ನೀಟ್ ಸೋರಿಕೆ ತಡೆಗೆ ಲಾಕ್‌ಡೌನ್ ಅಸ್ತ

Picture of Savistara

Savistara

Bureau Report

ಹೊಸದಿಲ್ಲಿ, ಜೂ. 8: ನೀಟ್ ಮರುಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ಸಿದ್ದಪಡಿಸಿದ ತಜ್ಞರನ್ನು ರಹಸ್ಯ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಲಾಕ್‌ಡೌನ್‌ನಲ್ಲಿ ಇರಿಸಲಾಗಿದ್ದು, ಜೂ. 21ರ ಮರುಪರೀಕ್ಷೆ ಮುಗಿಯುವ ವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ವರದಿಯಾಗಿದೆ.ಮತ್ತೆ ಪ್ರಶ್ನೆಪತ್ರಿಕೆ ಸೋರಿಕೆ ಭೀತಿಯನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.ವರದಿ ಪ್ರಕಾರ, ನೀಟ್ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲಿ ತೊಡಗಿರುವ ಎಲ್ಲ ತಜ್ಞರ ಫೋನ್‌ಗಳು, ಲ್ಯಾಪ್ಟಾಪ್‌ ಗಳು, ಇಂಟರ್ನೆಟ್ ಸಂಪರ್ಕ ಮತ್ತು ಹೊರಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ. ತಜ್ಞರ ಮೇಲೆ ದಿನದ 24 ತಾಸು ಕೂಡ ನಿಗಾ ಇಟ್ಟಿದ್ದು, ಆವ ರಣದ ಒಳಗೆ ಹಾಗೂ ಹೊರಗೆ ಹೋಗುವ ಪ್ರತಿಯೊಬ್ಬರ ಚಲನವಲನವನ್ನು ದಾಖಲಿಸ ಲಾಗುತ್ತಿದೆ. ಕೇವಲ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಅಲ್ಲಿಗೆ ಪ್ರವೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಪ್ರಶ್ನೆಪತ್ರಿಕೆ ರಚನೆ, ಅನುವಾದ, ಮಾಡರೇಶನ್, ಮುದ್ರಣ, ಪ್ಯಾಕೇಜಿಂಗ್, ಸಂಗ್ರಹಣೆ, ಸಾಗಣೆ ಮತ್ತು ಅಂತಿಮ ವಿತರಣೆಯ ವರೆಗಿನ ಪ್ರತಿಯೊಂದು ಹಂತದ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಐಎಎಫ್ ಹೆಲಿಕಾಪ್ಟರ್ ಮೂಲಕ ನೀಟ್ ಪ್ರಶ್ನೆಪತ್ರಿಕೆ ರವಾನೆ?

ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಹಾಗೂ ಜೂ. 21ರ ಮರುಪರೀಕ್ಷೆಯಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಿರುವ ಎನ್‌ಟಿಎಯು ಭಾರತೀಯ ವಾಯುಪಡೆಯ ಎಂಐ 17 ಹೆಲಿಕಾಪ್ಟರ್ ಗಳ ಮೂಲಕ ಪ್ರಶ್ನೆಪತ್ರಿಕೆಗಳನ್ನು ಸಾಗಿಸಲು ಮುಂದಾಗಿದೆ ಎಂದು ವರದಿಯಾಗಿದೆ.

[t4b-ticker]
error: Content is protected !!