ಬೆಂಗಳೂರು: ರಾಜ್ಯದಲ್ಲಿ ಜೂನ್ 26ಕ್ಕೆ ತೆರವಾಗಲಿರುವ ನಾಲ್ಕುರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಜೂನ್ 18ಕ್ಕೆ ದಿನಾಂಕ ಘೋಷಣೆಯಾಗಿದೆ. ಇದರ ಮಧ್ಯೆ ವಿಧಾನಪರಿಷತ್ತಿನ 7 ಸ್ಥಾನಗಳ ಅವಧಿ ಜೂನ್ 30ಕ್ಕೆ ಅಂತ್ಯವಾಗಲಿದ್ದು, ಜೂನ್ ತಿಂಗಳಲ್ಲಿ ಸಂಸತ್ತಿನ ಮತ್ತು ವಿಧಾನಮಂಡಲದ ಮೇಲ್ಮನೆಗೆ ನಡೆಯಲಿದೆ.ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಿದ್ದ ಏಳು ಮಂದಿ ಸದಸ್ಯರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದೆ. ಈ ಸ್ಥಾನಗಳಿಗೆ ಚುನಾವಣೆ ನಡೆಸಲು ಮುಂದಿನ ವಾರ ಇಲ್ಲವೇ ಜೂನ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ. ನಿವೃತ್ತಿ ಹೊಂದಲಿರುವ 7 ಸದಸ್ಯರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂವರು, ಜೆಡಿಎಸ್ ನ ಒಬ್ಬ ಸದಸ್ಯ ಇದ್ದಾರೆ.
ಜುಲೈ-ನವೆಂಬರ್‌ನಲ್ಲಿ ಮತ್ತೆರಡು ಚುನಾವಣೆ:
ಇದಲ್ಲದೆ ಜುಲೈ ಮತ್ತು ನವೆಂಬರ್ ತಿಂಗಳಲ್ಲಿ ವಿಧಾನಪರಿಷತ್ ಗೆ ಮತ್ತೆರಡು ಚುನಾವಣೆ ನಡೆಯಲಿದೆ. 2026ರ ಜುಲೈ 21ಕ್ಕೆ ನಾಮನಿರ್ದೇಶನದ ಕೋಟಾದ ಐವರು ಸದಸ್ಯರ ಅವಧಿ ಮುಗಿಯಲಿದ್ದು ಈ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದೇ ರೀತಿ 2026ರ ನವೆಂಬರ್ 11ಕ್ಕೆ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳ ಸದಸ್ಯರ ಅವಧಿ ಮುಗಿಯಲಿದ್ದು, ಈ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ವರ್ಷದ ಜೂನ್ ನಿಂದ ನವೆಂಬರ್ ತಿಂಗಳಲ್ಲಿ ವಿಧಾನಪರಿಷತ್ತಿನ ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಜೂನ್ 30ಕ್ಕೆ ನಿವೃತ್ತಿ ಆಗಲಿರುವವರು (ವಿಧಾನಸಭೆಯಿಂದ ವಿಧಾನಪರಿಷತ್)
1.ಗೋವಿಂದರಾಜು-ಜೆಡಿಎಸ್
2.ನಸೀರ್ ಅಹ್ಮದ್-ಕಾಂಗ್ರೆಸ್
3. ಎನ್.ನಾಗರಾಜ್ (ಎಂಟಿಬಿ)-ಬಿಜೆಪಿ
4.ಕೆ.ಪ್ರತಾಪಸಿಂಹ ನಾಯಕ್-ಬಿಜೆಪಿ
5.ಸುನೀಲ್ ವಲ್ಯಾಪುರೆ-ಬಿಜೆಪಿ6. ಬಿ.ಕೆ.ಹರಿಪ್ರಸಾದ್-ಕಾಂಗ್ರೆಸ್
7.ತಿಪ್ಪಣ್ಣಪ್ಪ ಕಮಕನೂರು-ಕಾಂಗ್ರೆಸ್ನಾ
ನಾಮನಿರ್ದೇಶನ (ಜುಲೈ 21ಕ್ಕೆ ಅವಧಿ ಅಂತ್ಯ)
1.ಎಚ್.ವಿಶ್ವನಾಥ್-ಬಿಜೆಪಿ
2.ಭಾರತಿ ಶೆಟ್ಟಿ-ಬಿಜೆಪಿ
3. ಶಾಂತಾರಾಮ ಸಿದ್ದಿ-ಬಿಜೆಪಿ
4.ಡಾ. ತಳವಾರ ಸಾಬಣ್ಣ-ಬಿಜೆಪಿ
5. ರಮೇಶ್ ಬಾಬು-ಕಾಂಗ್ರೆಸ್
ಶಿಕ್ಷಕರ ಕ್ಷೇತ್ರ (ನವೆಂಬರ್ 11ಕ್ಕೆ ಅವಧಿ ಅಂತ್ಯ)
1. ಶಶಿಲ್ ಜಿ. ನಮೋಶಿ-ಬಿಜೆಪಿ
2. ಪುಟ್ಟಣ-ಕಾಂಗ್ರೆಸ್
ಪದವೀಧರ ಕ್ಷೇತ್ರ (ನವೆಂಬರ್ 11ಕ್ಕೆ ಅವಧಿ ಅಂತ್ಯ)
1. ಚಿದಾನಂದ ಎಂ. ಗೌಡ-ಬಿಜೆಪಿ
2. ಎಸ್.ವಿ.ಸಂಕನೂರು-ಬಿಜೆಪಿ













































