ ಉಳಿಸಿದ್ದಾರೆ.ಜೈನರ ಅಂತಾರಾಷ್ಟ್ರೀಯ ವ್ಯಾಪಾರಿ ಸಂಘಟನೆ ಉಪಕ್ರಮ (JITO)ದ ಅಡಿಯಲ್ಲಿ, ಸಮುದಾಯದ ಸದಸ್ಯರು ದೇಶಾದ್ಯಂತ ಒಟ್ಟು 186 ಐಷಾರಾಮಿ ಕಾರುಗಳನ್ನು ಸಾಮೂಹಿಕವಾಗಿ ಖರೀದಿಸಿದ್ದಾರೆ. ಅಷ್ಟೇ ಅಲ್ಲ, ಒಟ್ಟಾಗಿ ಕಾರು ಖರೀದಿಸಿದ್ದರ ಪರಿಣಾಮವಾಗಿ 21.22 ಕೋಟಿ ರೂ.ಗಳ ರಿಯಾಯಿತಿಯನ್ನು ಸಹ ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಆಡಿ, ಮರ್ಸಿಡಿಸ್‌ ನಂತಹ ಕಾರುಗಳ ಬೆಲೆ 60 ಲಕ್ಷ ರೂ.ನಿಂದ 1.34 ಕೋಟಿ ರೂ. ವರೆಗೆ ಇದೆ. ಆದರೆ, ಜೈನ ಸಮುದಾಯದ ಜಾಣ್ಮೆಯಿಂದಾಗಿ ಅತಿ ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಖರೀದಿಸಲು ಸಾಧ್ಯವಾಗಿದೆ.

ಡೀಲ್‌ ಕುದುರಿಸಿದ್ದು ಹೇಗೆ?

ಈ ದೇಶಾದ್ಯಂತದ ಸಾಮೂಹಿಕ ಖರೀದಿಯಲ್ಲಿ ಅಹಮದಾಬಾದ್ ಸೇರಿದಂತೆ ಗುಜರಾತಿಗಳ ಪಾಲು ಗಣನೀಯವಾಗಿದೆ. ದೇಶಾದ್ಯಂತ ಸುಮಾರು 65,000 ಸದಸ್ಯರನ್ನು ಹೊಂದಿರುವ JITO ಸಂಸ್ಥೆಯು ಆಡಿ, ಬಿಎಂಡಬ್ಲ್ಯು , ಮರ್ಸಿಡಿಸ್ ಮತ್ತು ಸ್ಯಾಮ್‌ಸಂಗ್ ಸೇರಿದಂತೆ 15 ಪ್ರಮುಖ ಬ್ರ್ಯಾಂಡ್‌ಗಳ ವಿತರಕರೊಂದಿಗೆ ಮಾತುಕತೆ ನಡೆಸಿ ತನ್ನ ಸದಸ್ಯರಿಗೆ ಉತ್ತಮ ಬೆಲೆಗಳನ್ನು ಖಚಿತಪಡಿಸಿದೆ.”ಸಮುದಾಯದ ಮೂಲಕ ಸಾಮೂಹಿಕವಾಗಿ ಖರೀದಿಸುವುದು ನಮಗೆ ಹೆಚ್ಚು ಚೌಕಾಶಿ ಮಾಡುವ ಶಕ್ತಿಯನ್ನು ನೀಡುತ್ತದೆ. ಇದರಿಂದ ಬ್ರ್ಯಾಂಡ್‌ಗಳಿಗೆ ಖಚಿತವಾದ ಮಾರಾಟದ ಪ್ರಮಾಣ ಮತ್ತು ಕಡಿಮೆ ಮಾರುಕಟ್ಟೆ ವೆಚ್ಚದ ಲಾಭವಾಗುತ್ತದೆ, ಆದರೆ ನಮ್ಮ ಸದಸ್ಯರಿಗೆ ಗಣನೀಯ ಉಳಿತಾಯವಾಗುತ್ತದೆ. ಈ ಒಂದು ಖರೀದಿಯ ಮೂಲಕ, ಸದಸ್ಯರು ಒಟ್ಟಾಗಿ 149.54 ರೂ. ಕೋಟಿ ಮೌಲ್ಯದ ಐಷಾರಾಮಿ ಕಾರುಗಳನ್ನು ಖರೀದಿಸಿ, 21.22 ರೂ. ಕೋಟಿ ರೂ.ಗಳನ್ನು ಉಳಿಸಿದ್ದಾರೆ” ಎಂದು JITO ಅಪೆಕ್ಸ್‌ನ ಉಪಾಧ್ಯಕ್ಷ ಹಿಮಾಂಶು ಶಾ ತಿಳಿಸಿದ್ದಾರೆ.ಎಲೆಕ್ಟ್ರಾನಿಕ್ಸ್, ಔಷಧಿಗಳ ಖರೀದಿಗೂ ಇದೇ ತಂತ್ರಈ ಯಶಸ್ಸಿನಿಂದ ಪ್ರೋತ್ಸಾಹಿತವಾದ ಜೈನರ ಅಂತಾರಾಷ್ಟ್ರೀಯ ವ್ಯಾಪಾರಿ ಸಂಘಟನೆ, ಸಾಮೂಹಿಕ ಖರೀದಿಗೆಂದೇ ಮೀಸಲಾದ ಒಂದು ವಿಭಾಗವನ್ನು ಸ್ಥಾಪಿಸಿದ್ದು, ಈಗ ಎಲೆಕ್ಟ್ರಾನಿಕ್ಸ್, ಔಷಧಿಗಳು, ಆಭರಣ ಮತ್ತು ಇತರ ಕ್ಷೇತ್ರಗಳಿಗೂ ಇಂತಹ ಡೀಲ್‌ಗಳನ್ನು ವಿಸ್ತರಿಸಲು ಮುಂದಾಗಿದೆ.ಜೆಸಿಬಿ ಯಂತ್ರಗಳ ಸಾಮೂಹಿಕ ಖರೀದಿಬೃಹತ್ ಖರೀದಿಯ ಈ ಪ್ರವೃತ್ತಿ ಕೇವಲ ಜೈನರಿಗೆ ಮಾತ್ರ ಸೀಮಿತವಾಗಿಲ್ಲ. ಭರವಾಡ್ ಸಮುದಾಯವೂ ಇದೇ ತಂತ್ರವನ್ನು ಪಾಲಿಸಿದೆ. ತಮ್ಮ ಸಮುದಾಯದ ಯುವ ಸದಸ್ಯರಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಉಪಕ್ರಮದಡಿಯಲ್ಲಿ, ಭರವಾಡ್ ಯುವ ಸಂಘಟನ್ ಗುಜರಾತ್ ಇತ್ತೀಚೆಗೆ ಒಟ್ಟು 121 ಜೆಸಿಬಿ ಯಂತ್ರಗಳಿ ಖರೀದಿಗೆ ಆರ್ಡರ್‌ ನೀಡಿತ್ತು. ಇದರ ಫಲವಾಗಿ ಅವರು ಒಂದು ಜೆಸಿಬಿ ಯತ್ರದ ಮೇಲೆ ಸರಾಸರಿ 3.3 ಲಕ್ಷ ರಿಯಾಯಿತಿ ಪಡೆದು, ಒಟ್ಟು ಸುಮಾರು 4 ಕೋಟಿ ರೂ. ಉಳಿಸಿದ್ದಾರೆ.

[t4b-ticker]
error: Content is protected !!