₹38 ಸಾವಿರ ಸಂಬಳದ ಕೆಲಸ ಬಿಟ್ಟು ಚಹಾ ಅಂಗಡಿ ತೆರೆದ ಯುವಕನ ಆದಾಯ ₹1.8 ಲಕ್ಷ

Picture of Savistara

Savistara

Bureau Report

ನಾವು ಕೂಡ ಸಣ್ಣ ಬಿಸಿನೆಸ್ ಶುರು ಮಾಡಬೇಕು. 9 ಗಂಟೆ ತನಕ ಯಾರು ಆಫೀಸ್‌ನಲ್ಲಿ ದುಡಿತಾರಪ್ಪ.. ಅಂತ ಯೋಚಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಕಾರ್ಪೊರೇಟ್ ಕೆಲಸ ತೊರೆದು, ಚಹಾ ಅಂಗಡಿ ಆರಂಭಿಸಿ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾನೆ. ಈ ಯುವಕನ ಯಶೋಗಾಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ಪೋಸ್ಟ್, ಸಣ್ಣ ಉದ್ಯಮದ ಯಶಸ್ಸು ಮತ್ತು ರಿಸ್ಕ್ ತೆಗೆದುಕೊಳ್ಳುವ ಮನಸ್ಥಿತಿಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದೆ.ಪೋಸ್ಟ್ ಹಂಚಿಕೊಂಡಿರುವ ವ್ಯಕ್ತಿಯ ಪ್ರಕಾರ, ಅವರ ಪಕ್ಕದ ಮನೆಯ ಯುವಕ ‘ಟೆಲಿಪರ್ಫಾರ್ಮೆನ್ಸ್’ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಅವನು ತಿಂಗಳಿಗೆ ₹38,000 ಸಾವಿರ ದುಡಿಯುತ್ತಿದ್ದ. ಆದರೆ, ಕಳೆದ ಮೇ ತಿಂಗಳಲ್ಲಿ ಆತ ತನ್ನ ಐಟಿ ಕೆಲಸಕ್ಕೆ ರಾಜೀನಾಮೆ ನೀಡಿ, ಮತ್ತೊಂದು ಕಂಪನಿಯಲ್ಲಿ ಕೆಲಸ ಹುಡುಕುವ ಬದಲು, ತನ್ನಲ್ಲಿದ್ದ ₹2 ಲಕ್ಷ ಹಣವನ್ನು ಹೂಡಿಕೆ ಮಾಡಿ ಸಣ್ಣದೊಂದು ಚಹಾ ಅಂಗಡಿಯನ್ನು ಆರಂಭಿಸಿದ.

ಚಹಾಗೆ ₹10 ಮತ್ತು ಗ್ರೀನ್ ಟೀ, ಮಸಾಲಾ ಟೀಗೆ ₹20 ದರ ನಿಗದಿಪಡಿಸಿದ. ಚಹಾ ತಯಾರಿಸಲು ಮತ್ತು ಗ್ರಾಹಕರಿಗೆ ಸತ್ಕರಿಸಲು ಇಬ್ಬರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡ.ಎಕ್ಸ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಪ್ರಸ್ತುತ ಈ ಅಂಗಡಿಯಲ್ಲಿ ಪ್ರತಿದಿನ ಸರಾಸರಿ 400 ಕಪ್ ಚಹಾ ಮಾರಾಟವಾಗುತ್ತಿದೆ. ಇದರಿಂದ ದಿನಕ್ಕೆ ಅಂದಾಜು 6 ಸಾವಿರ ಆದಾಯ ಬರುತ್ತಿದ್ದು, ತಿಂಗಳ ಒಟ್ಟು ವಹಿವಾಟು ಬರೋಬ್ಬರಿ ₹1.8 ಲಕ್ಷ ತಲುಪಿದೆ.

ಇನ್ನು, ಅಂಗಡಿ ಬಾಡಿಗೆ ₹25 ಸಾವಿರ, ಸಿಬ್ಬಂದಿಗೆ ₹30, ವಿದ್ಯುತ್ ಮತ್ತು ಕಚ್ಚಾ ಸಾಮಗ್ರಿ ಸೇರಿದಂತೆ ₹25 ಸಾವಿರ ಖರ್ಚಾಗಿ, ಯುವಕನಿಗೆ ತಿಂಗಳಿಗೆ 1 ಲಕ್ಷ ಹತ್ತಿರ ಲಾಭ ಸಿಗುತ್ತಿದೆ. ಸದ್ಯ ಚಹಾದಿಂದ ಶುರುವಾದ ಈ ಅಂಗಡಿ ವಡಾಪಾವ್‌ವರೆಗೂ ವಿಸ್ತರಣೆಯಾಗಿದೆ.ಅಂಗಡಿ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಲಾಭವಾಗುತ್ತಿದ್ದಂತೆ ಯುವಕ ಚಹಾದ ಜೊತೆಗೆ ವಡಾಪಾವ್, ಸಮೋಸಾ ಮತ್ತು ಜಿಲೇಬಿ ಕೌಂಟ‌ರ್ ಅನ್ನು ಸಹ ಆರಂಭಿಸಿದ್ದಾನೆ. ಈ ಉದ್ಯಮ ವಿಸ್ತರಣೆಯ ಖುಷಿಯಲ್ಲೇ ಆತ ಪಕ್ಕದ ಮನೆಯವರಿಗೆ ಸಿಹಿ ಹಂಚಲು ಬಂದಾಗ ಈ ಯಶೋಗಾಥೆ ಬೆಳಕಿಗೆ ಬಂದಿದೆ.’ಒಂದು ವೇಳೆ ಆತ ಹಳೆಯ ಕೆಲಸದಲ್ಲೇ ಮುಂದುವರಿದಿದ್ದರೆ, ವಾರ್ಷಿಕ ಸಂಬಳ ಏರಿಕೆಗಾಗಿ ಕಾಯುತ್ತಾ ಇಂದಿಗೂ ಅದೇ ₹38 ಸಾವಿರ ಸಂಬಳದಲ್ಲೇ ಇರಬೇಕಾಗುತ್ತಿತ್ತು’ ಎಂದು ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.ಈ ಪೋಸ್ಟ್‌ಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಧ್ಯಮ ವರ್ಗದ ಜನರಿಗೆ ಚಹಾ ಅಂಗಡಿಯಂತಹ ಉದ್ಯಮಗಳು ಮೊದಲ ದಿನದಿಂದಲೇ ಆದಾಯ ತಂದುಕೊಡುತ್ತವೆ. ಕೇವಲ ಹಾಲು, ಸಕ್ಕರೆ, ಚಹಾ ಅಂತ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಹಲವರು ಕಮೆಂಟ್ ಮಾಡುವ ಮೂಲಕ ಕೆಲಸವನ್ನು ಶ್ಲಾಘಿಸಿದ್ದಾರೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!