ಧರ್ಮಸ್ಥಳ: ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಆಯುಷ್ ರತ್ನ ಪುರಸ್ಕಾರ

Picture of Savistara

Savistara

Bureau Report

ಬೆಳ್ತಂಗಡಿ: ಆರೋಗ್ಯಯುತ ಸಮಾಜಕ್ಕಾಗಿ ಜನಜಾಗೃತಿ ಹಾಗೂ ಸಂಭ್ರಮಾಚರಣೆಯ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ ಆಯುಷ್ ಹಬ್ಬ ಜ. 31 ಹಾಗೂ ಫೆ.1 ರಂದು ಮಂಗಳೂರಿನ ಡಾ. ಟಿ ಎಂ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ನನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ ಎಂದು ಆಯುಷ್ ಹಬ್ಬ ಸಮಿತಿಯ ಗೌರವ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆಬ್ರವರಿ.1 ರಂದು ಬೆಳಗ್ಗೆ 10:30 ಕ್ಕೆ ಆಯುಷ್‌ ವೈದ್ಯ ಪದ್ಧತಿಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಆಯುಷ್ ರತ್ನ ಪುರಸ್ಕಾರ, ಡಾ.ಎಂ ಮೋಹನ್ ಆಳ್ವ ಅವರಿಗೆ ಆಯುಷ್ ವಿಭೂಷಣ ಪುರಸ್ಕಾರ ಸಹಿತ ಹಲವು ಗಣ್ಯರಿಗೆ ಆಯುಷ್ ಭೂಷಣ ಪ್ರಶಸ್ತಿ, ಆಯುಷ್ ಶ್ರೀ ಪ್ರಶಸ್ತಿ, ಆಯುಷ್ ಯುವಶ್ರೀ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಬಳಿಕ ಸಂಜೆಯವರೆಗೆ ವೈಜ್ಞಾನಿಕ ಅಧಿವೇಶನಗಳು ಹಾಗೂ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಸಂಜೆ ವೈ ಗಂಟೆಗೆ ಆಯುಷ್ ಹಬ್ಬ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಆಯುಷ್ ಹಬ್ಬ ಸಮಿತಿ ಅಧ್ಯಕ್ಷ ಡಾ. ಕೇಶವ ಪಿ.ಕೆ., ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಪ್ರಮುಖರಾದ ಡಾ. ಪ್ರವೀಣ್ ರೈ ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!