ಮೋದಿ ಜೊತೆ ಟೀ ಕುಡಿದ ಪ್ರಿಯಾಂಕಾ ಗಾಂಧಿ! ಗಿಡಮೂಲಿಕೆಗಳ ಬಗ್ಗೆ ಸಂಸದೆ ಮಾತು, ಈ ವೇಳೆ ಪ್ರಧಾನಿ ಹೇಳಿದ್ದೇನು?

Picture of Savistara

Savistara

Bureau Report

ಸಂಸತ್ ಭವನ (ನವದೆಹಲಿ): ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ, ಕೇವಲ ಸಹಪಾಠಿಗಳಷ್ಟೇ. ರಾಜಕಾರಣಿಗಳು ಸದನದೊಳಗಡೆ ಪೇಪರ್ ಹರಿದು ಎಸೆದಾಡಿ, ಹಾವು ಮುಂಗಿಸಿಯಂತೆ ಕಚ್ಚಾಡುತ್ತಾರೆ. ಆದರೆ ಸದನದೊರಗಡೆ ಎಲ್ಲಾ ಮರೆತು ಸ್ನೇಹಿತರಂತಿರುತ್ತಾರೆ, ಅದಕ್ಕೆ ಈ ಘಟನೆಯೇ ಸಾಕ್ಷಿ!

ಹೌದು, ಕಾಂಗ್ರೆಸ್ ಪಕ್ಷದ ಪವರ್‌ಫುಲ್ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ನಿನ್ನೆಯಷ್ಟೇ ಕೇಂದ್ರದ ಸಚಿವ ಹಾಗೂ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರ ಮನೆಗೆ ಭೇಟಿ ನೀಡಿ, ಗಡ್ಕರಿಯವರ ಕೈಯಾರೆ ಮಾಡಿದ ಅಡುಗೆಯನ್ನು ಸವಿದಿದ್ದರು. ಇದಾದ ನಂತರ ಇಂದು ಪ್ರಿಯಾಂಕಾ ಅವರು, ಪ್ರಧಾನಿ ನರೇಂದ್ರ ಮೋದಿಯೊಂದಿಗೆ (Narendra Modi) ಟೀ ಸವಿದು ಚಾಯ್ ಪೇ ಚರ್ಚಾ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪಕ್ಷಪಾತ, ಗದ್ದಲ, ಪ್ರತಿಭಟನೆಗಳಿಂದ ತುಂಬಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು, ರಾಜಕೀಯದ ನಡುವೆಯೇ ಒಂದು ಅಪರೂಪದ ಸ್ನೇಹಪೂರ್ಣ ಕ್ಷಣ ಎಲ್ಲರ ಗಮನ ಸೆಳೆದಿದೆ. ನ್ಯೂಸ್ 18 ಇಂಗ್ಲಿಷ್ ವರದಿ ಮಾಡಿದಂತೆ, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರು ಒಟ್ಟಿಗೆ ಟೀ ಕುಡಿಯುತ್ತಿದ್ದರು. ಈ ವೇಳೆ, ಅಲ್ಲಿಗೆ ಆಗಮಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಚಿವ ರಾಜನಾಥ್ ಅವರೊಂದಿಗೆ ಕೂತು ಟೀ ಕುಡಿದಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಮೋದಿಯೊಂದಿಗೆ ಚಾಯ್ ಪೇ ಚರ್ಚಾ!

ವರದಿಗಳ ಪ್ರಕಾರ, ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಡುವೆ ವಯನಾಡ್ ಕುರಿತು ಆತ್ಮೀಯ ಸಂಭಾಷಣೆ ನಡೆದಿದೆ ಎನ್ನಲಾಗಿದೆ. ಏತನ್ಮಧ್ಯೆ, ಮಾತುಕತೆಯ ಸಂದರ್ಭ, ಪ್ರಿಯಾಂಕಾ ಗಾಂಧಿ ಅವರು ವಯನಾಡ್ ಪ್ರದೇಶದಿಂದ ಬಂದಿರುವ ಒಂದು ವಿಶೇಷ ಗಿಡಮೂಲಿಕೆಯನ್ನು ತಾವು ಸೇವಿಸುತ್ತಿರುವುದಾಗಿ ಹೇಳಿಕೊಂಡರು. ಆ ಗಿಡಮೂಲಿಕೆ ಅಲರ್ಜಿಯನ್ನು ನಿಯಂತ್ರಿಸಲು ಸಹಾಯ ಮಾಡಿದೆ ಎಂದು ಪ್ರಧಾನಿಗೆ ತಿಳಿಸಿದರು ಎನ್ನಲಾಗಿದೆ.

ವಿದೇಶ ಪ್ರವಾಸದ ಅನುಭವ ಬಿಚ್ಚಿಟ್ಟ ಮೋದಿ

ಇಂದು ಚಳಿಗಾಲದ ಅಧಿವೇಶನಕ್ಕೆ ಅಧಿಕೃತ ತೆರೆ ಬೀಳುತ್ತಿದ್ದಂತೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಲೋಕಸಭೆಯ ವಿವಿಧ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದರು. ಈ ವೇಳೆ, ಪ್ರಿಯಾಂಕಾ, ರಾಜನಾಥ್, ಡಿ. ರಾಜಾ, ಚಿರಾಗ್ ಪಾಸ್ವಾನ್, ಅರ್ಜುನ್ ರಾಮ್ ಮೇಘ್ವಾಲ್ ಮುಂತಾದವರು ಭಾಗವಹಿಸಿದ್ದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಇತ್ತೀಚಿನ ವಿದೇಶಿ ಭೇಟಿಗಳ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಇಥಿಯೋಪಿಯಾದ ರಾಜಧಾನಿ ಅಡಿಸ್ ಅಬಾಬಾ ಬಗ್ಗೆ ಮಾತನಾಡಿದ ಅವರು, ಆ ನಗರ ಸರಿಯಾಗಿ ನಿರ್ವಹಿಸಲ್ಪಟ್ಟಿಲ್ಲ ಎಂಬ ಸಾಮಾನ್ಯ ಭಾವನೆ ಇದೆ. ಆದರೆ ಅದು ಇಂದು ಉತ್ತಮವಾಗಿ ಅಭಿವೃದ್ಧಿಗೊಂಡಿದೆ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟಿದೆ. ಜೊತೆಗೆ ಭವಿಷ್ಯದಲ್ಲಿ, ಜೋರ್ಡಾನ್‌ನ ಕೆಲವು ಆಧುನಿಕ ನಗರಗಳು ಹಾಗೂ ದುಬೈ ಸೇರಿದಂತೆ ವಿಶ್ವದ ಅತ್ಯುತ್ತಮ ನಗರಗಳೊಂದಿಗೆ ಸ್ಪರ್ಧಿಸಬಲ್ಲ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಹೇಳಿದ್ದಾರೆ.

[t4b-ticker]
error: Content is protected !!