ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ.ನಡ್ಡಾರನ್ನು ಸಂಸದ ಬಿ ವೈ ರಾಘವೇಂದ್ರ ಭೇಟಿ | “ಮಂಗನ ಕಾಯಿಲೆಗೆ ” ಶಾಶ್ವತ ಪರಿಹಾರಕ್ಕಾಗಿ ಒತ್ತಾಯ

Picture of Savistara

Savistara

Bureau Report

ಮಲೆನಾಡು ಪ್ರದೇಶದ ರೈತರು, ಅರಣ್ಯವಾಸಿಗಳು ಹಾಗೂ ಗ್ರಾಮೀಣ ಸಮುದಾಯಗಳು ವರ್ಷಗಳಿಂದ ಎದುರಿಸುತ್ತಿರುವ “ಮಂಗನ ಕಾಯಿಲೆ (KFD)” ಎಂಬ ಗಂಭೀರ ಕಾಯಿಲೆಗೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ದೊರಕಬೇಕೆಂಬ ದೃಢ ನಿಲುವಿನೊಂದಿಗೆ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಸಮಗ್ರ ಚರ್ಚೆ ನಡೆಸಲಾಯಿತು.

ಮಂಗನ ಕಾಯಿಲೆಯಿಂದ ಆಗುತ್ತಿರುವ ಜೀವ ಹಾನಿ ಹಾಗೂ ಜನಜೀವನದ ಮೇಲೆ ಬೀರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ,ಪರಿಣಾಮಕಾರಿ ಲಸಿಕೆ ಅಭಿವೃದ್ಧಿಗೆ ತ್ವರಿತ ಕ್ರಮ, ICMR ಹಾಗೂ NIV ಮೂಲಕ ಸಂಶೋಧನೆಗೆ ವೇಗ, ಶಿವಮೊಗ್ಗದಲ್ಲಿ NIV ಉಪ-ಕೇಂದ್ರ ಸ್ಥಾಪನೆ ಮತ್ತು ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವಿಕೆ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.

ಮಲೆನಾಡಿನ ಜನರು ಇನ್ನು ಮುಂದೆ ಭಯದಲ್ಲಿ ಬದುಕುವ ಪರಿಸ್ಥಿತಿ ಬಾರದಂತೆ, “ಒಂದು ಆರೋಗ್ಯ” (One Health) ದೃಷ್ಟಿಕೋನದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಶಾಶ್ವತ ಪರಿಹಾರ ದೊರಕಿಸುವಂತೆ ಮನವಿ‌ ಸಲ್ಲಿಸಲಾಯಿತು.ಮಂಗನ ಕಾಯಿಲೆ ನಿರ್ಮೂಲನೆಗೆ ಅಗತ್ಯವಾದ ವೈಜ್ಞಾನಿಕ ನೆರವು, ಆರ್ಥಿಕ ಬೆಂಬಲ ಹಾಗೂ ಎಲ್ಲಾ ಅಗತ್ಯ ಕ್ರಮಗಳನ್ನು ಅತ್ಯಂತ ಶೀಘ್ರವಾಗಿ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರದಿಂದ ಖಚಿತ ಭರವಸೆ ನೀಡಲಾಗಿದೆ. ಈ ಮಹತ್ವದ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಧನ್ಯವಾದಗಳು ಎಂದು ಸಂಸದ ರಾಘವೇಂದ್ರ ಬಿ ವೈ ತಿಳಿಸಿದರು.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!