ಸುಳ್ಯ: ರಾಷ್ಟ್ರೀಯ ಹೆದ್ದಾರಿ ಮಣಿ-ಮೈಸೂರು ರಸ್ತೆಯ ಕನಕಮಜಲು ಬಳಿ ಇಂದು ಬೆಳ್ಳಂಬೆಳಿಗ್ಗೆ ಒಂಟಿ ಕಾಡುಕೋಣವೊಂದು ಪ್ರತ್ಯಕ್ಷಗೊಂಡಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.ಬೆಳಿಗ್ಗೆ ಹೆದ್ದಾರಿ ಬದಿ ಕಾಣಿಸಿಕೊಂಡ ಕಾಡುಕೋಣ, ನಂತರ ಬುಡ್ಲೆಗುತ್ತು ತೇಜಪ್ರಕಾಶ್ ಅವರ ತೋಟದ ಬಳಿ ಕಂಡುಬಂದಿದೆ.
ಜನವಸತಿ ಪ್ರದೇಶಕ್ಕೆ ಕಾಡುಕೋಣ ನುಗ್ಗಿರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.ತಕ್ಷಣ ಕಾಡುಕೋಣವನ್ನು ಕಾಡಿಗೆ ಅಟ್ಟಿ, ಜನರ ಆತಂಕ ದೂರ ಮಾಡುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.







































