ಮುಜಫರ್ನಗರ(ಉತ್ತರ ಪ್ರದೇಶ): ಮಾಜಿ ಕೇಂದ್ರ ಸಚಿವಸಂಜೀವ್ ಬಲ್ಯಾನ್ ಅವರು ಸ್ಥಳೀಯ ಕಾಲೇಜೊಂದರಲ್ಲಿ ಕಾನೂನು ಪದವಿಗೆ ಸೇರಿಕೊಂಡಿದ್ದಾರೆ.
ಮುಜಫರ್ನಗರ ಕ್ಷೇತ್ರದಿಂದ 2014 ಹಾಗೂ 2019ರಲ್ಲಿ ಎರಡು ಬಾರಿ ಸಂಸದರಾಗಿದ್ದ ಸಂಜೀವ್ ಬಲ್ಯಾನ್, ಮೋದಿ ಸರ್ಕಾರದಲ್ಲಿ ಎರಡು ಬಾರಿ ರಾಜ್ಯ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.“ಸ್ಥಳೀಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಎಲ್ಎಲ್ಬಿ ಪದವಿಗೆ ಸೇರಿಕೊಂಡಿದ್ದೇನೆ’ ಎಂದು 53 ವರ್ಷದ ಸಂಜೀವ್ ಬಲ್ಯಾನ್ ತಿಳಿಸಿದ್ದಾರೆ.2024ರ ಲೋಕಸಭಾ ಚುನಾವಣೆಯ ಅಫಡವಿಟ್ ಪ್ರಕಾರ, ಸಂಜೀವ್ ಬಲ್ಯಾನ್ ಅವರು ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾನಿಲಯದಿಂದ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ಪದವಿ ಪಡೆದಿದ್ದಾರೆ.
Advertisement

ಅದೇ ವಿಶ್ವವಿದ್ಯಾನಿಲಯದಿಂದ ಪಶುವೈದ್ಯಕೀಯ ಅಂಗರಚನಾಶಾಸ್ತ್ರದಲ್ಲಿ ಪಿ.ಎಚ್ಡಿ ಕೂಡ ಮಾಡಿದ್ದಾರೆ.
Advertisement












































