ಮತದಾರ ಪಟ್ಟಿ ಮ್ಯಾಪಿಂಗ್: 3 ವಾರ ವಿಸ್ತರಣೆ

Picture of Savistara

Savistara

Bureau Report

ಬೆಂಗಳೂರು: ನಗರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರಪರಿಷ್ಕರಣೆ ಪೂರ್ವಭಾವಿ ತಯಾರಿ ಮುಂದುವರೆದಿದ್ದು, 2002ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಯೊಂದಿಗೆ ಮ್ಯಾಪಿಂಗ್‌ ಮಾಡುವ ಚಟುವಟಿಕೆಯನ್ನು ಜ.13ರಿಂದ ಮೂರು ವಾರಗಳಿಗೆ ವಿಸ್ತರಣೆ ಮಾಡಲಾಗಿದೆ.

ಮತದಾರರ ಪಟ್ಟಿಯೊಂದಿಗೆ ತಾಳೆಯಾಗದೇ ಇರುವ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದು ಮ್ಯಾಪಿಂಗ್ ಪೂರ್ಣಗೊಳಿಸಲಿದ್ದಾರೆ ಎಂದು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.ಮತದಾರರ ಪಟ್ಟಿಯಲ್ಲಿ ಮತದಾರರ ಭಾವಚಿತ್ರ ಮಸುಕು ಆಗಿರುವ, ಅತೀ ಸಣ್ಣ ಫೋಟೊ ಅಥವಾ ಭಾವಚಿತ್ರ ಸರಿಯಾಗಿ ಕಾಣದಿರುವುದು, ಮತದಾರರ ಹೆಸರು, ಲಿಂಗ ಹಾಗೂ ವಿಳಾಸದಲ್ಲಿ ಆಗಿರುವ ಲೋಪದೋಷ ಪತ್ತೆ ಹಚ್ಚಿ ಬಿಎಒ, ಆ್ಯಪ್ ಮುಖಾಂತರ ಅಥವಾ ಮತದಾರರಿಂದ ನಮೂನೆ-8ರಲ್ಲಿ ಅರ್ಜಿ ಪಡೆಯುವ ಪ್ರಕ್ರಿಯೆ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನೆಗಳಿಗೆ ಬಿಎಲ್‌ಒಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ಮಾಹಿತಿ ಒದಗಿಸಿ ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿರುವಂತಹ ದೋಷಗಳನ್ನು ಸರಿಪಡಿಸಿಕೊಳ್ಳಲು ಮತದಾರರು ಭಾರತ ಚುನಾವಣಾ ಆಯೋಗ ಪೋರ್ಟಲ್ https://voters.eci.gov.in/ಇದರಲ್ಲಿ ನಮೂನೆ-8ನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

[t4b-ticker]
error: Content is protected !!