ಕುಕ್ಕೆ ದೇವಸ್ಥಾನಕ್ಕೆ ಸಂಬಂಧಪಟ್ಟ ಪುತ್ತೂರು ಬೊಳುವಾರು ಬಳಿ ಅಸ್ತಿ ವಿಚಾರ | ಧಾರ್ಮಿಕ ವಿಧಿ ವಿಧಾನ ಮೂಲಕ ದೇವರ ಸಾನಿಧ್ಯಕ್ಕೆ ಸಮರ್ಪಿಸಿದ ಜಾಗರಣ ಕಾರ್ಯಕರ್ತರು

Picture of Savistara

Savistara

Bureau Report

ಕುಕ್ಕೆ :ಪುತ್ತೂರಿನ ಹೃದಯ ಭಾಗ ಬೊಳುವಾರಲ್ಲಿ ಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಪಟ್ಟ 40 ಕೋಟಿಗೂ ಅಧಿಕ ಬೆಲೆಯ 1.57 ಎಕ್ರೆ ಜಾಗ ಹಲವಾರು ವರುಷಗಳಿಂದ ಅನ್ಯಮತೀಯರ ಸುಪರ್ದಿ ಯಲ್ಲಿತ್ತು ಅಲ್ಲದೆ ಗುಜುರಿ ವ್ಯಾಪಾರ ನಡೆಸುತ್ತಿದ್ದರು. ದೇವಾಲಯದ ವಿರುದ್ಧ ಕಾನೂನು ಹೋರಾಟದಲ್ಲಿ ತೊಡಗಿಕೊಂಡು ಆ ಜಾಗವನ್ನು ದೇವಾಲಯ ಸುಪರ್ದಿಗೆ ತೆಗೆದುಕೊಳ್ಳಲು ಅಡಚಣೆಯನ್ನು ಉಂಟುಮಾಡುತ್ತಿದ್ದರು. 3 ವರುಷಗಳ ಹಿಂದೆ ಅಂದಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯು ಪುತ್ತೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆಯೊಂದಿಗೆ ಸೇರಿಕೊಂಡು ಆಕ್ರಮಣಕೊಳಗಾಗಿದ್ದ ದೇವಾಲಯದ ಜಾಗವನ್ನು ವಶಪಡಿಸಿಕೊಂಡು ಅಲ್ಲಿದ್ದವರನ್ನು ತೆರವುಗೊಳಿಸಿ ಪೂಜಾ ಕೈಂಕರ್ಯವನ್ನು ಕೈಗೊಂಡು ಶುದ್ಧೀಕರಣಗೊಳಿಸಿದರು.ಅದಲ್ಲದೆ ನಿರಂತರವಾಗಿ ಪ್ರತಿವರ್ಷ ದೇವರ ಕಾರ್ಯಕ್ರಮ, ಪುತ್ತೂರು ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆ ನೆರವೇರುತ್ತಿತ್ತು,ಇತ್ತೀಚೆಗೆ ಹಿಂದೂ ಜಾಗರಣ ಸದಸ್ಯರು ಪ್ರಶ್ನೆ ಚಿಂತನದಲ್ಲಿ ಕೇಳಿದಾಗ ಆ ಜಾಗವನ್ನು ಧಾರ್ಮಿಕ ವಿಧಿವಿಧಾನದ ಒಪ್ಪಿಸ ಬೇಕೆಂದು ಕಂಡು ಬಂದಿತ್ತು ಅಂದು ತೆರವುಗೊಳಿಸಲು ಸೇರಿದ ಪುತ್ತೂರು ಜಿಲ್ಲಾ ಹಿಂದೂ ಜಾಗರಣ ಸದಸ್ಯರು ಸೇರಿಕೊಂಡು ಧಾರ್ಮಿಕ ವಿಧಿವಿಧಾನದ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಒಪ್ಪಿಸಲಾಯಿತು.ಆ ಸಂದರ್ಭದಲ್ಲಿ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ,ತೆರವುಗೊಳಿಸುವಲ್ಲಿ ಜಾಗರಣ ವೇದಿಕೆಯ ಜೊತೆ ನಿಂತಿದ್ದ ಕುಕ್ಕೆ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಸನ್ನ ದರ್ಬೆ, ಅಂದಿನ ಜಾಗರಣ ಜಿಲ್ಲಾ ಸಂಚಾಲಕರಾಗಿದ್ದ ನರಸಿಂಹ ಮಾಣಿ, ಅಜಿತ್ ಹೊಸಮನೆ, ಸಚಿನ್ ರೈ ಪಾಪೆಮಜಲ್, ಮಹೇಶ್ ಮಂಡೆಕೋಲು, ರಾಜೇಶ್ ಪಂಚೋಡಿ,ಮಾಜಿ ಸದಸ್ಯರಾದ ವನಜ ವಿ ಭಟ್, ಶೋಭ ಗಿರಿಧರ್, ಮನೋಜ್ ಕುಕ್ಕೆ ಮತ್ತಿತ ಪ್ರಮುಖರು ಉಪಸ್ಥಿತರಿದ್ದರು.

[t4b-ticker]
error: Content is protected !!