ಬೆಳೆ ವಿಮೆ ವಿತರಣೆಯಲ್ಲಿ ಕೃಷಿಕರಿಗೆ ಅನ್ಯಾಯ,ತಕ್ಷಣ ಕ್ರಮ ವಹಿಸುವಂತೆ ಡಿಸೆಂಬರ್ 24 ಸುಳ್ಯದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಯಿಂದ ಪ್ರತಿಭಟನೆ

Picture of Savistara

Savistara

Bureau Report

ಬೆಳೆ ವಿಮೆ ವಿತರಣೆವಿಚಾರವಾಗಿ ಈ ಬಾರಿ ಕೃಷಿಕರಿಗೆ ಅನ್ಯಾಯವಾಗಿದ್ದು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ ಡಿಸೆಂಬರ್ 24 ರಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯಿಂದ ಸುಳ್ಯ ತಾಲೂಕು ಕಚೇರಿ ಬಳಿ ಕೃಷಿಕರ ಜೊತೆಗೂಡಿ ಪ್ರತಿಭಟನೆ ನಡೆಸಲಾಗುವುದೆಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ ಯೂತ್ ಪ್ರಮುಖ್ ಅವಿನಾಶ್ ಕುರುಂಜಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.ದೇಶದಲ್ಲಿ ರೈತರು, ಕೃಷಿಕರು ಅನೇಕ ಸಮಸ್ಯೆಯಿಂದ ಅನುಭವಿಸುತ್ತಿದ್ದೂ ಬೆಳೆ ವಿಮೆ ಹಣ ಕೂಡ ಪಾವತಿಯಾಗದೆ ಸಂಕಷ್ಟ ಒಳಗಾಗಿದ್ದರೆ ಈ ರೀತಿಯ ಸಮಸ್ಯೆಗೆ ಕಾರಣ ಯಾರು ಅದನ್ನೂ ತಿಳಿಸಬೇಕು ಅಲ್ಲದೇ ರೈತರಿಗೆ ನ್ಯಾಯಯುತವಾಗಿ ವಿಮೆ ಹಣ ನೀಡುವಂತೆ ಕಿಶೋರ್ ಶಿರಾಡಿ ನೇತೃತ್ವದ ಮಲೆನಾಡು ಜನ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಇದೇ 24 ರಂದು ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಯರಾಮ್ ಭಾರದ್ವಾಜ್ ರವರು ಮಾತನಾಡಿ ರೈತರು ಕಟ್ಟಿದ ಹಣದ ಶೇಕಡ 5 ರಷ್ಟು ಕೂಡ ವಿಮೆ ಹಣ ಬಂದಿರುವುದಿಲ್ಲ ಎಂದು ಹೇಳಿದರು. ಅಧಿಕಾರಿಗಳು ಕೃಷಿಕರ ಜಾಗಗಳಿಗೆ ಬಂದು ಸಮೀಕ್ಷೆ ಮಾಡಿ ಸರಿಯಾದ ವರದಿಯನ್ನು ನೀಡಬೇಕು. ಅಲ್ಲದೆ ಕಚೇರಿಯಲ್ಲಿ ಕುಳಿತು ತೋಚಿದಂತೆ ಸಮೀಕ್ಷೆ ನಡೆಸಿ ಮಾಹಿತಿ ನೀಡಿದರೆ ಅದರ ನಷ್ಟವನ್ನು ಕೃಷಿಕರು ಅನುಭವಿಸಬೇಕಾಗುತ್ತದೆ. ಆದ್ದರಿಂದ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುವ ಅನಿವಾರ್ಯತೆ ಬಗ್ಗೆ ತಿಳಿಸಿದರು. ಗೋಷ್ಠಿಯಲ್ಲಿ ಕರುಣಾಕರ,ಸೋಮನಾಥ್ ಪೂಜಾರಿ ಉಪಸ್ಥಿತರಿದ್ದರು

[t4b-ticker]
error: Content is protected !!