ಪ್ರಧಾನಿ ಮೋದಿಯ ತಾಯಿ ಪಾತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಆಯ್ಕೆ

Picture of Savistara

Savistara

Bureau Report

ಮುಂಬಯಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗಿಂದು 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಬಯೋಪಿಕ್ ಸಿನಿಮಾವಾಗಿ ಬರಲಿದೆ ಎನ್ನುವ ಬಗ್ಗೆ ಘೋಷಣೆ ಆಗಿತ್ತು.ಮೋದಿ ಜೀವನ ಕಥೆಯ ಸಿನಿಮಾಕ್ಕೆ ‘ಮಾ ವಂದೇ’ (Maa Vande: The Anthem Of A Mother) ಎನ್ನುವ ಟೈಟಲ್ ಇಡಲಾಗಿದೆ.’ಮಾರ್ಕೋ’ ಸ್ಟಾರ್ ಉನ್ನಿ ಮುಕುಂದನ್ (Malayalam actor Unni Mukundan) ನರೇಂದ್ರ ಮೋದಿ ಅವರ ಪಾತ್ರವನ್ನು ಮಾಡಲಿದ್ದಾರೆ. ಚಿತ್ರದ ಟೈಟಲ್ ಪ್ರಧಾನಿ ಪಾರ್ಲಿಮೆಂಟ್ ಮುಂದೆ ನಿಂತು ಕಡತವೊಂದಕ್ಕೆ ಸಹಿ ಹಾಕುವ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.ಇದೀಗ ‘ಮಾ ವಂದೇ’ ಸಿನಿಮಾದ ಪ್ರಮುಖ ಪಾತ್ರವೊಂದರ ಬಗ್ಗೆ ಅಪ್ಲೇಟ್ ಸಿಕ್ಕಿದೆ. ಕ್ರಾಂತಿ ಕುಮಾ‌ರ್ ಸಿಎಚ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮದಲ್ಲಿ ಬಾಲಿವುಡ್ ಖ್ಯಾತಿಯ ರವಿನ ಟೆಂಡನ್ (Raveena Tondon) ನಟಿಸುತ್ತಿದ್ದಾರೆ.ನರೇಂದ್ರ ಮೋದಿ ಅವರ ತಾಯಿ ತಾಯಿ ಹೀರಾಬೆನ್ ಪಾತ್ರದಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ.

”ಮಾ ವಂದೇ ಸಿನಿಮಾ ತಾಯಿ-ಮಗನ ಸಂಬಂಧವನ್ನು ಕೇಂದ್ರೀಕರಿಸುವ ಸಿನಿಮಾವಾಗಿರಲಿದೆ. ಈ ಪಾತ್ರಕ್ಕೆ ಈಗಾಗಲೇ ‘ಕೆಜಿಎಫ್’ನಂತಹ ಸಿನಿಮಾದಲ್ಲಿ ಪೋಷಕ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡಿರುವ ರವೀನಾ ಟಂಡನ್ ಅವರು ಉತ್ತಮ ಆಯ್ಕೆ ಎನ್ನುವುದು ಚಿತ್ರತಂಡ ಅಭಿಪ್ರಾಯವಾಗಿದೆ.ನರೇಂದ್ರ ಮೋದಿ ಅವರ ಬಾಲ್ಯದಿಂದ – ಪ್ರಧಾನಿ ಸ್ಥಾನದವರೆಗಿನ ಯಶೋಗಾಥೆ ಸಿನಿಮಾದಲ್ಲಿರಲಿದೆ ಎನ್ನಲಾಗಿದೆ. ಅವರ ಯಶಸ್ಸಿನ ಕಥೆಗೆ ಅವರ ತಾಯಿ ಕೂಡ ಒಂದು ಪ್ರಮುಖ ಕಾರಣ.ಸಿಲ್ವರ್ ಕಾಸ್ಟ್ ಕ್ರಿಯೇಷನ್ಸ್ ಬ್ಯಾನ‌ರ್ ಅಡಿಯಲ್ಲಿ ವೀರ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರವಿ ಬಸೂರು ಅವರ ಮ್ಯೂಸಿಕ್ ಚಿತ್ರಕ್ಕಿರಲಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!