ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ಅನ್ಯ ಧರ್ಮದವರನ್ನು ಆಹ್ವಾನಿಸಿರುವುದು ಅಸಂಖ್ಯಾ ಭಕ್ತಾದಿಗಳ ಶ್ರದ್ದೆಗೆ ದಕ್ಕೆ ಆಗಿರುವುದನ್ನು ಖಂಡಿಸಿ, ಡಿ.22 ರಂದು ಬೃಹತ್ ಪ್ರತಿಭಟನೆ ನಡೆದಿತ್ತು.
ಆ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಯವರನ್ನು ಭೇಟಿಯಾಗಿ ಕಿರು ಷಷ್ಠಿ ಕಾರ್ಯಕ್ರಮಕ್ಕೆ ಅನ್ಯ ಧರ್ಮದವರನ್ನು ಆಮಂತ್ರಣ ಮಾಡಿರುವ ಬಗ್ಗೆ ಮತ್ತು ಅವರನ್ನು ಕರೆಸಬಾರದು ಎಂದು ಮೊದಲೇ ಮನವಿ ಸಲ್ಲಿಸಲಾಗಿತ್ತು, ಕಾರ್ಯಕ್ರಮಕ್ಕೆ ಅನ್ಯಮತೀಯರನ್ನು ಆಹ್ವಾನ ಮಾಡುವುದಿಲ್ಲವೆಂದು ಕರೆಯುದಿಲ್ಲ ಎಂದು ತಿಳಿಸಿದ್ದರು ಕೂಡ, ಒಳಗೊಳಗೇ ಅವರನ್ನು ಒತ್ತಾಯಪೂರ್ವಕವಾಗಿ ಕರೆಸಿಕೊಳ್ಳುವ ಸುದ್ದಿ ಮುನ್ನೆಲೆಗೆ ಬಂದ ಕಾರಣ ಮತ್ತೊಮ್ಮೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿ,ಮುಂದಿನ ಹಂತದ ಹೋರಾಟಕ್ಕೆ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ, ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಶ್ರೀ ಚಿದಾನಂದ ಕಂದಡ್ಕ, ಶ್ರೀ ರಾಜೇಶ್ ಎನ್.ಎಸ್,ಶ್ರೀ ಕಿಶೋರ್ ಶಿರಾಡಿ, ಪ್ರಸನ್ನ ದರ್ಬೆ , ಶ್ರೀ ಮೋಹನದಾಸ ಹಿಂದೂ ಜಾಗರಣ, ಶ್ರೀ ಪ್ರಮೋದ್ ರೈ ಕಡಬ ವಿಶ್ವಹಿಂದೂ ಶ್ರೀ ದಿನೇಶ್ ಸಂಪ್ಯಾಡಿ , ಶ್ರೀ ಅಚ್ಚುತ ಗೌಡ, ಶ್ರೀ ಮನೋಜ್ ಸುಬ್ರಮಣ್ಯ ಶ್ರೀ ಶ್ರೀಕುಮಾರ್ ಬಿಲದ್ವಾರ,ಶ್ರೀ ಗಿರೀಶ್ ಆಚಾರ್ಯ, ಲಕ್ಷ್ಮೀಶ್ ಇಜನಡ್ಕ,ಶ್ರೀ ರಾಮಚಂದ್ರ ದೇವರಗದ್ದೆ, ಶ್ರೀ ಬುಕ್ಷಿತ್ ನೇರ್ಪಾಡಿ, ಶ್ರೀ ವಿನೋದ್ ಕುಲ್ಕುಂದ, ಶ್ರೀ ಸಚಿನ್ ವಳಲಂಬೆ, ಶ್ರೀ ಸಂದೀಪ ವಳಲಂಬೆ, ಶ್ರೀ ರಾಧಾಕೃಷ್ಣ ಆರವಾರ, ಶ್ರೀ ಪ್ರಸಾದ್ ರೈ, ಶ್ರೀ ದಿಲೀಪ್ ಉಪ್ಪಳಿಕೆ, ಶ್ರೀ ಯಶವಂತ ಐನೆಕಿದು, ಉಪಸ್ಥಿತರಿದ್ದರು.













































