ನಾನು ಬೌದ್ಧಧರ್ಮ ಪಾಲಿಸುತ್ತೇನೆ, ನಾನೊಬ್ಬ ಜಾತ್ಯತೀತವಾದಿ: ಸಿಜೆಐ ಗವಾಯಿ ವಿದಾಯ ಭಾಷಣ

Picture of Savistara

Savistara

Bureau Report

ನವದೆಹಲಿ: ನಾನೊಬ್ಬ ಜಾತ್ಯತೀತವಾದಿ, ಬೌದ್ಧಧರ್ಮವನ್ನು ಅನುಸರಿಸುತ್ತೇನೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ತಿಳಿಸಿದ್ದಾರೆ.ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ಸ್ ಅಸೋಸಿಯೇಷನ್ ​​(SCAORA)ನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ನವೆಂಬರ್ 20ರ ತಮ್ಮ ಕೊನೆಯ ಕೆಲಸದ ದಿನಕ್ಕೂ ಮುನ್ನ ಸಿಜೆಐ ಗವಾಯಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಸಿಜೆಐ ಗವಾಯಿ ಅವರು ಅಧಿಕೃತವಾಗಿ ನವೆಂಬರ್ 23 ರಂದು ನಿವೃತ್ತಿ ಹೊಂದಲಿದ್ದಾರೆ.ವಿದಾಯ ಭಾಷಣದಲ್ಲಿ ಮಾತನಾಡಿದ ಅವರು, ನಾನು ಬೌದ್ಧಧರ್ಮವನ್ನು ತಮ್ಮ ಪಾಲಿಸುತ್ತಿದ್ದರೂ, ಹಿಂದೂ ಧರ್ಮ, ಸಿಖ್ ಧರ್ಮ, ಇಸ್ಲಾಂ ಮತ್ತು ಇತರ ಧರ್ಮಗಳನ್ನು ಒಳಗೊಂಡಂತೆ ಪ್ರತಿಯೊಂದು ಧರ್ಮವನ್ನು ನಂಬುವ ನಿಜವಾದ ಜಾತ್ಯತೀತ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.ನನ್ನ ತಂದೆಯಿಂದ ಜಾತ್ಯತೀತನಾಗಿರುವುದನ್ನು ಕಲಿತಿದ್ದೇನೆ. ಅವರು ನಿಜವಾದ ಜಾತ್ಯತೀತರೂ ಮತ್ತು ಡಾ. ಭೀಮರಾವ್ ಅಂಬೇಡ್ಕರ್ ಅವರ ಪಾಂಡಿತ್ಯಪೂರ್ಣ ಅನುಯಾಯಿಯೂ ಆಗಿದ್ದರು ಎಂದು ಹೇಳಿದ್ದಾರೆ.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!