ಚಿಕ್ಕೋಡಿ : ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಮಹಾರಾಷ್ಟ್ರದ ಸಂಸಧ, ಲೋಕಸಭೆಯಲ್ಲಿ ದೂರು ನೀಡಿದ್ದನ್ನು ಖಂಡಿಸಿ ಕರವೇ ಪದಾಧಿಕಾರಿಗಳಿಂದ ರಾಷ್ಟ್ರಪತಿ ಅವರಿಗೆ ಮನವಿ

Picture of Savistara

Savistara

Bureau Report

ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ತರದ ಎಮ್.ಇ.ಎಸ್. ಅವರ ಆಟ ನಡೆಯದಾಗಿದೆ, ಜಿಲ್ಲಾಧಿಕಾರಿ ಗೌ.ಮೊಹಮ್ಮದ ರೋಷನ್ ಅವರು ಬಿಗಿಯಾಗಿ ಕಾನೂನು ವ್ಯವಸ್ಥೆಯನ್ನು ಜಾರಿ ಮಾಡಿದ್ದಾರೆ, ಇದನ್ನು ಸಹಿಸಲಿಕ್ಕಾಗದೇ, ಡಿಸಿ ಅವರ ವಿರುದ್ಧ ಲೋಕಸಭಾಧ್ಯಕ್ಷರಲ್ಲಿ ಮಹಾರಾಷ್ಟ್ರದ ಸಂಸಧ ಧೈರ್ಯಶೀಲ ಮಾನೆ ಅವರು, ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದಾರೆ, ಬೆಳಗಾವಿ ಡಿಸಿ ಅವರು ಒಬ್ಬ ಕನ್ನಡ ಪ್ರೇಮಿ, ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರ ತೇಜುವಧೆ ಮಾಡುವುದನ್ನು ಸಮಸ್ತ ಕನ್ನಡಿಗರು ಖಂಡಿಸುತ್ತಾರೆ, ಧೈರ್ಯಶೀಲ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು, ಚಿಕ್ಕೋಡಿ ಕರವೇ ಪದಾಧಿಕಾರಿಗಳು ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳಾದ ಸುಭಾಷ ಸಂಪಗಾವಿ ಅವರ ಮುಖಾಂತರ, ರಾಷ್ಟಪತಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕರವೇ ಗೌರವಾಧ್ಯಕ್ಷ ಚಂದ್ರಕಾಂತ ಹುಕ್ಕೇರಿ ಮಾತನಾಡಿ, 140 ಕೋಟಿ ಜನರಲ್ಲಿ ಯಾರೂ ಸಹ ಸಂಸಧರಾಗಬಹುದು, ಆದರೆ ಒಬ್ಬ ಆಯ್.ಎ.ಎಸ್, ಐ.ಪಿ.ಎಸ್. ಆಯ್.ಆರ್.ಎಸ್. ಆಯ್.ಎಫ್.ಎಸ್, ಕೆ.ಎ.ಎಸ್. ಅಂತಹ ಸ್ಥಾನಮಾನ ಪಡೆಯುವುದು ಸರಳವಿಲ್ಲ, ಮಾನೆ ಅವರೇ ಜನರು ನಿಮಗೆ ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ, ನೀವು ಜನರ ಸಮಸ್ಯೆಗಳ ಬಗ್ಗೆ ಆಲೋಚನೆ ಮಾಡಿ, ನಮ್ಮ ಬೆಳಗಾವಿ ಡಿ.ಸಿ. ಅವರ ಬಗ್ಗೆ ಹಗುರವಾಗಿ ತಿಳಿಯಬೇಡಿ, ಆರುವರೇ ಕೋಟಿ ಕನ್ನಡಿಗರು ಅವರ ಹಿಂದೆ ಇದ್ದೇವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ತಹಶೀಲ್ದಾರರಾದ ರಾಜೇಶ ಬುರ್ಲಿ, ಕರವೇ ಅಧ್ಯಕ್ಷ ಸಂಜು ಬಡಿಗೇರ, ಉಪಾಧ್ಯಕ್ಷ ಸಂತೋಷ ಪೂಜೇರಿ, ಹೋರಾಟಗಾರರಾದ ಚಂದ್ರಶೇಖರ ಅರಭಾಂವಿ, ಅಪ್ಪಾಸಾಹೇಬ ಹಿರೆಕೋಡಿ, ಮೋಹನ ಪಾಟೀಲ, ಸುರೇಶ ಖದ್ದಿ, ಖಾನಪ್ಪಾ ಬಾಡ, ರಮೇಶ ಡಂಗೇರ, ಅಜ್ಜಪ್ಪಾ ವಗ್ಗೆ, ರಮೇಶ ಪಾಟೀಲ ಸೇರಿದಂತೆ ಹಲವಾರು ಜನ ಹೋರಾಟಗಾರರು ಉಪಸ್ಥಿತರಿದ್ದರು.

[t4b-ticker]
error: Content is protected !!