ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವಕ್ಕೆ ಮುಖ್ಯ ರಸ್ತೆಯ ಬದಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಳ್ಯ ಬಿಜೆಪಿ ನಗರ ಮಹಾಶಕ್ತಿ ಕೇಂದ್ರ ವತಿಯಿಂದ ತಹಿಶೀಲ್ದಾರರಿಗೆ ಮನವಿ ಸಲ್ಲಿಸಿದರು.ಜಲ ಜೀವನ್ ಯೋಜನೆಯಡಿಯಲ್ಲಿ ನಡೆಯುತ್ತಿರುವ ಪೈಪ್ ಲೈನ್ ವಿಸ್ತರಣೆಯಿಂದ ಮುಖ್ಯ ರಸ್ತೆ ಮತ್ತು ರಥ ಬೀದಿ ಯಲ್ಲಿ ತೊಂದರೆ ಉಂಟಾಗಿರುವ ಬಗ್ಗೆ ಕಸಬಾ ಗ್ರಾಮದ ಹೃದಯಭಾಗದಲ್ಲಿರುವ ಶ್ರೀ ಚೆನ್ನಕೇಶವ ದೇವರ ಕಾಲಾವರಿ ಜಾತ್ರೋತ್ಸವವು ಡಿಸೆಂಬರ್ 27 ರಿಂದ ಜ.12 ಪೈಪ್ ಲೈನ್ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ.
ಆದುದರಿಂದ ತಾವು ವುಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ಶ್ರೀ ಚೆನ್ನಕೇಶವ ದೇವರ ಜಾತೋತ್ಸವಕ್ಕೆ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಸಹಕಾರ ಒದಗಿಸಿ ಕೊಡುವರಂತೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎ. ಟಿ ಕುಸುಮಧಾರ, ನಾರಾಯಣ ಶಾಂತಿನಗರ,

ಜಗನ್ನಾಥ ಜಯನಗರ,ದಯಾನಂದ ಕೇರ್ಪಳ, ನವೀನ್ ಕೂಡ್ಪಾಜೆ ,ಬುದ್ಧ ನಾಯ್ಕ್, ಬಿಯಂಎಸ್ ರಿಕ್ಷಾ ಚಾಲಕ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು. ತಹಿಶೀಲ್ದಾರ್ ಈ ಬಗ್ಗೆ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ













































