ಏಲಕ್ಕಿ ಮಾರಾಟ ಸಹಕಾರ ಸಂಘದ ಚುನಾವಣೆ – ಬಿಜೆಪಿ ಬೆಂಬಲಿತರ ಜಯಭೇರಿ

Picture of Savistara

Savistara

Bureau Report

ಮಡಿಕೇರಿ, ನ. 18: ಕೊಡಗು విలశి ಮಾರಾಟ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ “ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಗರದ ಬಾಲ ಭವನದಲ್ಲಿ ಶಾಂತಿಯುತವಾಗಿ ನಡೆದು ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.ಚುನಾವಣೆಯಲ್ಲಿ ಮತ ‘ಚಲಾವಣೆ ಮಾಡಲು ಅವಕಾಶ ನೀಡಬೇಕೆಂದು ಕೆಲವರು ಉಚ್ಚ ‘ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಪ್ರತ್ಯೇಕ ಬೂತ್ ರಚಿಸಿ ಮತದಾನಕ್ಕೆ ಅವಕಾಶ ನೀಡುವಂತೆ ಕೋರ್ಟ್ ಸೂಚಿಸಿತ್ತು. ಅನಂತರ ‘ಉಚ್ಚ ನ್ಯಾಯಾಲಯದ ಮೊರೆ ಹೋದ ಸಂಘದ ಅರ್ಜಿ ಪರಿಶೀಲಿಸಿದ ಬಳಿಕ ‘ಅನುಮತಿ ಪಡೆದು ‘ಅರ್ಹ ಮತದಾರರು ಮಾಡಿರುವ ಮತಗಳನ್ನು ಮಾತ್ರ ಎಣಿಕೆ ಮಾಡುವಂತೆ’ ನ್ಯಾಯಾಧೀಶರು ಆದೇಶಿಸಿದ್ದ ಹಿನ್ನೆಲೆ ಇಂದು ಮತ ಎಣಿಕೆ ‘ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು.ಮಡಿಕೇರಿ ತಾಲೂಕಿನ ಸಾಮಾನ್ಯ ಕ್ಷೇತ್ರದ 5 ಸ್ಥಾನಗಳಿಗೆ 10 ಅಭ್ಯರ್ಥಿಗಳು, ಸೋಮವಾರಪೇಟೆ ತಾಲೂಕಿನ 3 ಸ್ಥಾನಗಳಿಗೆ 5 ಅಭ್ಯರ್ಥಿಗಳು, 2 – ಮಹಿಳಾ ಮೀಸಲು ಕ್ಷೇತ್ರಗಳಿಗೆ 4 ಅಭ್ಯರ್ಥಿಗಳು,

1 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ 2 ಅಭ್ಯರ್ಥಿಗಳು, 1 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ 3 ಅಭ್ಯರ್ಥಿಗಳು, 1 ಹಿಂದುಳಿದ ಪ್ರವರ್ಗ ಎ. ಮೀಸಲು ಕ್ಷೇತ್ರಕ್ಕೆ 2 ಅಭ್ಯರ್ಥಿಗಳು ಕಣದಲ್ಲಿದ್ದರು. ಉಳಿದಂತೆ ವೀರಾಜಪೇಟೆ ತಾಲೂಕಿನ 3 ಹಾಗೂ 1 ಹಿಂದುಳಿದ ಪ್ರವರ್ಗ ಬಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.

ವಿಜೇತರ ವಿವರ

ಮಡಿಕೇರಿ ತಾಲೂಕಿನ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೂದನ ಈರಪ್ಪ (205 ಮತ), ಕೆ.ಆರ್. ಅನಂತಕುಮಾರ್ (157), ತಳೂರು ದಿನೇಶ್ ಕುಮಾರ್ (150); ಕುಂಬಗೌಡನ ವಿನೋದ್ ಕುಮಾರ್ (144) ಹಾಗೂ ಮಂದ್ರಿರ ಮೋಹನ್ ದಾಸ್’ (143) ಗೆಲುವು ಪಡೆದರು.ಕೂಪದೀರ ಕೆ ಉತ್ತಪ್ಪ (94), ಎಂ.ಎಂ. ಗೋಪಾಲಕೃಷ್ಣ (108), ಚೊಂಡೀರ ಜಿ ಚಂಗಪ್ಪ (102), ಕಡ್ಯದ ಕೆ. ಪಾರ್ವತಿ (103), ಬೆಪ್ಪುರನ ಬೋಪಯ್ಯ (139) ಪರಾಜಿತಗೊಂಡರು.ಸೋಮವಾರಪೇಟೆ ತಾಲೂಕು ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಸಿ. ರಾಜು (272), ಸಿ.ಪಿ. ವಿಜಯ್ ಕುಮಾರ್ (267) ಹಾಗೂ ಎ.ಜೆ. ಕೃಷ್ಣಪ್ಪ (246) ಗೆಲುವಿನ ನಗೆ ಬೀರಿದರು. ಸಿ.ಎನ್. ತಮ್ಮಯ್ಯ (187), ಕೆ.ಪಿ. ಭಾನುಪ್ರಕಾಶ್ (210) ಪರಾಭವ ಗೊಂಡರು. ಮಹಿಳಾ ಮೀಸಲು ಕ್ಷೇತ್ರ ದಿಂದ ಕೆ.ಇ. ಸೌಮ್ಯ (390) ಹಾಗೂ ಬಿ.ಬಿ. ಪುಷ್ಪಾವತಿ (387) ಜಯ ಸಾಧಿಸಿದರು.

[t4b-ticker]
error: Content is protected !!