ಕಡಬ: ಕೃತಕವಾಗಿ ಚಿನ್ನದ ತೂಕ ಹೆಚ್ಚಿಸಿ ಅಡವಿರಿಸಲು ಯತ್ನ। ಇಬ್ಬರು ಆರೋಪಿಗಳ ವಶ

Picture of Savistara

Savistara

Bureau Report

ಕಡಬ ಪಟ್ಟಣದ ಬ್ಯಾಂಕ್ ಒಂದರಲ್ಲಿ ಕೃತಕವಾಗಿ ತೂಕ ಹೆಚ್ಚಿಸಲಾದ ಚಿನ್ನದ ಆಭರಣಗಳನ್ನು ಅಡವಿಟ್ಟು, ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಿ ಹಣ ಪಡೆಯಲು ಯತ್ನಿಸಿದ್ದ ಭಾರಿ ಸಂಚೊಂದನ್ನು ಕಡಬ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಅಕ್ರಮ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 3ರ ಶುಕ್ರವಾರ ಸಾಯಂಕಾಲದ ವೇಳೆ ಕಡಬ ಪೇಟೆಯ ಆಸುಪಾಸಿನಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಂತ ಸಂಶಯಾಸ್ಪದವಾಗಿ ಓಡಾಡುತ್ತಾ ವರ್ತಿಸುತ್ತಿರುವ ಬಗ್ಗೆ ಕಡಬ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಸನ್ನದ್ಧರಾದ ಕಡಬ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಸದರಿ ವ್ಯಕ್ತಿಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿ ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಅವರು ತಾವು ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆಯಲು ಬಂದಿರುವುದಾಗಿ ತಿಳಿಸಿದರು.

ಠಾಣೆಯಲ್ಲಿ ಪಿಎಸ್‌ಐ ಜಂಬುರಾಜ್ ಮಹಾಜನ್‌ ಅವರು ಆರೋಪಿಗಳನ್ನು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಅವರು ತಮ್ಮ ಬಳಿಯಿದ್ದ ಚಿನ್ನದಂತೆ ಕಾಣುವ ಆಭರಣಗಳನ್ನು ಹೊರಗೆ ತೆಗೆದಿದ್ದಾರೆ. ಅದನ್ನು ಪೊಲೀಸರು ಪರಿಶೀಲಿಸಿದಾಗ ಆಭರಣವು ಸಾಮಾನ್ಯ ಚಿನ್ನಕ್ಕಿಂತ ಅತ್ಯಂತ ಭಾರಿ ತೂಕ ಹೊಂದಿತ್ತು. ಆಭರಣಗಳ ಒಳಭಾಗಕ್ಕೆ ಯಾವುದೋ ಅನ್ಯ ಮೆಟಲ್ (ಲೋಹ) ಅನ್ನು ಸೇರಿಸಿ, ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾರ್ಪಡಿಸಿರುವುದು ಒಪ್ಪಿಕೊಂಡಿರುವುದಾಗಿ ಹೇಳಲಾಗಿದೆ.ತಾವು ಚಿನ್ನವನ್ನು ಅಡವಿಡಲು ಕಡಬದ ಬೇರೆ ಬೇರೆ ಬ್ಯಾಂಕುಗಳಿಗೆ ತೆರಳಿದ್ದರೂ, ಅಲ್ಲಿ ಬ್ಯಾಂಕ್‌ನವರು ಅನುಮಾನಗೊಂಡು ಚಿನ್ನವನ್ನು ಅಡ ಇಟ್ಟುಕೊಂಡಿರಲಿಲ್ಲ ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕಡಿಮೆ ಮೌಲ್ಯದ ಆಭರಣಗಳಿಗೆ ಮೆಟಲ್ ಬೆರೆಸಿ ತೂಕ ಹೆಚ್ಚಿಸಿ, ಬ್ಯಾಂಕ್ ಅಧಿಕಾರಿಗಳನ್ನು ನಂಬಿಸಿ ವಂಚನೆಯ ಮೂಲಕ ಹಣ ಮಾಡುವ ದುರುದ್ದೇಶದಿಂದಲೇ ಕಡಬಕ್ಕೆ ಬಂದಿರುವುದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬ್ಯಾಂಕ್‌ಗಳಿಗೆ ವಂಚಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026 ರಂತೆ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS-2023) ಪ್ರಮುಖ ಕಲಂ ಆಫ್ 318(4)( ವಂಚನೆ )} ಹಾಗೂ ಕಲಂ 62 ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

[t4b-ticker]
error: Content is protected !!