ಯಕ್ಷಗಾನದೊಳಗೆ ಸಲಿಂಗಕಾಮ ಬೆಳೆಯುತ್ತೆ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಪ್ರತಿಕ್ರಿಯೆ…!!

Picture of Savistara

Savistara

Bureau Report

ಉಡುಪಿ : ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಯಕ್ಷಗಾನದೊಳಗೆ ಸಲಿಂಗಕಾಮ ಬೆಳೆಯುತ್ತೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಾಜ್ಯಾದ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಪುರುಷೋತ್ತಮ ಬಿಳಿಮಲೆ ಅವರು ಎಲ್ಲಾ ಕಲಾವಿದರಿಗೆ ಹೇಳಿದ್ದು ಸರಿಯಲ್ಲ. ಪ್ರಪಂಚದಲ್ಲಿ ಸರಿ ತಪ್ಪು ಒಳ್ಳೆಯದು ಕೆಟ್ಟದು ಸಹಜ, ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಕಲೆ, ಯಕ್ಷಗಾನದ ಶ್ರೀಮಂತಿಕೆ ಹೆಚ್ಚಿಸುವ ಕಡೆಗೆ ಗಮನಹರಿಸೋಣ ಎಂದರು.ಪುರುಷೋತ್ತಮ ಬಿಳಿಮಲೆ ಯಾವ ಅರ್ಥದಲ್ಲಿ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿರುವೆ. ಆದರೆ ಅವರ ಫೋನ್ ಸ್ವಿಚ್ ಆಫ್ ಇತ್ತು. ಪುರುಷೋತ್ತಮ ಬಿಳಿಮಲೆ ರಾಷ್ಟ್ರ ಮಟ್ಟದ ಮೇಧಾವಿ ಸಾಹಿತಿ. ಸಾಮಾನ್ಯ ವ್ಯಕ್ತಿಗಳು ಈ ಮಾತು ಹೇಳಿದರೆ ಖಂಡಿಸಬಹುದಿತ್ತು ಎಂದರು.ಈ ಸಮಸ್ಯೆ ಗೊಂದಲ ಆಗದಂತೆ ಬಗೆಹರಿಯಲಿ. ಕಲಾವಿದರು ಪ್ರತಿಭಟನೆಗೆ ಮುಂದಾಗಬಾರದು ಚರ್ಚೆಯನ್ನು ಸೌಹಾರ್ದಯುತವಾಗಿ ಬಗೆಹರಿಸೋಣ ಎಂದರು.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!