ಚಂಡೀಗಢ: ಮುಂದಿನ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಈಗಾಗಲೇ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಪಂಜಾಬ್ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆಯನ್ನು ದೈನಿಕ್ ಭಾಸ್ಕರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ನೀಡಿದೆ.
ಪಂಜಾಬ್‌ನಲ್ಲಿ ಆಡಳಿತದಲ್ಲಿರುವ ಆಮ್ ಆದ್ಮ ಪಾರ್ಟಿಯ ಜನಪ್ರಿಯತೆ ಕುಸಿಯುವ ಸಾಧ್ಯತೆಯಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಆಪ್‌ನ ಕೆಲವು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿರುವುದು ಸೇರಿದಂತೆ ಹಲವು ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಆಪ್‌ನ ಭರ್ಜರಿ ಗೆಲುವಿಗೆ ಬ್ರೇಕ್?
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಬಹುಮತಕ್ಕೆ 59 ಸ್ಥಾನಗಳ ಅಗತ್ಯವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮ ಪಾರ್ಟಿ 91 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 16, ಬಿಜೆಪಿ 6, ಶಿರೋಮಣಿ ಅಕಾಲಿದಳ ಒಂದು ಹಾಗೂ ಇತರರು ಮೂರು ಸ್ಥಾನಗಳನ್ನು ಗೆದ್ದಿದ್ದರು.
ಆದರೆ, ದೈನಿಕ್ ಭಾಸ್ಕರ್‌ನ ಇತ್ತೀಚಿನ ಸಮೀಕ್ಷೆಯ ಪ್ರಕಾರ ಮುಂಬರುವ ಚುನಾವಣೆಯಲ್ಲಿ ಆಪ್‌ನ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ 34 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದು. ಆಪ್ ಕೂಡ ಅಷ್ಟೇ ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆಯನ್ನು ಸಮೀಕ್ಷೆ ವ್ಯಕ್ತಪಡಿಸಿದೆ.ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳ ನಿರೀಕ್ಷೆ?
ದೈನಿಕ್ ಭಾಸ್ಕರ್ ಸಮೀಕ್ಷೆಯ ಪ್ರಕಾರ ಪಕ್ಷಗಳ ಸಂಭವನೀಯ ಸ್ಥಾನಗಳ ವಿವರ ಹೀಗಿದೆ: ರಾಜಕೀಯ ಪಕ್ಷ ಕಳೆದ ಬಾರಿಯ ಸ್ಥಾನ ಸಮೀಕ್ಷೆಯಅಂದಾಜುಆಮ್ ಆದ್ಮ ಪಾರ್ಟಿ 91 34ದಿನಾಂಕ 1634ತಿಂಗಳು 6 30ಶಿರೋಮಣಿ ಅಕಾಲಿದಳ 1 2ವಾರಿಸ್ ಪಂಜಾಬ್ ಡೇ 1 1ಇತರರು / ಟೈ 21
ಮತ ಹಂಚಿಕೆಯಲ್ಲೂ ಬಿಜೆಪಿಗೆ ದೊಡ್ಡ ಪಾಲು..!
ಸಮೀಕ್ಷೆಯ ಪ್ರಕಾರ ಆಮ್ ಆದ್ಮ ಪಾರ್ಟಿ ಶೇ.35ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಜೆಪಿ ಶೇ.33 ಹಾಗೂ ಕಾಂಗ್ರೆಸ್ ಶೇ.28ರಷ್ಟು ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಶಿರೋಮಣಿ ಅಕಾಲಿದಳಕ್ಕೆ ಶೇ.2.5ರಷ್ಟು ಮತಗಳು ಲಭಿಸುವ ಸಾಧ್ಯತೆಯಿದೆ.ಸಮೀಕ್ಷೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯುವ ಸೂಚನೆ ಇಲ್ಲ. ಹೀಗಾಗಿ ಚುನಾವಣೋತ್ತರ ಮೈತ್ರಿ ಹಾಗೂ ರಾಜಕೀಯ ಹೊಂದಾಣಿಕೆಗಳು ಪಂಜಾಬ್‌ನಲ್ಲಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.







































