ಕಂಬಳ ಕಮೆಂಟರಿಗೂ ಮೂಗುದಾರ | ಟೀಕೆ, ಅನಗತ್ಯ ಹಿನ್ನೆಲೆಗೆ ಅವಕಾಶವಿಲ್ಲ | ಮುಂದಿನ ಕಂಬಳದಿಂದಲೇ ಜಾರಿ

Picture of Savistara

Savistara

Bureau Report

ತುಳುನಾಡಿನ ಹಿರಿಮೆಯ ಕಂಬಳ ಕ್ರೀಡೆಯಲ್ಲಿ ವೀಕ್ಷಕ ವಿವರಣೆ ಒಂದು ರೀತಿ ಆಕರ್ಷಣೆ, ಕಂಬಳ ಕ್ಷೇತ್ರದ ಇತಿಹಾಸ, ವೈಶಿಷ್ಟ್ಯ, ಕೋಣಗಳ ವೇಗಕ್ಕೆ ತಕ್ಕಂತೆ ವಿಶ್ಲೇಷಣೆ, ಓಟಗಾರನ ಸಾಧನೆಯ ವಿಶ್ಲೇಷಣೆ ಕಮೆಂಟರಿಗಳ ಮೂಲಕ ಕೇಳುವುದೇ ಸೊಬಗು. ಈ ಎಲ್ಲ ಕಾರಣದಿಂದ ಕಮೆಂಟರಿ ಕಂಬಳಕ್ಕೆ ತಿಲಕವಿದ್ದಂತೆ. ಆದರೆ ಇದೀಗ ಕಂಬಳ ವೀಕ್ಷಣೆ ವಿವರಣೆಗೂ ಮೂಗುದಾರ ಹಾಕಲು ಕಂಬಳ ಅಸೋಸಿಯೇಶನ್‌ ನಿರ್ಧರಿಸಿದೆ.ಮಂಗಳೂರು ಕಂಬಳದಲ್ಲಿ ವೀಕ್ಷಕ ವಿವರಣೆ ಅಧ್ವಾನಕ್ಕೆ ಕಾರಣವಾಗಿದ್ದು, ರಾಜಿ ಸಂಧಾನ ನಡೆಸಬೇಕಾಗಿತ್ತು. ಕಂಬಳ ಇತಿಹಾಸ ಅವಲೋಕಿಸಿದರೆ ಈ ರೀತಿಯ ಟೀಕೆ, ಕಮೆಂಟರಿ, ಹಾಸ್ಯ, ಅಪಹಾಸ್ಯ ಹೊಸತೇನಲ್ಲ, ಎಷ್ಟೋ ಕಂಬಳಗಳಲ್ಲಿ ಕಮೆಂಟರಿ ವಿಚಾರದಲ್ಲೇ ಜಗಳವಾಗಿ ಕೋಣಗಳನ್ನು ಓಡಿಸುವುದಿಲ್ಲವೆಂದು ಹಠ ಹಿಡಿದದ್ದೂ ಇದೆ. ಆದರೆ ಕಂಬಳ ಮುಗಿದ ಮೇಲೆ ಎಲ್ಲವೂ ಸರಿ ಹೋಗುತ್ತಿತ್ತು. ಆದರೆ ಸಾಮಾಜಿಕ ಸಕ್ರಿಯವಾದ ಮೇಲೆ ಕಮೆಂಟರಿ ವಿಚಾರ ದೊಡ್ಡಮಟ್ಟದ ಚರ್ಚೆ ಹುಟ್ಟುಹಾಕುತ್ತಿದೆ, ವಿವಾದಕ್ಕೂ ಕಾರಣವಾಗುತ್ತಿದೆ.

ವೀಕ್ಷಕ ವಿವರಣೆಗೆ ಮೂಗುದಾರ?:

ಕಂಬಳದಲ್ಲಿ ವೀಕ್ಷಕವಿವರಣೆ ನಿಯಂತ್ರಿಸುವ ನಿಟ್ಟಿನಲ್ಲಿ ಅಸೋಸಿಯೇಶನ್ ಕೆಲವೊಂದು ನಿಬಂಧನೆಗಳನ್ನು ಸೂಚಿಸಿದೆ. ಯಾವುದೇ ವ್ಯಕ್ತಿಗತ ಟೀಕೆ ಮಾಡುವಂತಿಲ್ಲ, ಕೋಣಗಳು, ಓಟಗಾರರಬಗ್ಗೆ ಯಾವುದೇ ಋಣಾತ್ಮಕ ಅಂಶ ಉಲ್ಲೇಖಿಸುವಂತಿಲ್ಲ. ಆಯಾ ಸ್ಥಳದ ಕಂಬಳದ ವಿಶೇಷತೆ, ವ್ಯವಸ್ಥಾಪಕರ ಬಗ್ಗೆ ಮಾತ್ರ ಉಲ್ಲೇಖ ಮಾಡಬೇಕು. ಅನಗತ್ಯ ವಿಚಾರವನ್ನು ವೀಕ್ಷಕ ವಿವರಣೆಯಲ್ಲಿ ಉಲ್ಲೇಖಿಸುವಂತಿಲ್ಲ. ಕೋಣಗಳು ಮತ್ತು ಕೋಣಗಳ ಮಾಲೀಕರ ಬಗ್ಗೆ ವಿಶ್ಲೇಷಣೆ ಮಾಡು ವಾಗ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಹರ್ಷ ಭೋಗೈ, ಶಾಸ್ತ್ರಿ ಮೀರಿಸಬಲ್ಲ ಕಮೆಂಟರಿ: ಕ್ರಿಕೆಟ್ ನಲ್ಲಿ ಹರ್ಷಾ ಭೋಗ್ಲ, ರವಿಶಾಸ್ತ್ರಿ, ನವಜ್ಯೋತ್ ಸಿಂಗ್ ಸಿದ್ದು ಕ್ರಿಕೆಟ್ ವೀಕ್ಷಕ ವಿವರಣೆಯಲ್ಲಿ ಅಗ್ರಗಣ್ಯ ಹೆಸರು ಗಳು. ಕಂಬಳದಲ್ಲಿ ಇವರನ್ನು ಮೀರಿಸಬಲ್ಲ. ಉದ್ಯೋಷಕರು ಇದ್ದಾರೆ. ಕೆಲವರು ವೀಕ್ಷಕ ವಿವರಣೆಗೆ ಕುಳಿತರೆ 5-6 ಗಂಟೆ ನಿರರ್ಗಳವಾಗಿ ಮಾತನಾಡುವುದರಲ್ಲಿ ನಿಪುಣರು. ಕಂಬಳ ಕಮೆಂಟರಿಯಲ್ಲೂ ಶಾಯರಿ, ಗಾದೆ, ಇತಿಹಾಸಗಳ ಒಬ್ಬರಿಗೊಬ್ಬರು ನಿಸ್ಸಿಮರು. ವಾಕ್ಚಾತುರ್ಯ, ಹಿನ್ನೆಲೆ, ವಿಶ್ಲೇಷಣೆ ಇದೆ. ಕಂಬಳದಲ್ಲಿ ಕಮೆಂಟರಿ ಹೇಳುವುದರಲ್ಲಿ ಇತಿಹಾಸ ಬಂಡವಾಳವಾಗಿದೆ. ಸಂಗ್ರಹ ಕಂಬಳ ಉದ್ಯೋಷಕರಇವರು ಕೂಡ ಕಂಬಳದ ಸೆಲೆಬ್ರಿಟಿಗಳಾಗಿದ್ದಾರೆ. ಕಂಬಳ ಪ್ರಸ್ತುತ 20ಕ್ಕೂ ಅಧಿಕ ಕಂಬಳ ವೀಕ್ಷಕ ವಿವರಣೆಗಾರರಿದ್ದು ಓಡಿಸುವವರ ವೈಶಿಷ್ಟ್ಯತೆ ಏನು ಎಂಬುದನ್ನು ಕೋಣಗಳು, ಅದನ್ನು ಓಡಿಸುವವರಾರು? ಕೋಣ ಎಳೆಎಳೆಯಾಗಿ ವಿವರಣೆ ನೀಡುತ್ತಾರೆ.

ಉದ್ವೇಷವಿಲ್ಲದ ಕಂಬಳ ನಿರೀಕ್ಷೆ ಮಾಡಲು ಸಾಧ್ಯವಿಲ್ಲ, ಬೆಂಗಳೂರು ಕಂಬಳದಲ್ಲಿ ಆರಂಭದಲ್ಲಿ ಉದ್ವೇಷವಿಲ್ಲದ ಕಾರಣ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ವೈಯಕ್ತಿಕ ಟೀಕೆ, ವಿಶ್ಲೇಷಣೆ ಹೊರತಾದ ಉದ್ವೇಷ ಕಂಬಳದಲ್ಲಿ ಇರಲೇಬೇಕು. ಅದು ಕಂಬಳಕ್ಕೆ ಶೋಭೆ.

ವಿಜಯ ಕುಮಾರ್ ಕಂಗಿನಮನೆ, ಕಾರ್ಯದರ್ಶಿ, ಕಂಬಳ ಶಿಸ್ತುಪಾಲನಾ ಸಮಿತಿ

ಕಂಬಳ ವೀಕ್ಷಕ ವಿವರಣೆಯಲ್ಲಿ ಅನಗತ್ಯ ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿರುವ ಕಾರಣ ಕಂಬಳ ಕೋಣ ಬಿಡಲು ತಡವಾಗುತ್ತಿದೆ. ಇದು ಇಡೀ ಕಂಬಳದ ಸಮಯದ ಮೇಲೆ ಪರಿಣಾಮ ಬೀರುತ್ತಿದೆ. ಕೆಲವೊಂದು ಕಂಬಳದಲ್ಲಿ ಇತಿಹಾಸ, ಪೀಠಿಕೆ, ವೈಯಕ್ತಿಕ ಟೀಕೆ, ವಿಪರೀತ ವಿಶ್ಲೇಷಣೆ, ಕೋಣಗಳು ಮತ್ತು ಯಜಮಾನರ ಬಗ್ಗೆ ಓಲೈಕೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಂಬಳ ಉದ್ವೇಷಕ್ಕೆ ನಿಯಂತ್ರಣ ತರಲು ನಿರ್ಧರಿಸಲಾಗಿದ್ದು, ನಿರ್ದೇಶನ ನೀಡಲಾಗಿದೆ.

ದೇವಿಪ್ರಸಾದ್‌ ಶೆಟ್ಟಿ ಅಧ್ಯಕ್ಷರು. ರಾಜ್ಯ ಕಂಬಳ ಅಸೋಸಿಯೇಷನ್

[t4b-ticker]
error: Content is protected !!