ನವೆಂಬರ್‌ ಕ್ರಾಂತಿ ಫಿಕ್ಸ್‌..? ಸಿಎಂ ಕುರ್ಚಿ ಕದನದಲ್ಲಿ, ಡಿ.ಕೆ.ಶಿವಕುಮಾರ್‌ಗೆ ಬರೋಬ್ಬರಿ 51 ಶಾಸಕರ ಬೆಂಬಲ..!

Picture of Savistara

Savistara

Bureau Report

ಬೆಂಗಳೂರು, ನವೆಂಬರ್ 20: ಕರ್ನಾಟಕ ರಾಜಕಾರಣದಲ್ಲಿ ಅತಿ ದೊಡ್ಡ ಚರ್ಚೆ ನಡೆಯುತ್ತಿದೆ. ಸಿಎಂ ಪದವಿಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಬರೋಬ್ಬರಿ 51 ಶಾಸಕರ ಪಕ್ಕಾ ಬೆಂಬಲ ಇದೆ ಎಂಬ ಮಾಹಿತಿ ಗ್ಯಾರಂಟಿ ನ್ಯೂಸ್‌ಗೆ ಲಭ್ಯವಾಗಿದೆ. ಡಿಕೆಶಿಗೆ ಕೇವಲ 25 ಅಲ್ಲ, ಸಚಿವರು ಹಾಗೂ ಶಾಸಕರು ಸೇರಿದಂತೆ ಒಟ್ಟು 51 ಜನ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಪಟ್ಟಿಯಲ್ಲಿ ಒಕ್ಕಲಿಗ ಶಾಸಕರಷ್ಟೇ ಅಲ್ಲ, ಗಣನೀಯ ಸಂಖ್ಯೆಯ ದಲಿತ, ಲಿಂಗಾಯತ ಮತ್ತು ಇತರ ಸಮುದಾಯದ ಶಾಸಕರೂ ಸೇರಿದ್ದಾರೆ.25 ಶಾಸಕರು ಈಗಾಗಲೇ ದೆಹಲಿ ಪರೇಡ್‌ನಲ್ಲಿ ಡಿ.ಕೆ.ಶಿ ಜೊತೆಗಿದ್ದಾರೆ, ಫೋಟೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಮೀಟಿಂಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದ 26 ಶಾಸಕರು ಸಂಪೂರ್ಣ ಗುಪ್ತವಾಗಿ ಡಿ.ಕೆ.ಶಿವಕುಮಾರ್ ಪರವಾಗಿದ್ದಾರೆ. ಇವರು ಸಿದ್ದರಾಮಯ್ಯ ಬಣದಲ್ಲಿ ಕಾಣುತ್ತಾರೆ, ಆದರೆ ಒಳಗೊಳಗೇ ಡಿಕೆಶಿಗೆ ನೀವು ಸಿಎಂ ಆದರೆ ನಮ್ಮ ವೋಟ್ ನಿಮಗೇ ಎಂದು ಭೇಟಿ ಮಾಡಿ ಹಾಗೂ ಕೆಲವರು ಪೋನ್‌ ಮೂಲಕ ಭರವಸೆ ನೀಡಿದ್ದಾರೆ.

ದೆಹಲಿ ಪರೇಡ್‌ನಲ್ಲಿ ಮೂರು ತಂಡಗಳ ರಹಸ್ಯ ಕಾರ್ಯಾಚರಣೆ

1. ಮೊದಲ ತಂಡ – ಈಗಾಗಲೇ ದೆಹಲಿಗೆ ತಲುಪಿರುವ 15-18 ಶಾಸಕರು. ಪರಮೇಶ್ವರ್, ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ, ಕೆ.ಹೆಚ್. ಮುನಿಯಪ್ಪ ಗುಂಪು ಇದರಲ್ಲಿ ಪ್ರಮುಖರು.

2. ಎರಡನೇ ತಂಡ – ನಾಳೆ (ನವೆಂಬರ್ 21) ಬೆಳಗ್ಗೆಯೇ ದೆಹಲಿಗೆ ರವಾನೆಯಾಗಲಿರುವ 12-14 ಶಾಸಕರು. ಇವರಲ್ಲಿ ಹಲವು ದಲಿತ ಶಾಸಕರು ಮತ್ತು ಉತ್ತರ ಕರ್ನಾಟಕದ ಕೆಲವು ದೊಡ್ಡ ಹೆಸರುಗಳು ಇವೆ.

3. ಮೂರನೇ ತಂಡ – ಮೀಟಿಂಗ್‌ಗೆ ಭಾಗವಹಿಸುತ್ತಿಲ್ಲವಾದರೂ ಡಿ.ಕೆ.ಶಿವಕುಮಾರ್ ಅವರಿಗೆ 10-12 ಶಾಸಕರು 100% ಭರವಸೆ ನೀಡಿದ್ದಾರೆ.

ಹಸ್ತಾಂತರ ಒಪ್ಪಂದ ಖಚಿತ ಎಂಬ ನಂಬಿಕೆಯೇ ಈ ದೊಡ್ಡ ತಿರುವಿಗೆ ಕಾರಣ ಹೈಕಮಾಂಡ್‌ನಿಂದ ಸಿಎಂ ಹುದ್ದೆ ಹಸ್ತಾಂತರದ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ದೃಢ ಭರವಸೆ ಸಿಕ್ಕಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಈ ಭರವಸೆಯೇ ಒಕ್ಕಲಿಗರಲ್ಲದೇ ದಲಿತ, ಎಡಗೈ ಸಮುದಾಯ, ಕುರುಬರು, ಲಿಂಗಾಯತರ ಕೆಲವು ಶಾಸಕರನ್ನೂ ಡಿಕೆಶಿ ಕಡೆಗೆ ಎಳೆದಿದೆ.ಕಾಂಗ್ರೆಸ್‌ನಲ್ಲಿ ಮ್ಯಾಜಿಕ್ ಸಂಖ್ಯೆ 68. ಈಗ 51 ಶಾಸಕರ ಬೆಂಬಲ ಡಿ.ಕೆ.ಶಿವಕುಮಾರ್ ಬಳಿ ಪಕ್ಕಾ ಇದ್ದರೆ, ಉಳಿದ 17 ವೋಟ್‌ಗಳನ್ನು ತರಲು ಡಿಕೆಶಿಗೆ ಕೇವಲ ಒಂದೇ ದಿನ ಸಾಕು. ಸಿದ್ದರಾಮಯ್ಯ ಬಣದಲ್ಲಿ ಈಗ ಭಯದ ವಾತಾವರಣ ಶುರುವಾಗಿದೆ.

ನಮ್ಮವರೇ ನಮ್ಮನ್ನು ಮೋಸ ಮಾಡ್ತಾರಾ..? ಎಂಬ ಆತಂಕ ಆವರಿಸಿದೆ.ಡಿ.ಕೆ. ಶಿವಕುಮಾರ್ ಅವರ ಈ 51 ಶಾಸಕರ ಪಟ್ಟಿ ಈಗಾಗಲೇ ಹೈಕಮಾಂಡ್ ಗೆ ತಲುಪಿದೆ. ಇದು ಕರ್ನಾಟಕ ರಾಜಕಾರಣದ ದಿಕ್ಕನ್ನೇ ಬದಲಾಯಿಸುತ್ತದೆಯೇ..? ಎಂದು ಕಾದು ನೋಡಬೇಕಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!