ಸ್ಥಳೀಯಾಡಳಿತ ಚುನಾವಣೆಯ ಮತ ಎಣಿಕೆ ಬಿರುಸು: ಕಾಸರಗೋಡು ಜಿಪಂನಲ್ಲಿ ಎಲ್‌.ಡಿ.ಎಫ್-ಯುಡಿಎಫ್‌ ಮಧ್ಯೆ ಜಿದ್ದಾಜಿದ್ದಿ

Picture of Savistara

Savistara

Bureau Report

ನಗರಸಭೆ, ಗ್ರಾಪಂಗಳಲ್ಲಿ ಯುಡಿಎಫ್, ಬ್ಲಾಕ್ ಪಂಚಾಯತ್ ಗಳಲ್ಲಿ ಎಲ್.ಡಿ.ಎಫ್.ಮುನ್ನಡೆ

ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಜಿಲ್ಲಾ ಪಂಚಾಯತ್ ನಲ್ಲಿ ಎಲ್.ಡಿ.ಎಫ್-ಯುಡಿಎಫ್ ಮಧ್ಯೆ ಮುನ್ನಡೆಗಾಗಿ ಜಿದ್ದಾಜಿದ್ದಿ ಕಂಡುಬರುತ್ತಿದೆ.ಎಲ್.ಡಿ.ಎಫ್. ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಯುಡಿಎಫ್ ಆರು ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ ಒಂದು ಸ್ಥಾನದಲ್ಲಿ ಮುನ್ನಡೆಯಲಿದೆ.ಗ್ರಾಮ ಪಂಚಾಯತ್ ನಲ್ಲಿ ಯುಡಿಎಫ್ ಮುನ್ನಡೆ ಕಾಯ್ದುಕೊಂಡಿದೆ. ಯುಡಿಎಫ್ 11, ಎಲ್.ಡಿ.ಎಫ್. 9 ಮತ್ತು ಎನ್.ಡಿ.ಎ 7, ಇತರರು 1 ಪಂಚಾಯತ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.ಬ್ಲಾಕ್ ಪಂಚಾಯತ್ ನಲ್ಲಿ ಎಲ್.ಡಿ.ಎಫ್ 4, ಯು.ಡಿ.ಎಫ್. ಮತ್ತು ಎನ್.ಡಿ.ಎ. ತಲಾ ಒಂದರಲ್ಲಿ ಮುನ್ನಡೆಯಲ್ಲಿದೆನಗರಸಭೆಯಲ್ಲಿ ಎಲ್‌.ಡಿ.ಎಫ್. 2 ಮತ್ತು ಯುಡಿ ಎಫ್ 1ರಲ್ಲಿ ಮುನ್ನಡೆ ಕಾಯ್ದು ಕೊಂಡಿದೆ.ಒಟ್ಟು ಫಲಿತಾಂಶವನ್ನು ಅವಲೋಕಿಸಿದರೆ ಜಿಲ್ಲೆಯಲ್ಲಿ ಎಲ್.ಡಿ.ಎಫ್ ಮುನ್ನಡೆ ಕಾಯ್ದುಕೊಂಡಿರುವುದು ಸ್ಪಷ್ಟವಾಗಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!