ಪುತ್ತೂರಿನ ವಿವೇಕಾನಂದ ಶಿಶುಮಂದಿರದಲ್ಲಿ ‘ಶ್ರೀಕೃಷ್ಣಲೋಕ’ 28ನೇ ವರ್ಷದ ಸಮಿತಿ ರಚನೆ

Picture of Savistara

Savistara

Bureau Report

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ ಶಿಶುಮಂದಿರದಲ್ಲಿ ಈ ವರ್ಷದ ‘ಶ್ರೀಕೃಷ್ಣಲೋಕ’ ಕಾರ್ಯಕ್ರಮದ 28ನೇ ವರ್ಷದ ಆಚರಣೆಗೆ ನೂತನ ಸಮಿತಿಯನ್ನು ರಚಿಸಲಾಗಿದೆ.

ಜುಲೈ 16ರಂದು ಶಿಶುಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಪ್ರಸನ್ನ ದರ್ಬೆ, ಅಧ್ಯಕ್ಷರಾಗಿ ಹರ್ಷ ಕುಮಾ‌ರ್ ರೈ ಮಾಡಾವು, ಕಾರ್ಯದರ್ಶಿಯಾಗಿ ಬ್ರಿಜೇಶ್ ರೈ ಸಣಂಗಳ, ಜೊತೆ ಕಾರ್ಯದರ್ಶಿಯಾಗಿ ಅಜಿತ್ ರೈ ಹೊಸಮನೆ, ಹಾಗೂ ಕೋಶಾಧಿಕಾರಿಯಾಗಿ ರಕ್ಷಾ ಎಸ್.ಆರ್. ಆಯ್ಕೆಯಾಗಿದ್ದಾರೆ.ಸಮಿತಿಯ ಸದಸ್ಯರಾಗಿ ರಾಜೇಶ್ ಟಿ., ಸುದೀಪ್, ರಮ್ಯ ಭಟ್, ಆನಂದ ನಾಯಕ್ ಮತ್ತು ಪ್ರಜ್ಞಾ ಎಂ. ಅವರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಶ್ರೀಕೃಷ್ಣಲೋಕದ ನಿಕಟಪೂರ್ವ ಅಧ್ಯಕ್ಷ ಮೋಹನ್ ಕೆ, ಉಪಾಧ್ಯಕ್ಷೆ ಮಾಲಿನಿ ಕಶ್ಯಪ್, ಶಿಶುಮಂದಿರದ ಅಧ್ಯಕ್ಷ ರಾಜಗೋಪಾಲ್ ಭಟ್, ಸಂಚಾಲಕ ಅಕ್ಷಯ್ ಕುಮಾರ್, ಆಡಳಿತ ಮಂಡಳಿಯ ಸದಸ್ಯರು, ಮಾತಾಜಿಯವರು ಹಾಗೂ ಪಾಲಕರು ಉಪಸ್ಥಿತರಿದ್ದರು.ಈ ಸಮಿತಿ ನೇತೃತ್ವದಲ್ಲಿ ಈ ವರ್ಷದ ‘ಶ್ರೀಕೃಷ್ಣಲೋಕ’ ಕಾರ್ಯಕ್ರಮವನ್ನು ಸಂಭ್ರಮ ಹಾಗೂ ವೈಭವದಿಂದ ನಡೆಸಲು ಸಿದ್ಧತೆಗಳು ಆರಂಭಗೊಂಡಿವೆ.

[t4b-ticker]
error: Content is protected !!