ಪುತ್ತೂರು: ರೈತರಜನಪದ ಕ್ರೀಡೆಯಾಗಿರುವ ಕಂಬಳಕ್ಕೆ ತಡೆಯ ಬಳಿಕ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಜೂಜು ಮಸ್ತಿ ಎಂಬ ಹಣೆಪಟ್ಟಿ ಕಟ್ಟಿ ಪ್ರಸ್ತುತ ನಿರ್ಬಂಧ ಹೇರಲಾಗಿದೆ. ಇದರ ವಿರುದ್ಧ ಹೋರಾಟಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ರಚನೆಗೊಳ್ಳುತ್ತಿದೆ. ಧಾರ್ಮಿಕ ಹಿನ್ನೆಲೆಯಿಂದ ನಡೆಸಲಾಗುವ ಜೂಜು ರಹಿತ ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಶಾಸಕರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಫೆ.1ರಂದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ರಚನೆಯ ಸಮಾಲೋಚನಾ ಸಭೆ ಕೊಟೇಚಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ಸಮಿತಿ ಸಂಚಾಲಕ ಬೆಳಿಯಪ್ಪ ಗೌಡ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃ ತ ಮನ್ಮಥ ಶೆಟ್ಟಿ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ತುಳುನಾಡಿನ ಪ್ರಾಚೀನ ಸಂಪ್ರದಾಯದಂತೆ ನೇಮೋತ್ಸವದ ಸಂದರ್ಭಗಳಲ್ಲಿ ಈ ಸಾಂಪ್ರದಾಯಿಕ ಕೋಳಿ ಅಂಕವನ್ನು ನೇಮೋತ್ಸವದ ಗೊನೆಮುಹೂರ್ತದ ನಡೆಸಲಾಗುತ್ತಿತ್ತು. ಸಂದರ್ಭಅನಂತರ ‘ಕೋಳಿಗೂಟ’ ನೆಡುವ ಆಚರಣೆ ನಡೆಯುತ್ತಿದೆ. ಕೆಲ ಕಡೆಗಳಲ್ಲಿ ನೇಮೋತ್ಸದ ಮುಂಚಿತವಾಗಿ ಕೋಳಿ ಅಂಕ ನಡೆಸಲಾಗುತ್ತಿದ್ದರೆ, ಇನ್ನು ಕೆಲ ಭಾಗಗಳಲ್ಲಿ ನೇಮೋತ್ಸವದ ಬಳಿಕ ಕೋಳಿ ಅಂಕ ನಡೆಸಲಾಗುತ್ತದೆ. ಆದರೆ, ಇದೀಗ ದ.ಕ. ಜಿಲ್ಲೆಯಲ್ಲಿ ಕೋಳಿಅಂಕ ನಡೆಸಲು ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಧಾರ್ಮಿಕ ತಾಣಗಳಲ್ಲಿಯೂ ಜೂಜು ರಹಿತ ಕೋಳಿ ಅಂಕಕ್ಕೆ ನಿರ್ಬಂದ ಹೇರುವ ಕೆಲಸ ಮಾಡಲಾಗಿದೆ ಎಂದರು.ಧಾರ್ಮಿಕ ಹಿನ್ನಲೆಯಲ್ಲಿ ಕೋಳಿ ಗಣಗಳಿಗೆ ಅಂಕದ ರಕ್ತತರ್ಪಣ ಹಿಂದಿನಿಂದಲೂ ಮೂಲಕ ನೀಡುವ ನಂಬಿಕೆ ನಡೆದುಕೊಂಡು ಬಂದಿದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ಆಚರಣೆ,
ತೆಂಗಿನಕಾಯಿ ಕುಟ್ಟುವುದು ಸೇರಿದಂತೆ ಅವಿಭಜಿತ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಯಾದ ಕೋಳಿಅಂಕ ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಸಲಾಗುತ್ತಿತ್ತು. ಈ ಧಾರ್ಮಿಕ ಪರಂಪರೆಯ ಕೋಳಿ ಅಂಕಕ್ಕೆ ನಿಷೇಧ ಹೇರುವ ಮೂಲಕ ನಾಡಿನ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ನಡೆಸಲಾಗಿದೆ. ಈ ಹಿಂದೆ ಕಂಬಳ ಕ್ಷೇತ್ರಕ್ಕೂ ಈ ಸಮಸ್ಯೆ ಉಂಟಾಗಿತ್ತು. ಆದರೆ, ಈ ವಿಚಾರದಲ್ಲಿ ನ್ಯಾಯಾಲಯದ ಮೂಲಕ ಹೋರಾಟ ನಡೆಸಿ ಇದೀಗ ಕಂಬಳ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.ಸಭೆ ಬಳಿಕ ನಿಯೋಗದ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರನ್ನು ಶಾಸಕರನೇತೃತ್ವದಲ್ಲಿ ಭೇಟಿ ಮಾಡಿ ಅವರಿಗೆ ಮನವಿ ನೀಡುವ ಕೆಲಸ ಮಾಡಲಾಗುವುದು ಎಂದರು.ಜಿ.ಪಂ. ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ವಿವೇಕ್ ರೈ, ಚಂದ್ರಹಾಸ ಕೇಪು, ಶಿವಪ್ರಸಾದ್ ಪಡೀಲು ಉಪಸ್ಥಿತರಿದ್ದರು.












































