ಕೊಲ್ಲಮೊಗ್ರು : ಬಹುದಿನಗಳ ಬೇಡಿಕೆಯಾಗಿದ್ದ ಕೋನಡ್ಕ-ಕೊಂದಾಳ ಸಂಪರ್ಕ ಸೇತುವೆಗೆ ಶಾಸಕಿ ಭಾಗೀರಥಿಯವರಿಂದ ಗುದ್ದಲಿಪೂಜೆ

Picture of Savistara

Savistara

Bureau Report

ಬಹುದಿನಗಳ ಬೇಡಿಕೆಯಾಗಿದ್ದ ಕೊಲ್ಲಮೊಗ್ರು ಗ್ರಾಮದ ಕೋನಡ್ಕ-ಕೊಂದಾಳ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಡಿ.25 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಆನಂತರ ಮಾತನಾಡಿದ ಶಾಸಕರು “ಬಹುಕಾಲದ ಬೇಡಿಕೆ ತಕ್ಷಣ ಈಡೇರಲಿ ಹಾಗೂ ಇದು ಇನ್ನು ಮುಂದೆ ಸದಾಕಾಲ ಜನರ ಅನುಕೂಲಕ್ಕೆ ದೊರೆಯಲಿ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ, ಉಪಾಧ್ಯಕ್ಷರಾದ ಮಾಧವ ಚಾಂತಾಳ, ಗುತ್ತಿಗೆದಾರರಾದ ಮನುದೇವ ಪರಮಲೆ, ಬೂತ್ ಅಧ್ಯಕ್ಷರಾದ ಹೂವಪ್ಪ ಸಂಪ್ಯಾಡಿ, ಕಾರ್ಯದರ್ಶಿ ಹರೀಶ್ ಬಳ್ಳಡ್ಕ, ಪ್ರಮುಖರಾದ ಡ್ಯಾನಿ ಯಳದಾಳು, ಚಂದ್ರಶೇಖರ ಕೋನಡ್ಕ, ಅಣ್ಣಪ್ಪ ಕೋನಡ್ಕ, ಯೋಗೀಶ್ ಬಾಳೆಕಜೆ, ಶೇಖ‌ರ್ ಕೊಂದಾಳ, ಮಿಥುನ್ ಪೈಲೂರು, ಪವನ್ ಕೋನಡ್ಕ, ಗುರು ಕೋನಡ್ಕ, ರಾಜಣ್ಣ ನೆಲ್ಲಿಪುಣಿ, ಪುರುಷೋತ್ತಮ ಕೋನಡ್ಕ, ಚೆನ್ನಕೇಶವ ಕೋನಡ್ಕ ಹಾಗೂ ಆ ಭಾಗದ ಎಲ್ಲಾ ಫಲಾನುಭವಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!