ಕಾಂಗ್ರೆಸ್ ನದ್ದು ಮುಟ್ಟಾಳ ಹೈಕಮಾಂಡ್, ಅದಕ್ಕೆ ಜೀವ ಇಲ್ಲ – ವಿಧಾನಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ

Picture of Savistara

Savistara

Bureau Report

ಉಪ್ಪಿನಂಗಡಿ ಫೆಬ್ರವರಿ 14: ಸಿಎಂ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲ್ಲ ಅಂತಿದ್ದಾರೆ, ಯಾವುದೇ ಕಾರಣಕ್ಕೂ ಸಿಎಂ ಆಗದೇ ನಾನು ಬಿಡೋದಿಲ್ಲ ಅಂತ ಡಿಕೆಶಿ ಹೇಳ್ತಾರೆ, ಗ್ರೆಸ್ ನದ್ದು ಮುಟ್ಟಾಳ ಹೈಕಮಾಂಡ್, ಅದಕ್ಕೆ ಜೀವ ಇಲ್ಲ, ಸತ್ತಂತೆ ಬದುಕುವ ಎಐಸಿಸಿ ಇದಕ್ಕೆ ಉತ್ತರಕೊಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಉಪ್ಪಿನಂಗಡಿಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲ್ಲ ಅಂತಿದ್ದಾರೆ, ಯಾವುದೇ ಕಾರಣಕ್ಕೂ ಸಿಎಂ ಆಗದೇ ನಾನು ಬಿಡೋದಿಲ್ಲ ಅಂತ ಡಿಕೆಶಿ ಹೇಳ್ತಾರೆ ಆದರೆ ಕಾಂಗ್ರೆಸ್ ನದ್ದು ಮುಟ್ಟಾಳ ಹೈಕಮಾಂಡ್, ಅದಕ್ಕೆ ಜೀವ ಇಲ್ಲ, ಸತ್ತಂತೆ ಬದುಕುವ ಎಐಸಿಸಿ ಇದಕ್ಕೆ ಉತ್ತರ ಕೊಡಬೇಕು ಎಂದರು. ಬಹುಶಃ ಕಾಂಗ್ರೆಸ್ ಹೈಕಮಾಂಡ್ ಐಸಿಯುನಲ್ಲಿದೆ, ಹಾಗಾಗಿ ಸಿಎಂ ಸ್ಥಾನ ವಿಚಾರದಲ್ಲಿ ಹೈಕಮಾಂಡ್ ಉತ್ತರ ಕೊಡ್ತಿಲ್ಲ. ಎರಡೂವರೆ ವರ್ಷದ ಅಗ್ರಿಮೆಂಟ್ ಎಲ್ಲಿದೆ ಹೇಳಲಿ, ಲಿಖಿತವೋ ಅಲಿಖತವೋ, ಯಾರು ಯಾರಿಗೆ ಹೇಳಿದರು ಹೇಳಿ, ಖರ್ಗೆಯವರಿಗೆ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಇದೆಯಾ? ಹೈಕಮಾಂಡ್ ಗೆ ಹೇಳ್ತಿನಿ ಅಂತ ಖರ್ಗೆಯವರು ಹೇಳ್ತಾರೆ, ಹಾಗಾದ್ರೆ ಕಾಂಗ್ರೆಸ್ ನ ಹೈಕಮಾಂಡ್ ಯಾರು, ಹೈಕಮಾಂಡ್ ಅಂದ್ರೆ ಯಾರು ಅಧ್ಯಕ್ಷರಲ್ವಾ? ಎಂದು ಪ್ರಶ್ನಿಸಿದ ಚಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಗೆ ಇಂತಹ ಒಂದು ಕೆಟ್ಟ ಸ್ಥಿತಿ ಬಂದಿದೆ. ಹಾಗಾಗಿ ಇದಕ್ಕೆಲ್ಲ ಖರ್ಗೆಯವರು ಉತ್ತರ ಕೊಡ್ಬೇಕು.2028ಕ್ಕೆ ಡಿಕೆಶಿ ಸಿಎಂ ಆಗಲಿ ಅಂತ ಹೇಳ್ತಾರೆ. 2028 ಅಲ್ಲ 2048 ಆದ್ರೂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ, ಯಾಕಂದ್ರೆ ನಾವು ಬಿಜೆಪಿಯವ್ರು ಬಿಡಲ್ಲ. ಇನ್ನು ಮುಂದೆ ನಮ್ಮದೇ, ದೇಶವೂ ನಮ್ಮದೇ, ರಾಜ್ಯವೂ ನಮ್ಮದೇ ಕಾಂಗ್ರೆಸ್ ಗೆ ಇನ್ಮುಂದೆ ಯಾವ ಕಾರಣಕ್ಕೂ ಜನ ಮತ ಹಾಕಲ್ಲ, ಕಾಂಗ್ರೆಸ್ ನಿಂದ ಡಿಕೆಶಿ ಸಿಎಂ ಆದ್ರೆನೂ, ಸಿದ್ದರಾಮಯ್ಯ ಇದ್ರೆ ನಮ್ಗೇನೂ, ಸ್ ನಿಂದ ಕತ್ತೆ ಸಿಎಂ ಆದ್ರೂ ಕೇಳೋದಿಲ್ಲ ಎಂದರು.

[t4b-ticker]
error: Content is protected !!