ಕಾರ್ಮಿಕರಿಗೆ ಗುಡ್‌ನ್ಯೂಸ್‌: ಕನಿಷ್ಠ ವೇತನ, ರಜೆ, PF – ESI ಕಡ್ಡಾಯ ಸೇರಿ 4 ಹೊಸ ಕಾರ್ಮಿಕ ಕಾನೂನು ಜಾರಿ! ಏನೆಲ್ಲಾ?

Picture of Savistara

Savistara

Bureau Report

ಹೊಸದಿಲ್ಲಿ: ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣ ಗುರಿ ಹೊಂದಿರುವ ಕೇಂದ್ರ ಸರಕಾರವು, ಅದಕ್ಕೆ ಪೂರಕವಾಗಿ ಕಾರ್ಮಿಕ ಕಾನೂನುಗಳಲ್ಲಿಮಹತ್ತರ ಬದಲಾವಣೆಗಳನ್ನು ತಂದಿದೆ. ವಿವಿಧ ವಲಯಗಳಿಗೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.ವೇತನ ಸಂಹಿತೆ (2020), ಕೈಗಾರಿಕೆ ಸಂಬಂಧಗಳ ಸಂಹಿತೆ (2019), ಸಾಮಾಜಿಕ ಭದ್ರತಾ ಸಂಹಿತೆ (2020), ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯನಿರ್ವಹಣೆ ಸ್ಥಿತಿ ಸಂಹಿತೆ (2020) ಶುಕ್ರವಾರದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ. (ಪಿಎಫ್‌ ನಿಯಮದಲ್ಲಿ ಮಹತ್ವದ ಬದಲಾವಣೆ)ಎಲ್ಲಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು ನೀಡಬೇಕು. ಪ್ರತಿ ತಿಂಗಳು 7ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು. ಯಾವುದೇ ಉದ್ಯೋಗವಾದರೂ ಮಹಿಳೆಯರಿಗೆ ರಾತ್ರಿಪಾಳಿ ಕೆಲಸಗಳಿಗೆ ಅವಕಾಶ ಹಾಗೂ ರಾತ್ರಿಪಾಳಿಯಲ್ಲಿಕೆಲಸ ನಿರ್ವಹಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. 40 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎನ್ನುವುದು ಹೊಸ ಕಾರ್ಮಿಕ ಸಂಹಿತೆಗಳ ಪ್ರಮುಖ ಸಂಗತಿಗಳಾಗಿವೆ.‘‘ದೇಶದ ಬಹುತೇಕ ಕಾರ್ಮಿಕ ಕಾನೂನುಗಳನ್ನು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯನಂತರದ ಆರಂಭದಲ್ಲಿ(1930-1950ರ ದಶಕ) ರಚಿಸಲಾಗಿದೆ. ಆ ಸಮಯದಲ್ಲಿಆರ್ಥಿಕತೆ ಮತ್ತು ಕೆಲಸದ ಸ್ವರೂಪಗಳು ಮೂಲಭೂತವಾಗಿ ವಿಭಿನ್ನವಾಗಿದ್ದವು. ಈಗಿನ ಅಗತ್ಯತೆಗೆ ಅನುಗುಣವಾಗಿ ಕಾರ್ಮಿಕ ನಿಯಮಗಳನ್ನು ಮರುರೂಪಿಸಲಾಗಿವೆ. ಈ ಸಂಹಿತೆಗಳು ಸ್ವಾವಲಂಬಿ ರಾಷ್ಟ್ರಕ್ಕೆ ಅಗತ್ಯವಿರುವ ಬಲಿಷ್ಠ ಕಾರ್ಯಪಡೆಯನ್ನು ರೂಪಿಸುತ್ತವೆ,’’ ಎಂದು ಸಚಿವಾಲಯ ತಿಳಿಸಿದೆ.

ಹೊಸ ನಿಯಮಗಳು ಏನು ಹೇಳುತ್ತವೆ?

* ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಪತ್ರ ನೀಡುವುದು ಕಡ್ಡಾಯ

* ಎಲ್ಲಕಾರ್ಮಿಕರಿಗೂ ಪಿಎಫ್‌, ಇಎಸ್‌ಐ, ವಿಮೆ ಸೌಲಭ್ಯ

* ಒಂದು ವರ್ಷ ಸೇವಾವಧಿ ಪೂರೈಸಿದ ಬಳಿಕ ಗ್ರಾಚ್ಯುಟಿ ಅರ್ಹತೆ

* ಎಲ್ಲಕಾರ್ಮಿಕರಿಗೆ ಕನಿಷ್ಠ ವೇತನ, ಸಕಾಲ ವೇತನ ಪಾವತಿ ಕಡ್ಡಾಯ

* 40 ವರ್ಷ ವಯಸ್ಸು ಮೀರಿದ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ

* ಮಹಿಳಾ ಕಾರ್ಮಿಕರಿಗೂ ಸಮಾನ ವೇತನ ಪಾವತಿಸಬೇಕು

* ಮಹಿಳೆಯರಿಗೆ ಗಣಿಗಾರಿಕೆ ಸೇರಿದಂತೆ ಎಲ್ಲಾವಲಯಗಳಲ್ಲೂರಾತ್ರಿ ಪಾಳಿಗೆ ಅವಕಾಶ

* ಕುಂದುಕೊರತೆ ಪರಿಹಾರ ಸಮಿತಿಗಳಲ್ಲಿಮಹಿಳಾ ಪ್ರಾತಿನಿಧ್ಯ ಕಡ್ಡಾಯ

* ಉದ್ಯಮಗಳಿಗೆ ಒಂದೇ ಕಡೆ ನೋಂದಣಿ, ಪ್ಯಾನ್‌ ಇಂಡಿಯಾ ಒಂದೇ ಪರವಾನಗಿ ಮತ್ತು ಒಂದೇ ರಿಟರ್ನ್‌ ಸಲ್ಲಿಕೆ

* ಮೊದಲ ಬಾರಿ ಗಿಗ್‌ ಕಾರ್ಮಿಕರು, ಪ್ಲಾಟ್‌ಫಾರಂ ಕಾರ್ಮಿಕರು, ಸೌಲಭ್ಯ ಕಲ್ಪಿಸುವವರು – ಈ ಪದಗಳ ಸ್ಪಷ್ಟ ವ್ಯಾಖ್ಯಾನ

ಈ ಸಂಹಿತೆಗಳು ನಮ್ಮ ಜನರಿಗೆ, ವಿಶೇಷವಾಗಿ ನಾರಿ ಶಕ್ತಿ ಮತ್ತು ಯುವ ಶಕ್ತಿಗೆ ಲಾಭದಾಯಕ ಅವಕಾಶಗಳಿಗೆ ಬಲವಾದ ಅಡಿಪಾಯ ಹಾಕುತ್ತವೆ. ಈ ಸುಧಾರಣೆಗಳು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತವೆ. ಉತ್ಪಾದಕತೆಯನ್ನು ಹೆಚ್ಚಿಸುತ್ತವೆ ಮತ್ತು ವಿಕಸಿತ ಭಾರತದತ್ತ ನಮ್ಮ ಪ್ರಯಾಣವನ್ನು ವೇಗಗೊಳಿಸುತ್ತವೆ ಎಂದು ನರೇಂದ್ರ ಮೋದಿ ಪ್ರಧಾನಿ ತಿಳಿಸಿದ್ದಾರೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!